ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಒಂದೊಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಬಾಣಸಿಗರಾಗಿದ್ದು, ಸ್ವತಃ ತಾವೇ ಇಡ್ಲಿ ತಯಾರಿಸಿ ಕೊರೊನಾ ಸೋಂಕಿತರಿಗೆ ಪೂರೈಸುತ್ತಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಕೊರೊನಾ ಸೋಂಕಿತರಿಗಾಗಿ ರೇಣುಕಾಚಾರ್ಯ ಇಡ್ಲಿ ತಯಾರಿಸಿ ಹಂಚಿದರು. ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಸೋಂಕಿತರಿಗೆ, ಲಸಿಕೆ ಪಡೆಯುವವರಿಗೆ, ರೋಗಿಗಳ ಸಿಬ್ಬಂದಿಗೆ ಉಪಹಾರ ನೀಡುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.
ಇಂದು ಇಡ್ಲಿ, ಸಾಂಬರ್, ಚಟ್ನಿಯನ್ನು ಸೋಂಕಿತರಿಗೆ ನೀಡಿದ್ದು, ಹೊನ್ನಾಳಿಯ ತಮ್ಮ ಮನೆಯ ಆವರಣದಲ್ಲಿ ಇಡ್ಲಿ ರೆಡಿ ಮಾಡುವ ಕಾರ್ಯದಲ್ಲಿ ರೇಣುಕಾಚಾರ್ಯ ನಿರತರಾಗಿದ್ದರು.
ಇದನ್ನೂ ಓದಿ: ಹಸಿದ 500 ಮಂದಿಗೆ ಊಟ ನೀಡುತ್ತಿದೆ ಬೈಕ್ ರೈಡರ್ಸ್ ತಂಡ