ದಾವಣಗೆರೆ: ಜಮೀರ್ ಅಹಮ್ಮದ್, ಗುಜರಿ ಅಹಮ್ಮದ್ ಮೊದಲು ವಾಚ್‍ಮೆನ್ ಡ್ರೆಸ್ ಹಾಕ್ಕೊಂಡು, ಲಾಠಿ ಹಿಡಿದು, ಯಡಿಯೂರಪ್ಪ ಮನೆ ವಾಚ್‍ಮೆನ್ ಆಗು ಎಂದು ಏಕವಚನದಲ್ಲೇ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ಬಳಿ ಸಿದ್ದರಾಮಯ್ಯ ಹಾಲಿ ಸಿಎಂ ಅಲ್ಲ ಭಾವಿ ಸಿಎಂ ಎಂಬ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಮೊದಲು ಸಿಎಂ ಮನೆ ವಾಚ್‍ಮೆನ್ ಆಗು, ಆ ನಂತರ ಮುಂದಿನ ರಾಜಕೀಯದ ಬಗ್ಗೆ ಯೋಚನೆ ಮಾಡು.
ಮುಂದೆ ನೀನು ಶಾಸಕನಾಗುತ್ತೀಯಾ ಎಂದು ನಂಬಿಕೆ ಇಲ್ಲಾ. ಸಿದ್ದರಾಮಯ್ಯ ಅವರನ್ನು ಹೊಗಳಿದರೆ ಮುಂದೆ ಏನೋ ಅವಕಾಶ ಸಿಗುತ್ತದೇ ಎಂದು ಅವರನ್ನು ಕೊಂಡಾಡುತ್ತಿದ್ದಿಯಾ. ನೀನು ಕೋಮುವಾದಿ ಪಾದರಾಯನಪುರದಲ್ಲಿ ವಿಷ ಬೀಜ ಬಿತ್ತಿ ಗಲಾಟೆ ಮಾಡಿಸುವ ಕೆಲಸ ಮಾಡುತ್ತಿದ್ದಿಯಾ, ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೇ ರಾಜ್ಯದಲ್ಲಿ ಸಿಎಂ ಸೀಟ್ ಖಾಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಓದಿ:Karnataka Unlock 2.0: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?