ದಾವಣಗೆರೆ : ವರುಣಾ ಕ್ಷೇತ್ರಕ್ಕೆ ಯಾರೇ ಬಂದ್ರು ಗೆಲುವು ಸಿದ್ದರಾಮಯ್ಯ ಅವರದ್ದು, ಪೈಲ್ವಾನ್ ಕುಸ್ತಿ ಆಡಲು ಹೋದಾಗ ಕೈ ಹಿಡಿಯಲೇಬೇಕು. ಯಾರ್ ಬಂದ್ರು ಗೆಲುವು ಸಿದ್ದರಾಮಯ್ಯ ಅವರದ್ದು, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಎರಡು ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಲಿದ್ದಾರೆ ಎಂದು ಹರಿಹರ ಶಾಸಕ ಎಸ್ ರಾಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಿಹರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೊಡುವುದಾಗಿ ಹೈಕಮಾಂಡ್ ಹೇಳಿದೆ. ಸ್ಕ್ರೀನಿಂಗ್ ಕಮಿಟಿಯಲ್ಲೂ ನನ್ನ ಹೆಸರನ್ನು ದೆಹಲಿಗೆ ಕಳಿಸಲಾಗಿದೆ. ನನಗೆ ಟಿಕೆಟ್ ಬಗ್ಗೆ ಏನೂ ಅನುಮಾನ ಇಲ್ಲ. ಬಿ ಫಾರ್ಮ್ ಬಂದೇ ಬರುತ್ತದೆ ಎಂಬ ವಿಶ್ವಾಸ ಇದೆ. ನಾಳೆ ಇಲ್ಲ ಇದೇ ತಿಂಗಳು 05ರಂದು ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ರು. ಕೆಲ ಬೇರೆ ಕಾರಣಗಳಿವೆ ಟಿಕೆಟ್ ಘೋಷಣೆ ಸ್ವಲ್ಪ ತಡವಾಗಿದೆ. ಮೊದಲನೇ ಲಿಸ್ಟ್ನಲ್ಲಿ ಆಗಬೇಕಿತ್ತು. ಎರಡನೇ ಲಿಸ್ಟ್ನಲ್ಲಿ ಆಗಲಿದೆ ಎಂದು ಹೇಳಿದರು.
25 ಸಾವಿರ ಲೀಡ್‌ನಲ್ಲಿ ಗೆಲ್ಲುವೆ: ಇನ್ನು ತಮಗೆ ಟಿಕೆಟ್ ಅನ್ನು ಕೆಲ ಸ್ವಾಮೀಜಿಗಳು ತಪ್ಪಿಸುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಪ್ಪು ಸಂದೇಶ ಹೋಗಬಾರದು. ಹಾಗೇನು ಇಲ್ಲ. ಕೆಲ ಬೇರೆ ಕಾರಣಗಳಿವೆ. ಟಿಕೆಟ್ ಘೋಷಣೆ ಸ್ವಲ್ಪ ತಡವಾಗಿದೆ. ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ಮುಂದುವರೆಸಿದ್ದೇನೆ. ಜನ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆಕಾಂಕ್ಷಿಗಳು ಕೂಡ ನನ್ನ ಕಡೆ ಇದ್ದು, ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಯಾರಿಗೆ ಟಿಕೆಟ್ ಸಿಕ್ರು ಕೆಲಸ ಮಾಡುವುದಾಗಿ ಹೇಳಿದ್ದಾರೆ. ನಾನು ಈ ಬಾರಿ 25 ಸಾವಿರ ಲೀಡ್‌ನಲ್ಲಿ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ತ್ರಿಕೋನ ಸ್ಪರ್ಧೆ ಇದ್ರು ಗೆಲುವು ನಮ್ಮದೇ. ಇನ್ನು ಅಭಿವೃದ್ಧಿ ಆಗಿಲ್ಲ ಎಂದು ಜನ ಹೇಳ್ತಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚು ಅನುದಾನ ಕೊಟ್ಟಿಲ್ಲ. ಕೊಟ್ಟಿರುವ ಅನುದಾನದಲ್ಲಿ ಅಚ್ಚುಕಟ್ಟಾಗಿ ಏನು ಅಗತ್ಯ ಕೆಲಸ ಇತ್ತೋ ಅದನ್ನ ಮಾಡಿದ್ದೇವೆ. ಈ ಟೌನ್ನಲ್ಲಿ ಸುಮಾರು 30 ಕೋಟಿ ಕೆಲಸ ನಡೆಯುತ್ತಿದೆ. ಟೆಂಡರ್ ಆಗಿದೆ. ಕೆಲವು ಗುದ್ದಲಿ ಪೂಜೆ ಆಗಿವೆ ಎಂದು ಶಾಸಕ ರಾಮಪ್ಪ ಮಾಹಿತಿ ನೀಡಿದರು.
ಸಚಿವ ವಿ ಸೋಮಣ್ಣ ತಳ್ಳಿಕೊಂಡು ಬಂದ್ರು- ಎಸ್ ರಾಮಪ್ಪ.. ಈಗ ಕೆಲಸಗಳು ಚಾಲು ಆಗಿವೆ. ಇಲ್ಲಿ ರೋಡ್ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿವೆ. ಅಲ್ಲಿ 13. 50 ಕೋಟಿ ಹಾಕಿ ಮಾಡಿದ್ದೇವೆ. ಅನೇಕ ಕೆಲಸಗಳು ಆಗಿವೆ. ಆದರೆ ನಾವಂದುಕೊಂಡಷ್ಟು ಕೆಲಸ ಆಗಿಲ್ಲ. ಬಡವರಿಗೆ ಮನೆ ಕೊಡಬೇಕಾಗಿತ್ತು. ಎಲ್ಲ ಈಡೇರಿದ್ದರೂ ಕೂಡಾ ಬಿಜೆಪಿಯವರು ಸಹಿ ಮಾಡಲಿಲ್ಲ. ಮಾಡುತ್ತೇವೆ ಎಂದು ಹೇಳಿ ಸಚಿವ ವಿ ಸೋಮಣ್ಣ ತಳ್ಳಿಕೊಂಡು ಬಂದ್ರು. ಹೀಗಾಗಿ ಮನೆಗಳದ್ದು ಸ್ವಲ್ಪ ಪೆಂಡಿಂಗ್ ಇದೆ. ಇದರ ಬಗ್ಗೆ ನಂಗೆ ಸ್ವಲ್ಪ ಬೇಜಾರ್ ಇದೆ. ಏಕೆಂದರೆ ಬಡವರಿಗೆ ಮನೆ ಸಿಗಬೇಕಿತ್ತು, ಸಿಕ್ಕಿಲ್ಲ. ನಾವು ಮುಂಚೆಯೇ ಹೇಳಿದ್ದೇವೆ. ಬಿಜೆಪಿ ಸರ್ಕಾರ ಬಂದಿರುವುದರಿಂದ ಕೆಲಸ ಆಗಿಲ್ಲ. ಬರುವ ದಿನಗಳಲ್ಲಿ ಫಸ್ಟ್ ಬಡವರಿಗೆ ಮನೆ ಕೊಟ್ಟು ಮುಂದಿನ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಮೋದಿ ಅವರು ರಾಜ್ಯಕ್ಕೆ ಬರಲು ಚುನಾವಣಾ ಆಯೋಗ ಅನುಮತಿ ನೀಡಿದೆಯಾ : ಸಿದ್ದರಾಮಯ್ಯ ಪ್ರಶ್ನೆ