ETV Bharat / state

BJP-RSS ತಾಲಿಬಾನಿಗಳಲ್ಲ.. ನಿಜವಾದ ತಾಲಿಬಾನಿಗಳು ಕಾಂಗ್ರೆಸ್- ಜೆಡಿಎಸ್​​​ನವರು.. ಎಂ ಪಿ ರೇಣುಕಾಚಾರ್ಯ

ಸಿದ್ದರಾಮಯ್ಯ, ಡಿಕೆಶಿ, ಹೆಚ್‌ಡಿಕೆ ಒಂದು ಬಾರಿ ಸಂಘದ ಕಚೇರಿಗೆ ಬನ್ನಿ. ಬಂದು ನಮಸ್ತೆ ಸದಾ ವತ್ಸಲೇ ಹಾಡು ಹೇಳಿ ಆರ್​​ಎಸ್​​ಎಸ್​​ ಬಗ್ಗೆ ಆಗ ತಿಳಿಯುತ್ತೆ. ಹಿಂದುತ್ವ, ಆರ್​​ಎಸ್​​ಎಸ್ ನಮ್ಮ ಹೆಮ್ಮೆ, ಇವರೆಲ್ಲ ದೇಶದ್ರೋಹಿಗಳು, ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ..

ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ

author img

By

Published : Oct 10, 2021, 9:32 PM IST

ದಾವಣಗೆರೆ : ಬಿಜೆಪಿ-ಆರ್​ಎಸ್​​ಎಸ್​​ ತಾಲಿಬಾನಿಗಳಲ್ಲ. ಕಾಂಗ್ರೆಸ್-ಜೆಡಿಎಸ್​​​ನವರೇ ನಿಜವಾದ ತಾಲಿಬಾನಿಗಳು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌-ಜೆಡಿಎಸ್‌ ನಾಯಕರ ವಿರುದ್ಧ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿರುವುದು..

ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮಾತನಾಡಿದ ಅವರು, ಎರಡು ಪಕ್ಷದ ನಾಯಕರು ಎಲ್ಲಾ ವಿಚಾರದಲ್ಲೂ ಸರ್ವಾಧಿಕಾರಿಗಳು. ಸದ್ದಾಂ ಹುಸೇನ್​​ಗಳು ಇದ್ದಂತೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ, ಡಿಕೆಶಿ, ಹೆಚ್‌ಡಿಕೆ ಒಂದು ಬಾರಿ ಸಂಘದ ಕಚೇರಿಗೆ ಬನ್ನಿ. ಬಂದು ನಮಸ್ತೆ ಸದಾ ವತ್ಸಲೇ ಹಾಡು ಹೇಳಿ ಆರ್​​ಎಸ್​​ಎಸ್​​ ಬಗ್ಗೆ ಆಗ ತಿಳಿಯುತ್ತೆ. ಹಿಂದುತ್ವ, ಆರ್​​ಎಸ್​​ಎಸ್ ನಮ್ಮ ಹೆಮ್ಮೆ, ಇವರೆಲ್ಲ ದೇಶದ್ರೋಹಿಗಳು, ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಉಪಚುನಾವಣೆ ನಂತರ ಸಂಪುಟ ಪುನಾರಚನೆ?

ಉಪಚುನಾವಣೆ ನಂತರ ಸಂಪುಟ ಪುನಾರಚನೆಯಾಗುತ್ತೆ ಎಂದು ರೇಣುಕಾಚಾರ್ಯ ಹೇಳಿದರು. ನನಗೆ ಮಂತ್ರಿ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು, ಸದ್ಯಕ್ಕೆ ಉಪಚುನಾವಣೆ ಇದೆ, ಉಪ ಚುನಾವಣೆ ಗೆದ್ದ ಮೇಲೆ ಉಳಿದ 4 ಸಚಿವ ಸ್ಥಾನ ಭರ್ತಿ ಮಾಡಬೇಕೋ ಅಥವಾ ಸಂಪುಟ ಪುನಾರಚನೆ ಮಾಡಬೇಕು ಎನ್ನುವುದು ಸಿಎಂ ಪರಮಾಧಿಕಾರಕ್ಕೆ ಬಿಟ್ಟಿದ್ದು. ವರಿಷ್ಠರೊಂದಿಗೆ ಚರ್ಚೆ ಮಾಡಿ ಸಿಎಂ ನಿರ್ಧಾರ ಮಾಡ್ತಾರೆ, ಆ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಯಡಿಯೂರಪ್ಪ ತಂದೆ ಸಮಾನ, ಸಿಎಂ ಬೊಮ್ಮಾಯಿಗೆ ಅಣ್ಣ ಅಂತೀನಿ..

ಸಿಎಂ ಬೊಮ್ಮಾಯಿ ತಮ್ಮ ಕ್ಷೇತ್ರಕ್ಕೆ ಬರುತ್ತಿರೋ ಗುಟ್ಟು ರೇಣುಕಾಚಾರ್ಯ ರಟ್ಟು ಮಾಡಿದರು. ಯಡಿಯೂರಪ್ಪ ತಂದೆ ಸಮಾನ, ಸಿಎಂ ಬೊಮ್ಮಾಯಿ ಅವರಿಗೆ ಅಣ್ಣ ಅಂತೀನಿ, ಅವರಿಗೆ ಬೊಮ್ಮಾಯಿ ಅಂತಾ ಕರೆಯಲ್ಲ. ಅವರದು ನಂದು ಸಹೋದರ ಸಂಬಂಧ. ಹೀಗಾಗಿ, ನಮ್ಮ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಸಚಿವ ಸ್ಥಾನ ಸಿಗದಿರೋ ಬಗ್ಗೆ ತೃಪ್ತನು ಅಲ್ಲ, ಅತೃಪ್ತನೂ ಅಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.