ETV Bharat / state

ಶಿಥಿಲಾವಸ್ಥೆ ತಲುಪಿದೆ ಆರು ದಶಕದ ಭದ್ರಾ ಕಾಲುವೆ: ಕೆನಾಲ್​ ಒಡೆದ್ರೆ 44 ಸಾವಿರ ಹೆಕ್ಟೇರ್ ಭೂಮಿಗಿರಲ್ಲ ನೀರು

ಭದ್ರಾ ನಾಲೆಗಳ ಸೇತುವೆಗಳ ಪುನರ್​ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ ಎಂದು ಶಾಸಕ ಕೆ ಎಸ್ ಬಸವಂತಪ್ಪ ಹೇಳಿದರು.

Etv Bharatmla-ks-basavantappa-reaction-on-bhadra-canal-dilapidated
ಮಾಯಕೊಂಡ ವ್ಯಾಪ್ತಿಯ ಬಹುತೇಕ ಭದ್ರಾ ನಾಲೆಗಳು ಶಿಥಿಲಗೊಂಡಿವೆ: ಶಾಸಕ ಕೆ ಎಸ್ ಬಸವಂತಪ್ಪ
author img

By ETV Bharat Karnataka Team

Published : Jan 2, 2024, 10:31 PM IST

ಶಿಥಿಲಾವಸ್ಥೆಗೆ ತಲುಪಿದ ಭದ್ರಾ ಕಾಲುವೆ

ದಾವಣಗೆರೆ: ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣವಾಗಿ ಸುಮಾರು 60 ರಿಂದ 70 ವರ್ಷ ಕಳೆದಿದೆ. ಸದ್ಯ ಭದ್ರಾದ ಬಹುತೇಕ ನಾಲೆಗಳು ಶಿಥಿಲಗೊಂಡಿದ್ದು, ಕುಸಿದು ಬಿಳುವ ಹಂತಕ್ಕೆ ತಲುಪಿವೆ. ಕೆಲ ಸೇತುವೆಗಳ ಕೆಳಗೆ ಜೋಡಿಸಿದ ಕಲ್ಲುಗಳು ಈಗಾಗಲೇ ಕುಸಿದು ಬಿದ್ದಿವೆ. ಈ ಹಿನ್ನೆಲೆ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭದ್ರಾ ನಾಲೆ ಮತ್ತು ಸೇತುವೆಗಳನ್ನು ಪರಿಶೀಲಿಸಿ, ದುರಸ್ತಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.

ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ, "ಭದ್ರಾ ನಾಲೆ ವ್ಯಾಪ್ತಿಯಲ್ಲಿ ಬರುವ ಕಳೂರು, ಕುರ್ಕಿ, ನಲ್ಕುಂದ ಗ್ರಾಮ ಸೇರಿದಂತೆ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ನಾಲೆಗೆ ನಿರ್ಮಿಸಿರುವ ಸೇತುವೆಗಳು ಹಾಳಾಗಿವೆ. ಕಳೆದ ವರ್ಷ ರೈತರು ಬಿತ್ತನೆ ಮಾಡಿ, ಗದ್ದೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ನಲ್ಕುಂದ ನಾಲೆಯ ಸೇತುವೆ ಕುಸಿದಿದ್ದರಿಂದ ನೀರು ಬಂದ್​ ಆಗಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು" ಎಂದರು.

"ನಾವು ಈಗ ವೀಕ್ಷಣೆ ಮಾಡಿಕೊಂಡು ಬಂದ ಕಾಲುವೆ ಮತ್ತು ಸೇತುವೆಗಳನ್ನು ಭದ್ರಾ ನಾಲೆ ನಿರ್ಮಿಸಿದ ಸಮಯದಲ್ಲಿ ಕಟ್ಟಿರುವುದು. ಅವು ಸದ್ಯ ಶಿಥಿಲಗೊಂಡಿವೆ. ಇದರಿಂದ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ. ಮಳೆಗಾಲದಲ್ಲಿ ಭದ್ರಾ ನಾಲೆಗೆ ನೀರು ಬಂದಾಗ, ನೀರಿನ ರಭಸಕ್ಕೆ ನಾಲೆಗಳ ಸೇತುವೆಗಳು ಕುಸಿಯುತ್ತವೆ. ನಾವು ಇಂದು ವೀಕ್ಷಣೆ ಮಾಡಿದ ನಾಲೆಗಳ ಸೇತುವೆಗಳು ಬಹುತೇಕ ಕುಸಿದಿವೆ. ಕೊಡಲೇ ಅವುಗಳನ್ನು ಪುನರ್​ ನಿರ್ಮಾಣ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಮುಂದೆ ರೈತರು ಬಿತ್ತನೆ ಮಾಡಿ, ಫಸಲು ಪಡೆಯುವ ಸಂದರ್ಭದಲ್ಲಿ ನಾಲೆಗಳ ಸೇತುವೆಗಳು ಕುಸಿದರೆ ರೈತರಿಗೆ ಸಮಸ್ಯೆಯಾಗುತ್ತದೆ ಮತ್ತು ಸಾವಿರಾರು ಕೋಟಿ ನಷ್ಟ ಉಂಟಾಗುತ್ತದೆ" ಎಂದು ಹೇಳಿದರು.

"ಈಗ 15 ರಿಂದ 20 ಕೋಟಿ ವೆಚ್ಚವಾಗುವ ಕಾಮಗಾರಿಗೆ, ಸೇತುವೆ ಕುಸಿದರೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ನಾವು ಈಗಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ಇಂಜಿನಿಯರ್​ ಅವರೊಂದಿಗೆ ನಾಲೆ ಮತ್ತು ಸೇತುವೆಗಳನ್ನು ವೀಕ್ಷಣೆ ಮಾಡಿದ್ದೇನೆ. ಕೊಡಲೇ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ ಕೆ ಶಿವಕುಮಾತ್​ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವ ಗಮನಕ್ಕೆ ತಂದು ಸೇತುವೆಗಳ ಪುನರ್​ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ಈ ರೀತಿಯ ಕ್ರಮ ಕೈಗೊಂಡರೆ ಮಾತ್ರ ರೈತರ ಹಿತ ಕಾಪಾಡಿದಂತಾಗುತ್ತದೆ" ಎಂದರು.

"ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಸಿದ್ಧರಿದ್ದಾರೆ. ಮುಂದಿನ ಬಜೆಟ್​ನಲ್ಲಿ ಅನುದಾನ ನೀಡುತ್ತಾರೆ ಎಂಬ ನಿರೀಕ್ಷೆ ಇದೆ" ಎಂದು ತಿಳಿಸಿದರು.

ಜಲಸಂಪನ್ಮೂಲ ಇಲಾಖೆಯ ಎಇಇ ಮನೋಜ್, "ಈಗ ಇಲ್ಲಿ ನಿರ್ಮಾಣವಾಗಿರುವ ನಾಲೆಗಳನ್ನು ಮತ್ತು ಸೇತುವೆಗಳನ್ನು 1955 ರಿಂದ 1960 ಮಧ್ಯದಲ್ಲಿ ಕಲ್ಲಿನಿಂದ ಕಟ್ಟಿರುವುದು. ನಿರ್ವಹಣೆ ಇಲ್ಲದೇ ಇರುವುದರಿಂದ ಕುಸಿಯುತ್ತಿವೆ. ಹೆಎಲ್​ಸಿ ಕಾಲುವೆಯಿಂದ ಸುಮಾರು 44 ಸಾವಿರ ಹೆಕ್ಟೆರ್ ಜಮೀನಿಗೆ ನೀರು ಹರಿಯುತ್ತದೆ. ಈ ಕಾಲುವೆ ಕುಸಿದು ಬಿದ್ದರೆ 44 ಸಾವಿರ ಹೆಕ್ಟೆರ್ ಜಮೀನಿಗೆ ನೀರಿ ಇಲ್ಲದಂತಾಗುತ್ತದೆ" ಎಂದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ : ಶಾಸಕ ಬಸವಂತಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.