ETV Bharat / state

ಶಾಲೆಗೆ ಹೋಗಿದ್ದ ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ! - davanagere crime news

ಈಕೆ ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಅಬ್ದುಲ್ ವಹೀಮ್ ಎಂಬುವರ ಪುತ್ರಿ. ಈ ಸಂಬಂಧ ಕಾಣೆಯಾಗಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು‌.

Missing girl found in goa
ಶಾಲೆಗೆ ಹೋಗಿದ್ದ ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯ
author img

By

Published : Feb 26, 2021, 2:04 PM IST

ದಾವಣಗೆರೆ: ಶಾಲೆಗೆ ಹೋದ ಬಾಲಕಿ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದ್ದು, ಗೋವಾದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.

ಕಳೆದ ಕೆಲ ದಿನಗಳ ಹಿಂದೆ ಅಮ್ಮನೊಂದಿಗೆ ಜಗಳವಾಡಿ ಬಸ್​ ಹತ್ತಿ ಗೋವಾಕ್ಕೆ ಹೋಗಿದ್ದಳು. ಈ ಹಿನ್ನೆಲೆ ಬಾಲಕಿ ಕಿಡ್ನಾಪ್​ ಆಗಿರಬಹುದೆಂದು ಪಾಲಕರು ಶಂಕಿಸಿದ್ದರು.

ಆಯಿಷ್ಮಾ ಜಬ್ರೀನ್ (13) ನಾಪತ್ತೆಯಾಗಿದ್ದ ವಿದ್ಯಾರ್ಥಿನಿ. ದಾವಣಗೆರೆ ನಗರದ ಪುಷ್ಪಾ ಮಹಾಲಿಂಗಪ್ಪ ಶಾಲೆಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೇ 24 ರಂದು ಮಧ್ಯಾಹ್ನ ಶಾಲೆಯಿಂದ ಹೊರ ಬಂದ ಬಳಿಕ ನಾಪತ್ತೆ‌ ಆಗಿದ್ದಳು.

ಈಕೆ ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಅಬ್ದುಲ್ ವಹೀಮ್ ಎಂಬುವರ ಪುತ್ರಿ. ಈ ಸಂಬಂಧ ಕಾಣೆಯಾಗಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು‌.

ಗೋವಾ ಬಸ್ ನಿಲ್ದಾಣದಲ್ಲಿ ಅಳುತ್ತಾ ನಿಂತಿದ್ದ ವಿದ್ಯಾರ್ಥಿನಿ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಗೋವಾ ಪೊಲೀಸ್ ವಶದಲ್ಲಿದ್ದ ವಿದ್ಯಾರ್ಥಿಯನ್ನ ಪೋಷಕರು ಕರೆ ತಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.