ETV Bharat / state

ರಿವಾಲ್ವಾರ್ ಸ್ವಚ್ಛ ಮಾಡುವಾಗ ಮಿಸ್ ಫೈಯರ್: ಹಣೆಗೆ ತಗುಲಿದ ಗುಂಡು

ಪರವಾನಾಗಿ ಹೊಂದಿದ್ದ ರಿವಾಲ್ವಾರ್ ಅನ್ನು ಸ್ವಚ್ಛಗೊಳಿಸುವ ವೇಳೆ ಮಿಸ್​ ಫೈರ್​ ಆಗಿ ಗುಂಡು ಹಣಗೆ ತಾಕಿರುವ ಘಟನೆ ನಡೆದಿದೆ.

ರೀವಾಲ್​ವಾರ್ ಸ್ವಚ್ಛ ಮಾಡುವಾಗ ಮಿಸ್ ಫೈಯರ್
ರೀವಾಲ್​ವಾರ್ ಸ್ವಚ್ಛ ಮಾಡುವಾಗ ಮಿಸ್ ಫೈಯರ್
author img

By

Published : Mar 2, 2023, 9:13 PM IST

ದಾವಣಗೆರೆ: ರಿವಾಲ್ವಾರ್ ಸ್ವಚ್ಛ ಮಾಡುವ ವೇಳೆ ಮಿಸ್ ಫೈಯರ್ ಆಗಿರುವ ಘಟನೆ ಇಲ್ಲಿಯ ಎಂ.ಸಿ.ಸಿ ಬ್ಲಾಕ್​ನಲ್ಲಿ ಕಳೆದ ದಿನ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಂಜುನಾಥ್ ವರ್ಣೇಕರ್ ಎಂಬುವರ ಹಣೆಗೆ ಗುಂಡು ತಗುಲಿದ್ದು, ಹಣೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಮಂಜುನಾಥ್ ಪಾರಾಗಿದ್ದಾರೆ. ಮಂಜುನಾಥ್ ವರ್ಣೇಕರ್ ಅವರು ತನ್ನ ಲೈಸನ್ಸ್ ಹೊಂದಿದ್ದ ರಿವಾಲ್ವಾರ್ ಸ್ವಚ್ಛ ಮಾಡುವಾಗ ಈ ಅವಘಡ ಜರುಗಿದೆ. ಗುಂಡು ತಗುಲಿದ ಮಂಜುನಾಥ್​​ಗೆ ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸ್ವಲ್ಪ ಮಟ್ಟಿಗೆ ಹಣೆಗೆ ಹೊಕ್ಕಿದ್ದ ಗುಂಡನ್ನು ವೈದ್ಯರು ಹೊರ ತೆಗೆದಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಪ್ರಾಣಾಪಾಯದಿಂದ ಪಾರಾಗಿರೋ ಮಂಜುನಾಥ್​ ಅವರಿಗೆ ಜಾಗೃತಿಯಿಂದ ಲೈಸನ್ಸ್​ ಗನ್​ಗಳನ್ನ ಶುಚಿಗೊಳಿಸುವಂತೆ ಎಸ್ಪಿ ರಿಷ್ಯಂತ ಸೂಚನೆ ನೀಡಿದ್ದಾರೆ.

ತಪ್ಪಿದ ದುರಂತ: ಕಳೆದ ದಿನ ಮಂಜುನಾಥ್ ಅವರು ತಮ್ಮ ರಿವಾಲ್ವಾರ್ ಅ​ನ್ನು ಸ್ವಚ್ಛಗೊಳಿಸಲು ಕೂತಿದ್ದರು. ಸ್ವಚ್ಛ ಮಾಡುವ ವೇಳೆ ಮಿಸ್ ಫೈರ್ ಆಗಿದೆ. ಸದ್ಯ ಮಂಜುನಾಥ್ ಅವರ ಹಣೆಗೆ ಸ್ವಲ್ಪಮಟ್ಟಿಗೆ ಗುಂಡು ತಗುಲಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ರಿವಾಲ್ ವಾರ್ ಸ್ವಚ್ಛಗೊಳಿಸುವ ವೇಳೆ ಮಂಜುನಾಥ್ ಅವರ ಅಕ್ಕ ಪಕ್ಕ ಯಾರೂ ಇಲ್ಲದೇ ಇರುವುದರಿಂದ ದುರಂತ ತಪ್ಪಿದೆ. ಎಸ್ಪಿ ಸಿಬಿ ರಿಷ್ಯಂತ್ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಯಾರೇ ತಮ್ಮ ಲೈಸೆನ್ಸ್ ಹೊಂದಿರುವ ಬಂದೂಕು, ರಿವಾಲ್ವಾರ್​ಗಳ‌ನ್ನು ಬಹಳ ಜಾಗೃತಕರಾಗಿ ಸ್ವಚ್ಛ ಮಾಡ್ಬೇಕಾಗಿದೆ ಎಂದು ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ನಡು ರಸ್ತೆಯಲ್ಲಿ ಅಡುಗೆ ಮಾಡಿ ಗ್ಯಾಸ್ ಬೆಲೆ ಏರಿಕೆ ಖಂಡಿಸಿದ ಮಹಿಳೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.