ETV Bharat / state

ಸಿಎಂ ಕೂಡ ಕಣ್ಣೀರು ಹಾಕುತ್ತಿದ್ದಾರೆ.. ಗೂಂಡಾಗಳನ್ನು ಎನ್​ಕೌಂಟರ್ ಮಾಡಬೇಕು: ರೇಣುಕಾಚಾರ್ಯ - ಸಿಎಂ ಕಣ್ಣೀರು ಹಾಕುತ್ತಿದ್ದಾರೆ ಎಂದ ರೇಣುಕಾಚಾರ್ಯ

ನಮ್ಮ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರ ರಕ್ಷಣೆಯಾಗುತ್ತಿಲ್ಲ ಬೇಸರ ಇದೆ- ನಾನು ರಾಜೀನಾಮೆ ನೀಡುತ್ತೇವೆ ಎಂದಾಗ ಸಿಎಂ, ಸಂಘ ಪರಿವಾರದವರು ನನ್ನನ್ನು ತಡೆದರು- ರೇಣುಕಾಚಾರ್ಯ ಹೇಳಿಕೆ

minority-goons-have-to-be-encountered-says-bjp-mla-mp-renukacharya
ಈ ಘಟನೆ ನೆನೆದು ಸಿಎಂ ಕಣ್ಣೀರು ಹಾಕುತ್ತಿದ್ದಾರೆ, ಅಲ್ಪಸಂಖ್ಯಾತ ಗೂಂಡಾಗಳ ಎನ್​ಕೌಂಟರ್ ಮಾಡಬೇಕು: ರೇಣುಕಾಚಾರ್ಯ
author img

By

Published : Jul 30, 2022, 6:37 PM IST

ದಾವಣಗೆರೆ: ಅಲ್ಪಸಂಖ್ಯಾತ ಸಮುದಾದಯದವರಲ್ಲಿ ಕೆಲ ಗೂಂಡಾಗಳ ಅಟ್ಟಹಾಸ ಹೆಚ್ಚಾಗಿದೆ. ಅವರನ್ನು ಎನ್​ಕೌಂಟರ್ ಮಾಡಬೇಕು. ಅಷ್ಟೇ ಅಲ್ಲ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಎಂದು ಹೊನ್ನಾಳಿ ಶಾಸಕರೂ ಆಗಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕರ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿ ಇದ್ದು ಏನ್ ಸಾರ್ಥಕ?. ಅವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ. ಗೃಹ ಸಚಿವರ ವೈಫಲ್ಯದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ ಎಂದರು.

ಮುಖ್ಯಮಂತ್ರಿ ರಾಜೀನಾಮೆ ಕೇಳಲು ಸಿದ್ದರಾಮಯ್ಯನವರಿಗೆ ಯಾವ ನೈತಿಕ ಹಕ್ಕಿದೆ. ನಿಮ್ಮ ಅಧಿಕಾರ ಇದ್ದಾಗ 30ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ಆಯ್ತು, ಆಗ ನೀವು ರಾಜೀನಾಮೆ ನೀಡಿದ್ರಾ?. ಸಮಾಜಘಾತುಕರ ವಿರುದ್ಧದ ಪ್ರಕರಣಗಳನ್ನು ಸದನದಲ್ಲಿಟ್ಟು ವಾಪಸ್​ ಪಡೆದವರು ನೀವು. ಆರೋಪ-ಪ್ರತ್ಯಾರೋಪ ಮಾಡುವ ಬದಲು ಹಿಂದೂಗಳ ಜೊತೆ ನಾವಿದ್ದೇವೆ. ಹತ್ಯೆ ಮಾಡಿದವರನ್ನು ಎನ್​ಕೌಂಟರ್ ಮಾಡಲು ಹೇಳಿ ನೋಡೋಣ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ಈ ಘಟನೆ ನೆನೆದು ಸಿಎಂ ಕಣ್ಣೀರು ಹಾಕುತ್ತಿದ್ದಾರೆ, ಅಲ್ಪಸಂಖ್ಯಾತ ಗೂಂಡಾಗಳ ಎನ್​ಕೌಂಟರ್ ಮಾಡಬೇಕು: ರೇಣುಕಾಚಾರ್ಯ

ಹಿಂದೂ ಯುವಕರ ಕ್ಷಮೆಯಾಚನೆ: ನಾವು ಹಿಂದೂ ಯುವಕರಿಗೆ ಮನವಿ ಹಾಗೂ ಕ್ಷಮೆಯಾಚಿಸುತ್ತೇವೆ. ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಪ್ರವೀಣ್​ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಸಿಎಂಯವರಿಗೆ ಈ ಪ್ರಕರಣದಿಂದ ಆಘಾತವಾಗಿದೆ ನೋವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ನಮ್ಮ ಜನರನ್ನು ರಕ್ಷಣೆ ಮಾಡಲಾಗುತ್ತಿಲ್ಲ ಎಂದು ನೋವು ಇದೆ ಎಂದು ಹೇಳಿದರು.

ಯುವಕರು ಹಾಗೂ ಮುಖಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯ ಕಳೆದುಕೊಂಡರೇ ನಾವು ಬಲಿಪಶುಗಳಾಗುತ್ತೇವೆ. ಹರ್ಷ, ಪ್ರವೀಣ್ ಕೊಲೆಯಂತೆ ನಾಳೆ ನಾವು ಆಗಬಹುದು ಎಂದು ಭಯಭೀತರಾಗಿದ್ದಾರೆ. ನಿಮ್ಮ ಜೊತೆ ನಮ್ಮ ಸಂಘಟನೆ, ಸರ್ಕಾರ ಇದೆ. ಕಠಿಣ ಕ್ರಮ ಜರಿಗಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ನಮಗೆ ರಕ್ಷಣೆ ನೀಡುತ್ತದೆ ಎಂದರು.

ಸಿಎಂ ಕಣ್ಣೀರು ಹಾಕುತ್ತಿದ್ದಾರೆ: ಸಿದ್ದರಾಮಯ್ಯ ಸರ್ಕಾರ ಇದ್ದಾಗ 25ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆಯಾಗಿತ್ತು, ಅ ಸಂದರ್ಭದಲ್ಲಿ ಅಲ್ಪಸಂಖ್ಯಾತ ಗೂಂಡಾಗಳು, ಸಮಾಜದ ಘಾತುಕ ಶಕ್ತಿ, ಭಯೋತ್ಪಾದಕರು ನಮ್ಮ ಹಿಂದೂಗಳ ಹತ್ಯೆ ಮಾಡಿದರು. ಅಂದು ಹಾಕಿದಂತಹ ಕೇಸ್​ಗಳನ್ನು ಅಂದಿನ ಸರ್ಕಾರ ವಾಪಸ್​ ಪಡೆಯಿತು. ಹೀಗಾಗಿ ಕೇಸ್ ಹಾಕ್ತಾರೆ ವಾಪಸ್​ ಪಡೆಯುತ್ತಾರೆ ಎಂದು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಸಿಎಂ ಅವರು ಈ ಘಟನೆ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರ ರಕ್ಷಣೆಯಾಗುತ್ತಿಲ್ಲ. ನಾನು ರಾಜೀನಾಮೆ ನೀಡುತ್ತೇವೆ ಎಂದಾಗ ಸಿಎಂ, ಸಂಘ ಪರಿವಾರದವರು ಕರೆದು ಮಾತನಾಡಿದರು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಸರ್ಕಾರ ಜೊತೆ ನಿಲ್ಲಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮ: ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಕೇವಲ ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಅದನ್ನು ಕಾರ್ಯರೂಪಕ್ಕೆ ತರಬೇಕು. ತೆಲಂಗಾಣದಲ್ಲಿ ಅತ್ಯಾಚಾರಿಗಳನ್ನು ಹೇಗೆ ಎನ್​ ಕೌಂಟರ್ ಮಾಡಲಾಗಿತ್ತೋ, ಅದೇ ರೀತಿ ಇಲ್ಲಿನ ಕೊಲೆಗಡುಕರನ್ನು ಎನ್​ಕೌಂಟರ್ ಮಾಡಬೇಕೆಂದು ರೇಣುಕಾಚಾರ್ಯ ಒತ್ತಾಯಿಸಿದರು.

ಹರ್ಷನನ್ನ ಕೊಲೆ ಮಾಡಿದವರು ಜೈಲಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಯಾರೋ ಅಧಿಕಾರಿ ಇದಕ್ಕೆ ಅವಕಾಶ ನೀಡಿದ್ದಕ್ಕೆ ಇಡೀ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಇಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಹಿಂದೂ ಯುವಕರು ಬಳೆ ತೊಟ್ಟಿಕೊಂಡಿಲ್ಲ. ನಿಮ್ಮ ಜೊತೆ ನಾವು ಇದ್ದೇವೆ, ಯುವ ಮೋರ್ಚಾದ ಎಲ್ಲರೂ ರಾಜೀನಾಮೆ ವಾಪಸ್​ ಪಡೆಯಬೇಕೆಂದು ರೇಣುಕಾಚಾರ್ಯ ಮನವಿ ಮಾಡಿದರು.

ಇದನ್ನೂ ಓದಿ: ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.