ETV Bharat / state

ವಸತಿಗಳ ಕಳಪೆ ಕಾಮಗಾರಿ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಸೋಮಣ್ಣ

ಕಾಳಿದಾಸ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿಯ ಗೃಹ ಕಾಮಗಾರಿಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಫಲಾನುಭವಿಗಳ ದೂರನ್ನು ಆಲಿಸಿದ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಬೆವರಿಳಿಸಿದರು.

Minister V. Somanna
ಅಧಿಕಾರಿಗಳ ವಿರುದ್ದ ಸಚಿವ ಸೋಮಣ್ಣ ಆಕ್ರೊಶ
author img

By

Published : Jun 16, 2020, 4:30 AM IST

ಹರಿಹರ: ಜಿಲ್ಲಾ ಕೊಳಚೆ ನಿರ್ಮೂಲನಾ ಮಂಡಳಿ ಸಿಬ್ಬಂದಿಗಳಿಗೆ ವಸತಿ ಸಚಿವ ವಿ. ಸೋಮಣ್ಣ ತರಾಟೆ ತೆಗೆದುಕೊಂಡ ಘಟನೆ ಕಾಳಿದಾಸ ನಗರದಲ್ಲಿ ನಡೆದಿದೆ.

ಕಾಳಿದಾಸ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿಯ ಗೃಹ ಕಾಮಗಾರಿಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಫಲಾನುಭವಿಗಳ ದೂರನ್ನು ಆಲಿಸಿದ ಅವರು ಅಧಿಕಾರಿಗಳಿಗೆ ಬೆವರಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತಿ ನಂತರವು ಇಲಾಖೆಯಲ್ಲಿ ಕೆಲಸದಲ್ಲಿ ತೊಡಗಿರುವ ಸಹಾಯಕ ಇಂಜಿನಿಯರ್‌ಗೆ ತರಾಟೆ ತೆಗದುಕೊಂಡು 10 ರೂ. ಬಿಲ್ಲನ್ನು 100 ರೂ.ಗೆ ಬರೆಯುವುದು, ಬಡವರ ಹೆಸರಲ್ಲಿ ಹೇಸಿಗೆ ತಿಂದು, ಮಾಡಬಾರದನ್ನು ಮಾಡಿರುವುದು ನನಗೆ ತಿಳಿದಿದೆ. ಈ ವ್ಯಕ್ತಿ ಮುಂದೆ ಇಲ್ಲಿ ಕಾಣಿಸಿಕೊಂಡರೆ ಕೂಡಲೇ ಎಫ್‌ಐಆರ್ ದಾಖಾಲಿಸಿ ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

ಅಲ್ಲದೇ ಈ ಕಾಮಗಾರಿಯನ್ನು ಗಮನಿಸುತ್ತಿರುವ ಮಹಿಳಾಧಿಕಾರಿಯನ್ನು ಬದಲಿಸಿ ಬೇರೆ ಅಧಿಕಾರಿಗಳನ್ನು ನೇಮಿಸಿಲು ಜಿಲ್ಲಾ ಕೊಳಚೆ ನಿರ್ಮುಲನಾ ಅಧಿಕಾರಿಗಳಿಗೆ ಆದೇಶಿಸಿದರು. ಸರ್ಕಾರ ಬಡವರು ನೆಮ್ಮದಿಯಿಂದ ಜೀವನ ಸಾಗಿಸಲು ಹಲವು ಯೋಜನೆಯನ್ನು ಕೈಗೊಂಡಿದೆ. ಆದರೆ ಕೆಲವು ಅಧಿಕಾರಿಗಳು ತಿಂದು ತೇಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳಿಗೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರೀಶಿಲಿಸಿದ ಅವರು, ಬಡವರು ವಾಸಿಸುವ ಮನೆಗಳನ್ನು ಸುಜ್ಜಿತವಾಗಿ ನಿರ್ಮಿಸಿ. ಕಳಪೆ ಕಾಮಗಾರಿ ಕಂಡು ಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.