ದಾವಣಗೆರೆ: ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಾಗಿದ್ದರಿಂದ ರೈತನೋರ್ವ ಹೆಚ್ಚು ಪಡಿತರ ಅಕ್ಕಿ ಕೇಳಿದ್ದರಿಂದ 'ಸಾಯೋದು ಒಳ್ಳೆಯದು ಹೊರತು ಹೆಚ್ಚು ಅಕ್ಕಿ ನೀಡಲ್ಲ, ಪದೇ ಪದೇ ಕರೆ ಮಾಡ್ಬೇಡಿ ಎಂಬ ಆಹಾರ ಸಚಿವ ಉಮೇಶ್ ಕತ್ತಿಯವರ ಹೇಳಿಕೆ ಇಡೀ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಶಾಸಕ ಪ್ರೋ. ಲಿಂಗಣ್ಣ ಬೇಸರ ಹೊರಹಾಕಿದ್ದಾರೆ.
ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆಗೆ ದಾವಣಗೆರೆಯಲ್ಲಿ ಮಾಯಕೊಂಡ ಬಿಜೆಪಿ ಶಾಸಕ ಪ್ರೋ ಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಮಂತ್ರಿಯಾಗಿ ಈ ರೀತಿ ಹೇಳಿಕೆ ಸರಿಯಲ್ಲ, ನಾನು ಇದನ್ನು ಖಂಡಿಸುತ್ತೇನೆ. ಸರ್ಕಾರದ ಮೇಲೆ ಈ ಹೇಳಿಕೆ ಕೆಟ್ಟ ಪರಿಣಾಮ ಬೀರುತ್ತೆ, ನಾನು ಅವರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ, ಬದಲಾಗಿ ಈ ರೀತಿ ಹೇಳಿಕೆಕೊಡಬಾರದು. ವರಿಷ್ಟರು ಈ ಹೇಳಿಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಮಂತ್ರಿಯಾಗಿ ಇಂತಹ ಮಾತು ಹೇಳುವುದನ್ನ ನಾವ್ಯಾರು ಒಪ್ಪಲ್ಲ ಎಂದಿದ್ದಾರೆ.
ಆ್ಯಂಬುಲೆನ್ಸ್ ಸೇವೆ ನೀಡಲು ಹಣ ಕೇಳಿದ್ರಂತೆ:
ಆಂಬ್ಯುಲೆನ್ಸ್ ಸೇವೆ ನೀಡಲು ಯಾರೋ ಸಿಬ್ಬಂದಿ ಹಣ ಕೇಳಿದ್ದಾರೆ ಅದರ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರಿಗೆ ಶಾಸಕರು ಸೂಚನೆ ನೀಡಿದ್ದಾರೆ. ದಾವಣಗೆರೆ ತಾಲೂಕಿನ ಕಾಟಿಹಳ್ಳಿಯಲ್ಲಿ ಇಬ್ಬರು ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲ್ಲಿಗೆ ತೆರಳಿದಾಗ ಸೋಂಕಿತರನ್ನು ಸಾಗಿಸಲು ಆಂಬ್ಯುಲೆನ್ಸ್ ಚಾಲಕನು ಒಂದು ಕೇಸ್ಗೆ 8 ಸಾವಿರದಂತೆ ಇಬ್ಬರಿಗೆ 16 ಸಾವಿರ ರೂಗಳನ್ನು ಸಂಬಂಧಿಕರಿಗೆ ಕೇಳಿದ್ದನಂತೆ. ಅ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಅಮಾನತ್ತಲ್ಲಿರಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಶಾಸಕರು ತಿಳಿಸಿದ್ದಾರೆ.