ETV Bharat / state

ಎಂಟಿಬಿ ಅಷ್ಟೇ ಅಲ್ಲ ನಮ್ಮ ಜೊತೆ ಬಂದವರಿಗೂ MLC ಮಾಡುವಂತೆ ಕೇಳಿದ್ದೇವೆ: ಸಚಿವ ಸೋಮಶೇಖರ್ - ಸೋತ ಶಾಸಕರಿಗೆ ಎಂಎಲ್​​ಸಿ ಸ್ಥಾನ ಕೊಡುವಂತೆ ಮನವಿ

ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಅವರನ್ನು ಎಂಎಲ್​​ಸಿ ಮಾಡುವಂತೆ ಸಿಎಂ ಬಳಿ‌ ಕೇಳಿಕೊಂಡಿದ್ದೇವೆ ಎಂದು ಸಚಿವ ಎಸ್​​.ಟಿ. ಸೋಮಶೇಖರ್​​ ಸ್ಪಷ್ಟಪಡಿಸಿದ್ದಾರೆ.

minister st somashekhar visits to davanagere
ಸಚಿವ ಸೋಮಶೇಖರ್ ಹೇಳಿಕೆ
author img

By

Published : Jun 12, 2020, 2:27 PM IST

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಬಿ.‌ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ಸಹಕಾರ ಸಚಿವ ಎಚ್.ಟಿ. ಸೋಮಶೇಖರ್ ತಿಳಿಸಿದರು.

ಸಚಿವ ಸೋಮಶೇಖರ್ ಹೇಳಿಕೆ

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಅವರನ್ನು ಎಂಎಲ್​​ಸಿ ಮಾಡುವಂತೆ ಸಿಎಂ ಬಳಿ‌ ಕೇಳಿಕೊಂಡಿದ್ದೇವೆ ಎಂದು ಹೇಳಿದರು.

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಕಾಯ್ದೆ ಬಗ್ಗೆ ಜನರಿಂದ ದೂರು ಕೇಳಿ ಬಂದಿದ್ದವು.‌ ಸಹಾಯಕ ಆಯುಕ್ತರು ಇದೊಂದು ದಂಧೆಯನ್ನಾಗಿ ಮಾಡಿಕೊಂಡಿದ್ದರು. ಈ ಬಗ್ಗೆ ಚರ್ಚಿಸಿ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಐದು ಗುಂಟೆ ಜಮೀನು ಖರೀದಿಸಿದರೆ ಎರಡರಿಂದ ಮೂರು ತಿಂಗಳಲ್ಲಿ ನೋಟಿಸ್​​ ನೀಡಲಾಗುತಿತ್ತು. ಈಗ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.