ETV Bharat / state

ಬರ ನಿರ್ವಹಣಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರಿಂದ ಕ್ಲಾಸ್​

author img

By

Published : May 14, 2019, 11:58 PM IST

ನಿಮಗೆ ಕೆಲಸ ಮಾಡಲು ಇಷ್ಟ ಇಲ್ಲಾ ಅಂದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಇಲ್ಲವೇ ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಎಸ್ ಆರ್ ಶ್ರೀನಿವಾಸ್​​ ಅಧಿಕಾರಿಗಳಿಗೆ ವಾರ್ನ್​ ಮಾಡಿದರು.

ಸಚಿವ

ದಾವಣಗೆರೆ: ನಿಮಗೆ ಕೆಲಸ ಮಾಡಲು ಇಷ್ಟವಿಲ್ಲ ಅಂದರೆ ಸಸ್ಪೆಂಡ್ ಮಾಡಿ ಕಳಿಸಿಬಿಡ್ತಿನಿ. ಇಲ್ಲ ಅಂದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ಬರವಿದ್ದರೂ ನಿರ್ವಹಣೆ ಮಾಡಲು ಆಗದ ಮೇಲೆ ಏನ್​ ಕೆಲಸ ಮಾಡ್ತೀರಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ಅಧಿಕಾರಿಗಳಿಗೆ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಜಗಳೂರು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್ ಜಗಳೂರಿನಲ್ಲೇ ಇರೋದಿಲ್ಲ ಎಂದು ಸಾಕಷ್ಟು ದೂರು ಬಂದಿದೆ. ಅಷ್ಟೇ ಅಲ್ಲದೇ, ಬರ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಜಾನಕಿರಾಮ್ ವಿಫಲರಾಗಿರುವ ಬಗ್ಗೆ ತರಾಟೆ ತೆಗೆದುಕೊಂಡರು.

ಸಚಿವರಿಂದ ಕ್ಲಾಸ್​

ಇನ್ನು ಗೋ ಶಾಲೆಯಲ್ಲಿ ಆಹಾರ ಸರಿಯಾಗಿ ನೀಡುತ್ತಿಲ್ಲ, ಜಗಳೂರು ತಾಲೂಕಿನ 105 ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಟ್ಯಾಂಕರ್​​ಗಳು, ಖಾಸಗಿ ಬೋರ್​​ವೆಲ್​​ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನಿಮಗೆ ಕೆಲಸ ಮಾಡಲು ಇಷ್ಟ ಇಲ್ಲಾ ಅಂದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಇಲ್ಲವೇ ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ವಾರ್ನ್ ಮಾಡಿದರು. ಇಒ ಜೊತೆ ತಹಶೀಲ್ದಾರ್ ತಿಮ್ಮಣ್ಣರಿಗೂ ಕ್ಲಾಸ್ ತೆಗೆದುಕೊಂಡರು.

ಜಗಳೂರು ತಾಲೂಕಿನಲ್ಲಿ ಭೀಕರ ಬರ ಇದ್ದು 62 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದರೆ, ಉಳಿದ ಹಳ್ಳಿಗಳಿಗೆ ಖಾಸಗಿ ಬೋರ್​ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆ ಜಾನುವಾರುಗಳಿಗಾಗಿ ಎರಡು ಕಡೆ ಗೋ ಶಾಲೆಗಳನ್ನು ಕೂಡ ತೆರೆಯಲಾಗಿದೆ. ನೀರಿಗಾಗಿ ಸಾಕಷ್ಟು ಹಣ ಜಿಲ್ಲಾಧಿಕಾರಿ ಹಾಗೂ ಸಿಇಒ ಬಳಿ ಇದ್ದು ಅದರ ಸದುಪಯೋಗಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.