ETV Bharat / state

ದೇವಾಲಯದಲ್ಲಿ ಪೂಜೆ ಮುಗಿಸಿ ಬರುವಾಗ ಭೀಕರ ಅಪಘಾತ: ಕಾರಲ್ಲಿದ್ದ ನಾಲ್ವರ ಸಾವು, ಓರ್ವನ ಸ್ಥಿತಿ ಗಂಭೀರ - Magadi Accident - MAGADI ACCIDENT

ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ.

ಮಾಗಡಿ ಬಳಿ ಭೀಕರ ಅಪಘಾತ
ಮಾಗಡಿ ಬಳಿ ಭೀಕರ ಅಪಘಾತ (ETV Bharat)
author img

By ETV Bharat Karnataka Team

Published : Sep 17, 2024, 7:16 PM IST

ನೆಲಮಂಗಲ: ಚಾಲಕನ ನಿಯಂತ್ರಣದ ತಪ್ಪಿದ ಕಾರು, ಹೆದ್ದಾರಿ ಪಕ್ಕದಲ್ಲಿನ ಮರಕ್ಕೆ ಡಿಕ್ಕಿ ಹೊಡೆದಿದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮಾರುತಿ ಎರ್ಟಿಗಾ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಮಾಗಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಸಮೀಪದ ಭದ್ರಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ಯಡಿಯೂರು ಬಳಿಯ ಹುಲಿವಾಹನ ಮುನೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ

ಮೃತರನ್ನು ನಂಜುಂಡಯ್ಯ (56), ಶಾರದಾ (50), ಭದ್ರಮ್ಮ (80) ಮತ್ತು ಕುಸುಮ (21) ಎಂದು ಗುರುತಿಸಲಾಗಿದೆ. ಮೃತ ದೇಹಗಳನ್ನು ನೆಲಮಂಗಲ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರು ಮತ್ತು ಬೆಂಗಳೂರಿನ ಪೀಣ್ಯಾ ದಾಸರಹಳ್ಳಿಯ ಬಾಗಲಗುಂಟೆ ಮೂಲದವರು ಎಂದು ತಿಳಿದು ಬಂದಿದೆ.

ಕಾರಲ್ಲಿ ಕುಣಿಗಲ್ ತಾಲೂಕಿನ ಸ್ವಗ್ರಾಮ ಹುಲಿವಾಹನದಿಂದ ಬೆಂಗಳೂರಿನ ಬಾಗಲಗುಂಟೆಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಭದ್ರಾಪುರ ಗೇಟ್ ಬಳಿ ಅಪಘಾತವಾಗಿದ್ದು, ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತದಲ್ಲಿ ಅದೃಷ್ಟವಶಾತ್ ನಾಯಿಯೊಂದು ಪ್ರಾಣಾಪಾಯದಿಂದ ಪಾರಾಗಿದೆ.

ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಭೀಕರ ಅಪಘಾತ: ಕೇರಳ ಮೂಲದ ಮೂವರ ದುರ್ಮರಣ - Bike Lorry Accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.