ದಾವಣಗೆರೆ : ರಾಜ್ಯ ಸರ್ಕಾರದ ಉಚಿತ ಯೋಜನೆಗಳಿಂದ ದೇಶ ದಿವಾಳಿಯಾಗುತ್ತೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ, ಉಚಿತ ಯೋಜನೆಯಿಂದ ದೇಶ ದಿವಾಳಿ ಆಗುತ್ತೆ ಎಂದರೆ, ಅದಾನಿ, ಅಂಬಾನಿ ಅವರ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ..? ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಯೋಜನೆ 1.32 ಕೋಟಿ ಬಡವರಿಗೆ ಮುಟ್ಟುತ್ತಾ ಇದೆ. ಇದರಿಂದ ಅವರು ಆರ್ಥಿಕವಾಗಿ ಸಬಲೀಕರಣ ಆಗುತ್ತಿದ್ದಾರೆ. ಅವರೇನು ಎಮ್ಮೆ ಮೈ ಉಜ್ಜಿದ್ದಾರಾ..? ಸೆಗಣಿ ತೆಗೆದಿದ್ದಾರಾ ..? ದನ ಮೇಯಿಸಿದ್ದಾರಾ..?, ಇದೆಲ್ಲ ತೊಳಿಯವರು ನಾವು ಸುಮ್ಮನೇ ಭಾವನಾತ್ಮಕವಾಗಿ ಮಾತನಾಡ್ತಾರೆ ಅಷ್ಟೇ. ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡೋದು ಗೊತ್ತಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.
ಉದಯ ನಿಧಿ ಹೇಳಿಕೆ ವಿಚಾರ : ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮವನನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮ ಶುದ್ದೀಕರಣ ಆಗಬೇಕಾಗಿದೆ. ಸನಾತನದಲ್ಲಿ ಶೂದ್ರರರಿಗೆ ಓದೋದನ್ನ ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ಮೇಲೆ ಎಲ್ಲರೂ ವ್ಯಾಪಕವಾಗಿ ವಿದ್ಯ ಕಲಿತರು. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲಿಷ್ ಓದುತ್ತಾ ಇದ್ದರು. ಓದಿದ್ರೇ ಕಾಯಿಸಿದ ಎಣ್ಣೆ ಬಿಡುತಿದ್ದರು. ಯಾವ ಧರ್ಮವು ಮೇಲಲ್ಲ. ಎಲ್ಲವೂ ಸಂವಿಧಾನದ ಒಳಗೆ ಬರೋದು. ಮಾನವೀಯತೆಯಿಂದ ಎಲ್ಲರೂ ಬಾಳ್ವೇ ಮಾಡಬೇಕಿದೆ ಎಂದು ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇನ್ನು ಕೇಂದ್ರ ಒನ್ ನೇಷನ್ ಒನ್ ಎಲೆಕ್ಷನ್ ಅದು ಹೇಗೆ ಮಾಡಲು ಸಾಧ್ಯ ನೀವೇ ಹೇಳಿ, ಇದು ಸಂವಿಧಾನದ ವಿರುದ್ದವಾಗಿದೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ವಿವಾದ : ರಾಜ್ಯದಲ್ಲಿ ಈ ಬಾರಿ ಮಳೆ ಕಡಿಮೆ ಆಗಿದೆ. ಮಳೆ ಬಾರದೇ ಇರುವುದು ಪ್ರಕೃತಿಯ ಸ್ವಾಭಾವ. ಮೂರು ವರ್ಷದಿಂದಲೂ ಈ ಕಾವೇರಿ ನೀರಿ ವಿವಾದ ಇದೆ. ಈಗಾಗಲೇ ಯಾರು ಎಷ್ಟು ನೀರು ತೆಗೆದುಕೊಳ್ಳಬೇಕೆಂದು ಕೋರ್ಟ್ ತೀರ್ಪು ನೀಡಿದೆ. ನಮ್ಮ ರೈತರಿಗೆ ನೀರಿಲ್ಲ. ಕುಡಿಯಲು ಕೂಡ ನೀರಿಲ್ಲ. ಆದರೆ ನ್ಯಾಯಾಲಯ ಮಾತ್ರ ತೀರ್ಪು ನೀಡಿದೆ. ಸರ್ಕಾರ ಮಾತ್ರ ತಮಿಳುನಾಡಿಗೆ ನೀರಿ ಕೊಡಲು ಸಾಧ್ಯವೆ ಇಲ್ಲ. ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ನೀರು ಬಿಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ರಾಜ್ಯದ ರೈತರನ್ನು ಕಾಪಾಡುತ್ತೇವೆ ಎಂದು ಮಹಾದೇವಪ್ಪ ಭರವಸೆ ನೀಡಿದರು.
ಇದನ್ನೂ ಓದಿ : ಕೋಟಿ ಮಂದಿ ಉದಯನಿಧಿ ಹುಟ್ಟಿದರೂ ಧರ್ಮ ತೆಗೆಯಲಾಗಲ್ಲ: ಕನ್ನಡಪರ ಹೋರಾಟಗಾರ ಚಾರಂ