ETV Bharat / state

ಸಿರಿಧಾನ್ಯಗಳ ಮೌಲ್ಯವರ್ಧನೆ: ಅಂತಾರಾಷ್ಟ್ರೀಯ ಮಾರುಕಟ್ಟೆ ಸೆಳೆದ ದಾವಣಗೆರೆ ರೈತ ಮಹಿಳೆ - ಸರೋಜ ಪಾಟೀಲ್

ಸಿರಿಧಾನ್ಯಗಳಿಂದ ಉತ್ಪನ್ನಗಳನ್ನು ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡುತ್ತಾ 8 ಬಡ ಕುಟುಂಬಗಳಿಗೆ ಉದ್ಯೋಗ ನೀಡಿದ ಗ್ರಾಮೀಣ ಸಾಧಕಿ ಈಕೆ.

Millet Value addition Davangere woman attracted international market
ಸಿರಿಧಾನ್ಯಗಳ ಮೌಲ್ಯ ವರ್ಧನೆ
author img

By

Published : Aug 10, 2022, 10:14 PM IST

ದಾವಣಗೆರೆ : ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಹೊಸ ನಿದರ್ಶನ ದಾವಣಗೆರೆಯ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಕಾಣಸಿಕ್ಕಿದೆ. ಸರೋಜ ಪಾಟಿಲ್​ ಎಂಬ ಮಹಿಳೆ ಸಿರಿಧಾನ್ಯಗಳ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಯವರೆಗೆ ತಲುಪಿಸಿ ಉದ್ಯಮದಲ್ಲಿ ಯಶ ಕಂಡಿದ್ದಾರೆ.

ನಿಟ್ಟೂರು ಗ್ರಾಮದ ನಿವಾಸಿಯಾದ ಇವರು ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಆರಂಭದಲ್ಲಿ ದೇಶಿಯ ಭತ್ತ ಬೆಳೆಯುತ್ತಿದ್ದ ಸರೋಜ ಹಂತ ಹಂತವಾಗಿ ಸಿರಿಧಾನ್ಯಗಳನ್ನೂ ಬೆಳೆಯಲು ಆರಂಭಿಸಿದ್ದಾರೆ. ಇವರ ಸಿರಿಧಾನ್ಯ ಬೆಳೆಯುವ ಆಸಕ್ತಿಗೆ ಸಹಕರಿಸಿದ್ದು ಕೃಷಿ ಇಲಾಖೆ ಹಾಗು ತರಳಬಾಳು ಕೃಷಿ ಕೇಂದ್ರ.

ತದ್ವನಂ ಬ್ರ್ಯಾಂಡ್​ ಅಡಿಯಲ್ಲಿ ಸಿರಿಧಾನ್ಯಗಳ ಮೌಲ್ಯ ವರ್ಧನೆ

ಸಾಕಷ್ಟು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಸರೋಜರಿಗೆ ಮೊದಮೊದಲು ತಾನು ಬೆಳೆದಿದ್ದ ಬೆಳೆಯನ್ನು ಏನು ಮಾಡಬೇಕೆಂದೇ ಯೋಚನೆಯಾಗಿತ್ತು. ಇದಕ್ಕಾಗಿ ಸಣ್ಣ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರು ಮಾಡಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ಇದು ಹಂತಹಂತವಾಗಿ ಬೆಳೆದು ಇದೀಗ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ. ಇವರು ತದ್ವನಂ ಎಂಬ ಬ್ರ್ಯಾಂಡ್ ಮಾಡಿಕೊಂಡು 2004 ರಿಂದ ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ.

ಒಬ್ಬರಿಂದ ಆರಂಭವಾದ ಉದ್ಯಮ ಈಗ 8 ಕುಟುಂಬಕ್ಕೆ ಕೆಲಸ ನೀಡುತ್ತಿದೆ. ಸಿರಿಧಾನ್ಯಗಳಿಂದ ಎನರ್ಜಿ ಮಿಕ್ಸ್, ರಾಗಿ ಬಳಕೆ ಮಾಡಿ ರಾಗಿ ಮಾಲ್ಟ್‌, ವಡ್ಡರಾಗಿ ಹಿಟ್ಟು, ಹಪ್ಪಳಗಳನ್ನು ಕೂಡ ತಯಾರು ಮಾಡುತ್ತಿದ್ದಾರೆ. ಇದೇ ಸಿರಿಧಾನ್ಯಗಳಿಂದ 9 ತರಹದ ಶ್ಯಾವಿಗೆ, ಬಾಳೆಕಾಯಿ ಹುಡಿ, ಸಿರಿಧಾನ್ಯ ಅವಲಕ್ಕಿ, ಕಾಕ್ರಸ್ ಹೀಗೆ ಸಾಕಷ್ಟು ಉತ್ಪನ್ನಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವಣೆ, ಆರ್ಕಾ, ಸಾಮೆ, ಉದ್ಲೂ, ಕೊರಲೆ, ಸಜ್ಜೆ, ರಾಗಿ, ಜೋಳ, ಮೆಕ್ಕೆಜೋಳ ಹೀಗೆ ಈ ಎಲ್ಲವನ್ನೂ ಬಳಕೆ ಮಾಡಿ ತರಹೇವಾರಿ ಉತ್ಪನ್ನಗಳನ್ನು ತಯಾರು ಮಾಡ್ತಿದ್ದಾರೆ. ಸರೋಜಮ್ಮನವರ ಜೊತೆಗಿರುವ ಕೆಲಸಗಾರರಿಗೆ ಕೈತುಂಬ ಕೆಲಸ ಹಾಗು ಬೋನಸ್, ಜೀವ ವಿಮೆ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

ಸಿರಿಧಾನ್ಯ ಉತ್ಪನ್ನಗಳನ್ನು ದೆಹಲಿ, ಚೆನೈ, ಬೆಂಗಳೂರು, ಕೇರಳ, ಕಾನ್ಪುರ್, ಮುಂಬೈ ಹೀಗೆ ದೇಶದ ಪ್ರಮುಖ ನಗರಗಳಿಗೆ ಕಳುಹಿಸಿಕೊಡುತ್ತಿದ್ದಾರೆ. ಅಮೆರಿಕ, ಲಂಡನ್, ಆಸ್ಟ್ರೇಲಿಯಾ, ಐರ್ಲ್ಯಾಂಡ್ ಹೀಗೆ ಸಾಕಷ್ಟು ದೇಶದಲ್ಲಿರುವ ಭಾರತೀಯರು ಈ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಸರೋಜ ಅವರು ಕಳೆದ 40 ವರ್ಷದಿಂದ ಮಾಡಿಕೊಂಡು ಬರುತ್ತಿರುವ ಈ ಕಾಯಕವನ್ನು ಗುರುತಿಸಿ ಸಾಕಷ್ಟು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. 2008-09 ರಲ್ಲಿ ಕೃಷಿ ಪಂಡಿತ ಅವಾರ್ಡ್, 2006 ರಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿ, 2010-11 ರಲ್ಲಿ ಬಯೋಡೈವರ್ಸಿಟಿ ಅವಾರ್ಡ್, 2012-13 ರಲ್ಲಿ ಮಹೀಂದ್ರಾ ಅಗ್ರೀ ಅವಾರ್ಡ್, 2018 ಮಹಿಳಾ ಕಿಸಾನ್ ಅವಾರ್ಡ್ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಅರಣ್ಯ ರಕ್ಷಣೆಗೆ ಪ್ರಾಣ ಮುಡಿಪಿಟ್ಟ ಧೀರೆ: ಕಾಡುಗಳ್ಳರ ವಿರುದ್ಧ ಫಾರೆಸ್ಟ್​ ಆಫೀಸರ್​ ಅಶ್ವಿನಾ ಸಮರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.