ಹರಿಹರ: ದೈಹಿಕ ಅಂಗವೈಕಲ್ಯತೆಗಿಂತೆ ಮಾನಸಿಕ ಅಂಗವೈಕಲ್ಯತೆ ಅತಿ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ ಎಂದು ಶಾಸಕ ಎಂ.ರಾಮಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಗವಿಕಲರೂ ಕೂಡಾ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.
![Mental disability is a real disability rather than a physical disability](https://etvbharatimages.akamaized.net/etvbharat/prod-images/6420174_thumbn.jpg)
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂಧ 10 ಲಕ್ಷ ರೂಪಾಯಿ ಅನುದಾನದಲ್ಲಿ 14 ಮಂದಿಗೆ ವಾಹನಗಳನ್ನು ವಿತರಣೆ ಮಾಡಿದ ಶಾಸಕ ರಾಮಪ್ಪ ಹಂತಹಂತವಾಗಿ ತಾಲೂಕಿನಲ್ಲಿರುವ ಪ್ರತಿಯೊಬ್ಬ ಅಂಗವಿಕಲರಿಗೂ ವಾಹನ ನೀಡುವ ಗುರಿ ಹೊಂದಲಾಗಿದೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ. ಇದರ ಆಧಾರದ ಮೇಲೆ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಾಹನಗಳನ್ನು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಜಿಲ್ಲಾ ವಿಶೇಷಚೇತನರ ಅಧಿಕಾರಿ ಮಾತನಾಡಿ ಇಲಾಖೆಯ ವತಿಯಿಂದ ನಾವು ಸರ್ಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದೆವು. ಶಾಸಕ ರಾಮಪ್ಪ ಅನುದಾನ ನೀಡುವ ಮೂಲಕ ವಿಕಲಚೇತನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದರು. ಈ ವೇಳೆ ನಗರಸಭಾ ಸದಸ್ಯ ಎಸ್.ಎಂ.ವಸಂತ, ಕಾಂಗ್ರೆಸ್ ಮುಖಂಡ ಕುಂಬಳೂರು ಹಾಲಪ್ಪ, ಅಂಗವಿಕಲರ ಸಂಘದ ಪರಮೇಶ್ವರಪ್ಪ, ಅನಿತಾ ಪಾಟೀಲ್ ಹಾಗೂ ತಾಲೂಕು ಪಂಚಾಯತ್ ಕಚೇರಿಯ ಸಿಬ್ಬಂದಿ ಹಾಜರಿದ್ದರು