ದಾವಣಗೆರೆ: ತನಗೆ ವಂಚಿಸಿ ಮತ್ತೊಬ್ಬಳ ಜೊತೆ ನನ್ನ ಪತಿ ಮದುವೆಯಾಗಿದ್ದು, ಮಾನಸಿಕ, ದೈಹಿಕ ಕಿರುಕುಳ, ಹಿಂಸೆ ಕೊಡುತ್ತಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ನನಗೆ ಹಾಗೂ ಮಕ್ಕಳಿಗೆ ನ್ಯಾಯ ಒದಗಿಸಿಕೊಡಿ ಎಂದು ಮಹಿಳೆಯೊಬ್ಬರು ಕಣ್ಣೀರು ಸುರಿಸಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.
ಪತ್ನಿಗೆ ಕೈಕೊಟ್ಟು ಮತ್ತೊಂದು ಮದುವೆ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಕಷ್ಟ ವಿವರಿಸಿದ ಮಹಿಳೆ, 2014 ರಲ್ಲಿ ಚನ್ನಗಿರಿ ತಾಲೂಕಿನ ಬಸವಪಟ್ಟಣದ ಕಾರು ಚಾಲಕ ನಿಂಗರಾಜು ಜೊತೆ ನನ್ನ ವಿವಾಹವಾಗಿತ್ತು. ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಆದ್ರೆ ಈಗ ಆತ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ಯುವತಿ ಜೊತೆ ಮದುವೆಯಾಗಿದ್ದಾನೆ. ಇದಕ್ಕೆ ಅತ್ತೆ, ಮಾವನ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ಸೂಕ್ತ ರಕ್ಷಣೆ ಒದಗಿಸಿ ಎಂದು ಮನವಿ ಮಾಡಿದ್ದಾರೆ.
ಪತ್ನಿಗೆ ಕೈಕೊಟ್ಟು ಮತ್ತೊಂದು ಮದುವೆಯಾದ ನಿಂಗರಾಜು ನನ್ನ ತಂದೆ ಚನ್ನಗಿರಿಯ ಬೀರಗೊಂಡನಹಳ್ಳಿಯಲ್ಲಿ ವಾಸವಿದ್ದಾರೆ. ಮದುವೆ ವೇಳೆ ಅರ್ಧ ಎಕರೆ ಜಮೀನು ಮಾರಿ ವರದಕ್ಷಿಣೆ ನೀಡಿದ್ದರು. ಮತ್ತೆ ಪದೇ ಪದೇ ವರದಕ್ಷಿಣೆ ತರುವಂತೆ ನಿಂಗರಾಜು ಹಾಗೂ ಅವನ ಅಪ್ಪ ಅಮ್ಮ ನನ್ನನ್ನು ಪೀಡಿಸಲಾರಂಭಿಸಿದರು. ಕಳೆದೊಂದು ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿ ಹೋದ ಬಳಿಕ ಆತ ವಾಪಸ್ ಬರಲಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಪತಿಯನ್ನು ಹುಡುಕಿ ಕೊಡಿ ಎಂದು ಬಸವಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪತಿಗೆ ನನಗೆ ರೈತ ಸಂಘದ ಬೆಂಬಲ ಇದೆ, ಯಾರೂ ಏನೂ ಮಾಡಲಾಗದು ಎಂಬ ಮನಸ್ಥಿತಿಯಿದೆ. ರೈತ ಸಂಘದ ಮುಖಂಡರು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಇದೇ ವೇಳೆ ಸಂತಸ್ತ ಮಹಿಳೆ ಆರೋಪಿಸಿದ್ದಾರೆ.
ನಿಂಗರಾಜ್ ಮದುವೆಯಾಗಿರುವ ಯುವತಿ ಜೊತೆಗಿನ ಖಾಸಗಿ ಫೋಟೋ, ತನಗೆ ಬೆದರಿಕೆ ಹಾಕಿರುವ ಆಡಿಯೋ ಸೇರಿದಂತೆ ಎಲ್ಲಾ ದಾಖಲಾತಿಗಳೂ ನನ್ನ ಬಳಿ ಇದೆ ಎಂದು ಆರೋಪಿಯ ಪತ್ನಿ ಹೇಳಿದ್ದಾರೆ.
ಪತ್ನಿಗೆ ಕೈಕೊಟ್ಟು ಮತ್ತೊಂದು ಮದುವೆಯಾದ ನಿಂಗರಾಜ್ ಖತರ್ನಾಕ್ ಕಿಲಾಡಿ ಈ ನಿಂಗರಾಜ್! ನಿಂಗರಾಜ್ ಈ ಹಿಂದೆ ಬಸ್ ಚಾಲಕನಾಗಿ ಬಳಿಕ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಅಲ್ಲೆಲ್ಲಾ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು. ಕೆಲಸ ಕೊಡಿಸದಿದ್ದರೆ ವಿಷ ಕುಡಿದು ಸಾಯುತ್ತೇನೆ ಎಂದು ಡಿಸಿ ಕಚೇರಿಯಲ್ಲಿ ಹಿಂದೊಮ್ಮೆ ನಾಟಕವಾಡಿದ್ದಾನೆ. ಆಗ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ನಿಂಗರಾಜ್‌ಗೆ ಬೈದು ಕಳುಹಿಸಿದ್ದರು.