ETV Bharat / state

ಮದರಸಾಗಳಲ್ಲಿ ದೇಶದ್ರೋಹದ ಪಾಠ, ಅಲ್ಲಿರುವ ಮಕ್ಕಳು ಭಾರತ್ ಮಾತಾಕಿ ಜೈ ಎನ್ನಲ್ಲ: ರೇಣುಕಾಚಾರ್ಯ - ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ

ಮದರಸಾಗಳು ಮುಗ್ದ ಮನಸ್ಸುಗಳಲ್ಲಿ ದ್ವೇಶ ಭಾವನೆಯನ್ನು ಬೆಳೆಸುತ್ತವೆ. ಅಲ್ಲಿ ಕಲಿತ ಮಕ್ಕಳು ಭಾರತ್​ ಮಾತಾಕಿ ಜೈ ಎಂದು ಹೇಳುವುದಿಲ್ಲ..

M P Renukacharya reaction about Madrasa education
ಮದರಸ ಶಿಕ್ಷಣದ ಬಗ್ಗೆ ರೇಣುಕಾಚಾರ್ಯ ಮಾತು
author img

By

Published : Mar 26, 2022, 3:45 PM IST

ದಾವಣಗೆರೆ : ರಾಜ್ಯದಲ್ಲಿ ಮದರಸಾಗಳು ದೇಶದ್ರೋಹದ ಪಾಠ ಮಾಡುತ್ತಿವೆ. ಮದರಸಾದ ಮಕ್ಕಳು ಭಾರತ್ ಮಾತಾಕಿ ಜೈ ಎಂದು ಹೇಳಲ್ಲ. ಮದರಸಾಗಳು ಏಕೆ ಬೇಕು? ಅಲ್ಲಿ ಏನು ಬೋಧನೆ ಮಾಡುತ್ತಾರೆ, ಅವುಗಳನ್ನು ಬ್ಯಾನ್ ಮಾಡ್ಬೇಕು ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಮದರಸಾದಲ್ಲಿ ಮುಗ್ಧ ಮಕ್ಕಳ ಮೇಲೆ ಪ್ರಚೋಧನಾಕಾರಿ ಪಾಠ ಮಾಡ್ತಾರೆ. ಬಳಿಕ ಆ ಮಕ್ಕಳು ದೇಶದ ವಿರುದ್ಧ ತಿರುಗಿ ಬೀಳುತ್ತಾರೆ. ಭಾರತ್ ಮಾತಾಕಿ ಜೈ ಎಂದು ಆ ಮಕ್ಕಳು ಹೇಳಲ್ಲ ಎಂದರು.

ಮದರಸಾ ಶಿಕ್ಷಣದ ಬಗ್ಗೆ ರೇಣುಕಾಚಾರ್ಯ ಹೇಳಿಕೆ ನೀಡಿರುವುದು..

ನೆಲದ ಕಾನೂನು ಗೌರವಿಸಿದವರನ್ನು ಬ್ಯಾನ್​ ಮಾಡಬೇಕು : ಕೋರ್ಟ್ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಆದರೂ ತೀರ್ಪನ್ನು ವಿರೋಧಿಸಿ ಕೆಲವು ಸಂಘಟೆನೆಗಳು ಬಂದ್​ಗೆ ಕರೆಕೊಟ್ಟಿದ್ದವು. ಈ ವಿಚಾರದ ಹಿಂದಿರುವ ಸಂಘಟನೆಗಳು ಇದರಿಂದ ತಿಳಿಯುತ್ತದೆ. ಈ ನೆಲದ ಕಾನೂನನ್ನು ಒಪ್ಪದವರನ್ನು ಬ್ಯಾನ್​ ಮಾಡಬೇಕು. ತೀರ್ಪು ಬಂದ ನಂತರ ಅದನ್ನು ವಿರೋಧಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂಬುದು ಯಾವ ರೀತಿಯ ನ್ಯಾಯ ಎಂದರು.

ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸತ್ಯಕ್ಕೆ ದೂರವಾಗಿದೆ : ನಾನು ಯಾವುದೇ ನಕಲಿ ಪ್ರಮಾಣ ಪತ್ರ ‌ಪಡೆದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ. ಅದು ಸತ್ಯಕ್ಕೆ ದೂರವಾಗಿದ್ದು ಎಂದು ಮತ್ತೊಮ್ಮೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು. ನಾನು ಸರ್ಕಾರಿ ಸೌಲಭ್ಯ ಪಡೆದಿದ್ದೇನೆಂದು ಕಾಂಗ್ರೇಸ್ ವಕ್ತಾರಾ ಸುಳ್ಳು ಆರೋಪ ಮಾಡಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ. ಇವರ ವಿರುದ್ದ ಮಾನನಷ್ಟ ಮೊಕದೊಮ್ಮೆ ಹಾಕುತ್ತೇನೆಂದು ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್‌ ಯಾವ್ದ್‌ ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.