ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ಕೋಮಾರನಹಳ್ಳಿ ಗ್ರಾಮದ ಲಕ್ಷ್ಮೀ ರಂಗನಾಥಸ್ವಾಮಿ ದೇವರ ಕಾರ್ಣಿಕ ಪ್ರಸಿದ್ಧಿ ಪಡೆದಿದ್ದು, ಪ್ರತಿ ನಾಗರಪಂಚಮಿ ಹಬ್ಬದ ಬಳಿಕ ಜರಗುವ ಕಾರ್ಣಿಕವನ್ನು ಭಕ್ತರು ಭಕ್ತಿಯಿಂದ ನಂಬುತ್ತಾರೆ. ಪ್ರತಿ ವರ್ಷದಂತೆ ಸೋಮವಾರ ನಡೆದ ಕಾರ್ಣಿಕದಲ್ಲಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವರು ಮುತ್ತಿನ ರಾಶಿಗೆ ಸರ್ಪ ಸುತ್ತಿತಲೆ, ಸರ್ಪಕ್ಕೆ ಹದ್ದುಕಾದೀತಲೇ ಎಚ್ಚರ ಎಂದು ನುಡಿಯವ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.
ಹರಳಹಳ್ಳಿ ಅಂಜನೇಯಸ್ವಾಮಿ ಪೂಜಾರಿ ಅವಿವಾಹಿತ ವ್ಯಕ್ತಿ ಈ ಕಾರ್ಣಿಕವನ್ನು ನುಡಿದಿದ್ದಾರೆ. ಈ ಎಚ್ಚರಿಕೆಯ ಸಂದೇಶವನ್ನು ರಾಜಕೀಯ ನಾಯಕರಿಗೆ ಹಾಗು ರೈತರಿಗೆ ನೀಡಿದಂತಿದೆ. ಮಳೆ, ಬೆಳೆ, ರಾಜಕೀಯ ಕುರಿತಾಗಿ ನುಡಿದ ವಾಣಿ ಎಂದು ಗ್ರಾಮಸ್ಥರು ಈ ಕಾರ್ಣಿಕವನ್ನು ಅರ್ಥೈಸಿದ್ದಾರೆ. ಕಾರ್ಣಿಕವನ್ನು ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಇದನ್ನೂ ಓದಿ : ಪ್ರತಿ ವರ್ಷ ಮನೆಯಲ್ಲಿ ಜೀವಂತ ನಾಗರನಿಗೆ ಪೂಜೆ! ಶಿರಸಿ ಉರಗ ಪ್ರೇಮಿಯಿಂದ ವಿಶಿಷ್ಟ ಜನಜಾಗೃತಿ-ವಿಡಿಯೋ