ETV Bharat / state

ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಮಾಡಾಳ್ ವಿರೂಪಾಕ್ಷಪ್ಪ ನಿವಾಸಕ್ಕೆ ಬಂದ ಲೋಕಾಯುಕ್ತ ಅಧಿಕಾರಿಗಳು - ಮಾಡಾಳ್ ವಿರೂಪಾಕ್ಷಪ್ಪ

ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಆದರೆ ಶಾಸಕ ಮಾಡಾಳ್ ಮಾತ್ರ ಬೇರೆಲ್ಲೋ ಪ್ರಯಾಣ ಬೆಳೆಸಿದ್ದಾರೆ.

Madal Virupakshappa Residence
ಮಾಡಾಳ್ ವಿರೂಪಾಕ್ಷಪ್ಪ ನಿವಾಸ
author img

By

Published : Mar 27, 2023, 6:45 PM IST

ದಾವಣಗೆರೆ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಸ್ವ ಗ್ರಾಮ ಚನ್ನೇಶಪುರದಲ್ಲಿರುವ ನಿವಾಸಕ್ಕೆ ಇಬ್ಬರು ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಿಂದ ದೂರ ಕಾರುಗಳನ್ನು ನಿಲ್ಲಿಸಿ ಕೊಂಡ ಲೋಕಾಯುಕ್ತ ಅಧಿಕಾರಿಗಳು ಸ್ವಲ್ಪ ಹೊತ್ತು ತಡ ಮಾಡಿ ಮನೆಗೆ ಭೇಟಿ ನೀಡಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ರಾಮಕೃಷ್ಣ ಅವರ ನೇತೃತ್ವದಲ್ಲಿ ಭೇಟಿ ನೀಡಿದ್ದು, ಸ್ವಿಫ್ಟ್​ ಕಾರು ಹಾಗು ಬುಲೆರೋ ಕಾರಿನಲ್ಲಿ ಒಟ್ಟು ಎರಡು ಕಾರುನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮನೆಯಿಂದ ಹೊರಟ ನಂತರ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿದರು‌.

ಇಬ್ಬರು ಲೋಕಾಯುಕ್ತ ಅಧಿಕಾರಿಗಳು ಮನೆಗೆ ಭೇಟಿ ನೀಡಿ ನಿವಾಸದ ಕೋಣೆಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದವರಿಂದ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕಿದರು. ಇನ್ನು ಬೆಳಗ್ಗೆಯಿಂದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಜಾಮೀನು ವಜಾ ವಿಚಾರ ತಿಳಿಯುತ್ತಿದ್ದಂತೆ ಮನೆಯತ್ತ ಹೊರಟು ಬಳಿಕ ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಪ್ರಯಾಣ ಬೆಳೆಸಿದರು. ಹಾಗೆ ಅವರ ಬೆಂಬಲಿಗರ ಮಾಹಿತಿ ಪ್ರಕಾರ ಮನೆಯಿಂದ ನೇರವಾಗಿ ಬೆಂಗಳೂರಿನ ಕಡೆ ಹೋಗಿದ್ದಾರಂತೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದಂತೆ ಚಿತ್ರದುರ್ಗದ ಬಳಿ ಶಾಸಕರ ಲೊಕೇಷನ್ ತೊರಿಸುತ್ತಿದೆ ಎಂಬ ಮಾಹಿತಿ ಮಾಡಾಳ್ ಬೆಂಬಲಿಗರು ಮಾಹಿತಿ ನೀಡಿದರು.

ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿ ಮತ ಕ್ಷೇತ್ರದ ಬಿಜೆಪಿ ಶಾಸಕರು, ಅವರ ಪುತ್ರ ಹಾಗು ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದಲ್ಲಿಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ವಿವಿಧಾ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಿದರು.

ಬಳಿಕ ಚನ್ನಗಿರಿ ಪ್ರವಾಸಿ ಮಂದಿರಕ್ಕಾಗಮಿಸಿದ ಮಾಡಾಳ್ ವಿರೂಪಾಕ್ಷಪ್ಪನವರು ಜನರ ಅಹ್ವಾಲು ಸ್ವೀಕರಿಸುವ ವೇಳೆ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಸುದ್ದಿ ತಿಳಿದು ಚನ್ನಗಿರಿ ತಾಲೂಕಿನ ಚನ್ನೇಶ್ವರ ಸ್ವಗ್ರಾಮದ ನಿವಾಸಕ್ಕಾಗಮಿಸಿ ಬಳಿಕ ಅದೇ ಕಾರಿನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ತಮ್ಮ ಅಜ್ಞಾತ ಸ್ಥಳಕ್ಕೆ ಪ್ರಯಾಣ ಬೆಳೆಸಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ತಮ್ಮ ಕ್ಷೇತ್ರದ ಜನರಿಗೆ ವಿದಾಯ ಭಾಷಣದ ಮೂಲಕ ವಿದಾಯ ಹೇಳಿದರು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಶಾಸಕ ಮಾಡಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಸುದ್ದಿ ತಿಳಿದ ಶಾಸಕರು ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದರು ಎಂದು ತಿಳಿದುಬಂದಿದೆ.

ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕೊಠಡಿ, ನೂತನ ಗ್ರಂಥಾಲಯ, ಚನ್ನಗಿರಿ ಪಟ್ಡಣದಲ್ಲಿರ ವಾಲ್ಮೀಕಿ ಸಮುದಾಯ ಭವನ, ಚನ್ನಗಿರಿ ತಾಲೂಕಿನ ಬೀರೂರು-ಸಮ್ಮಸಗಿ ರಸ್ತೆ ಹಾಗು ರಾಷ್ಟ್ರೀಯ ಹೆದ್ದಾರಿ-369 ಟೀ ಜೆಂಕ್ಷನ್ ಸೇತುವೆ.

ಹಾಗೆ ಪುರಸಭೆ ನೂತನ ಕಟ್ಟಡ, ಚನ್ನಗಿರಿ ಪಟ್ಟಣದ ಸಂತೇ ಕಟ್ಟಡ ಹಾಗು ಮೂಲಭೂತ ಸೌಕರ್ಯಗಳ ಲೋಕಾರ್ಪಣೆ, ಚನ್ನಗಿರಿಯ ಸರ್ಕಾರಿ ಪಾಲಿಟೆಕ್ನಿಕ್ ವರ್ಕ್ ಶಾಪ್ ಕಟ್ಟಡ ಉದ್ಘಾಟನೆ, ಸಮಾಜಕಲ್ಯಾಣ ಇಲಾಖೆಯ ಚನ್ನಗಿರಿಯ ಸಹಾಯ ನಿರ್ದೇಶಕರ ಗ್ರೇಡ್-01 ರವರ ಕಚೇರಿ ಕಟ್ಟಡ ಉದ್ಘಾಟನೆ. ಉಬ್ರಾಣಿ ಹಾಗು ಅಮೃತಾಪುರ ನೀರಾವರಿ ಯೋಜನೆಯ ಮುಂದುವರೆದ ಪೈಪ್ ಲೈನ್ ಕಾಮಗಾರಿ, ಉಬ್ರಾಣಿ ಹಾಗು ಅಮೃತಾಪುರ ನೀರಾವರಿ ಯೋಜನೆಯ ಹಂತ_01 ಹಾಗೂ ಹಂತ-02 ರ ಪಂಪುಗಳ ಬದಲಾಯಿಸಿ ಹೊಸ ಪಂಪ್ ಗಳನ್ನು ಅಳವಡಿಸುವ ಕಾಮಗಾರಿಗಳಿಗೆ ಚಾಲನೆ‌ ನೀಡಿದರು.

ಇದನ್ನೂ ಓದಿ: ಲಂಚ ಆರೋಪ; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.