ETV Bharat / state

ಮನೆ ಖರೀದಿ ಪತ್ರಕ್ಕೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ದಸ್ತು ಬರಹಗಾರ - ದಾವಣಗೆರೆಯಲ್ಲಿ ಸಬ್​ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಸೆರೆ

ಮನೆ ಖರೀದಿ ಪತ್ರಕ್ಕಾಗಿ 20 ಸಾವಿರ ರೂ ಲಂಚದ ಬೇಡಿಕೆ ಇಟ್ಟು ವ್ಯಕ್ತಿಯೊಬ್ಬರಿಂದ 13 ಸಾವಿರ ಹಣ ಪಡೆಯುತ್ತಿದ್ದ ಸಬ್ ರಿಜಿಸ್ಟ್ರಾರ್​​ ಕಚೇರಿಯ ದಸ್ತು ಬರಹಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಬ್​ರಿಜಿಸ್ಟ್ರಾರ್ ಕಚೇರಿ ದಸ್ತು ಬರಹಗಾರ ಲೋಕಾ ಬಲೆಗೆ

author img

By

Published : May 21, 2023, 9:48 AM IST

ದಾವಣಗೆರೆ: ಮನೆ ಖರೀದಿ ಪತ್ರಕ್ಕಾಗಿ ಲಂಚ ಪಡೆಯುತ್ತಿದ್ದ ಸಬ್ ರಿಜಿಸ್ಟ್ರಾರ್​​ ಕಚೇರಿಯ ದಸ್ತು ಬರಹಗಾರನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಹರಿಹರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಂ.ಬಿ.ಪರಮೇಶ್ವರ್ ಸಿಕ್ಕಿ ಬಿದ್ದ ದಸ್ತು ಬರಹಗಾರ.

ಜಿಲ್ಲೆಯ ಹರಿಹರ ನಿವಾಸಿಯಾದ ಮಂಜುನಾಥ್ ಎನ್ನುವರ ಬಳಿ ಪರಮೇಶ್ವರ್ ಲಂಚದ ಬೇಡಿಕೆ ಇಟ್ಟಿದ್ದರು. ಮಂಜುನಾಥ್ ಅವರು ಮನೆ ಖರೀದಿ ಮಾಡಿದ ಸೇಲ್ ಡೀಡ್ ನೋಂದಣಿ ಪತ್ರದ ಅವಶ್ಯಕತೆ ಇದ್ದುದರಿಂದ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ತೆರಳಿದ್ದರು. ದಸ್ತು ಬರಹಗಾರ ಪರಮೇಶ್ವರ್ ನೋಂದಣಿ ಪತ್ರ ನೀಡಬೇಕೆಂದರೆ 20 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.

ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಪರಮೇಶ್ವರ್​ ಅವರನ್ನು ಹಿಂಬಾಲಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಶನಿವಾರ ರಾತ್ರಿ ದೂರುದಾರರಿಂದ 13 ಸಾವಿರ ಲಂಚ ಪಡೆಯುವಾಗ ರೆಡ್​ಹ್ಯಾಂಡಾಗಿ ಹಿಡಿದಿದ್ದಾರೆ.

ಆರೋಪಿ ಪರಮೇಶ್ವರ್​ ಅವರಿಂದ 40 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್​ಪಿ ಎಂ.ಎಸ್.ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್.​ಎಸ್., ಅಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಯನ್ನು ಬಂಧಿಸಲಾಗಿದೆ.

ಹೆಚ್ಚಾದ ಲೋಕಾ ದಾಳಿ: ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಆರೋಪ ಕೇಳಿಬಂದಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಹೆಚ್ಚಿನ ದೂರುಗಳೂ ಬರುತ್ತಿವೆ. ಹೀಗಾಗಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದಾರೆ. ದೂರು ಬಂದ ತಕ್ಷಣ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಹಾಕಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಲೋಕಾ ಭರ್ಜರಿ ಬೇಟೆ: ಕಳೆದ ತಿಂಗಳು ಭ್ರಷ್ಟ ಅಧಿಕಾರಿಗಳ ವಿರುದ್ಧ ಜಾಲ ಬೀಸಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಅಕ್ರಮ‌ ಆಸ್ತಿ ಗಳಿಕೆ ಆರೋಪದ ಮೇರೆಗೆ ಬೆಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದರು. ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳನ್ನು ಜಾಲಾಡಿ ಕೋಟ್ಯಂತರ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ವಶಪಡಿಸಿಕೊಳ್ಳಲಾಗಿತ್ತು. ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 34 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಅಸಮತೋಲನ ಆಸ್ತಿ ಇರುವುದು‌ ಕಂಡುಬಂದಿತ್ತು.

ದಾಳಿಗೊಳಗಾದ ಅಧಿಕಾರಿಗಳು: ಬಳ್ಳಾರಿ ಜಿಲ್ಲೆಯ ಜೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್​ ಹುಸೇನ್ ಸಾಬ್​ ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ಬೆಂಗಳೂರಿನ ಯಲಹಂಕ ವಲಯದ ಬಿಬಿಎಂಪಿ ನಗರ ಯೋಜನೆ ಕೆ.ಎಲ್.ಸಹಾಯಕ ನಿರ್ದೇಶಕರಾದ ಗಂಗಾಧರಯ್ಯ, ಬೀದರ್​ನ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್​ ಸುರೇಶ್ ಮೇಡ, ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕು ಮುಡುಬಿ ಹೋಬಳಿ ನಾಡಾ ಕಚೇರಿಯ ಉಪ ತಹಶೀಲ್ದಾರ್ ವಿಜಯ ಕುಮಾರಸ್ವಾಮಿ, ಬೆಂಗಳೂರು ಬಿಬಿಎಂಪಿ ದೊಮ್ಮನಹಳ್ಳಿ ವಲಯದ ರಾಜಕಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ. ಹನುಮಂತಯ್ಯ, ಡಿ.ಸಿ.ಎಫ್ (ನಿವೃತ್ತ) ಐ. ಎಂ ನಾಗರಾಜ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಹಶೀಲ್ದಾರ್​​ ಎನ್.ಜೆ.ನಾಗರಾಜ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಚೇರಿ ಇಓ ವೆಂಕಟೇಶಪ್ಪ ಅವರಿಗೆ ಸಂಬಂಧಿಸಿದ ನಿವಾಸಗಳ ಮೇಲೆ ದಾಳಿ ನಡೆದಿತ್ತು.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.