ETV Bharat / state

’ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ‘: ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ

ಲಿಂಗಾಯತ ಧರ್ಮವನ್ನು ಸರ್ಕಾರವು ಸ್ವತಂತ್ರ ಧರ್ಮ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಒತ್ತಾಯಿಸಿದ್ದಾರೆ.

lingayat-is-an-independent-religion-says-gurubasava-swamiji-of-pandomatti-viraktamatha
ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ: ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ
author img

By ETV Bharat Karnataka Team

Published : Sep 12, 2023, 5:57 PM IST

ದಾವಣಗೆರೆ : ಲಿಂಗಾಯತ ಎಂಬುದು ಜಾತಿಯಲ್ಲ. ಅದೊಂದು ಧರ್ಮ, ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ. ಅದಕ್ಕಾಗಿ ನಮ್ಮ‌ ಸಂಘರ್ಷ ನಿರಂತರ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಜರುಗಿದ ಶ್ರಾವಣ ಬಂತು ಅನುಭಾವ ತಂತು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಎಂಬುದು ಒಂದು ಜಾತಿಯಾಗಿ ಉಳಿಯಬಾರದು. ಬೌದ್ಧ, ಸಿಖ್, ಜೈನ ಸ್ವತಂತ್ರ ಧರ್ಮಗಳಂತೆ ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ ಆಗಬೇಕು. ಎಲ್ಲರಿಗೂ ಸಮ ಬಾಳು ಸಮ ಪಾಲು ಎಂಬ ಕಾಯಕ ಸಿದ್ದಾಂತದ ಮೇಲೆ ಬಸವಣ್ಣ ಹುಟ್ಟು ಹಾಕಿದ ಧರ್ಮ ಲಿಂಗಾಯತ ಧರ್ಮ ಎಂದು ಹೇಳಿದರು.

OBC ಮೀಸಲಾತಿ ಬೇಕಾಗಿದೆ. ಈಗ ರಾಜ್ಯದಲ್ಲಿ ಇದಕ್ಕೆ ಪೂರಕವಾದ ಸರ್ಕಾರ ಇದೆ. ಇದೇ ಕಾರಣಕ್ಕೆ ಎಸ್ಸಿ ಎಸ್ಟಿ ಸೇರಿದಂತೆ ಹಲವಾರು ಮೀಸಲಾತಿಗಳು ಇವೆ. ಅದೇ ರೀತಿಯಲ್ಲಿ ‌ಎಲ್ಲ ಲಿಂಗಾಯತ ಒಳ ಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಆಗಬೇಕು‌. ಈಗಾಗಲೇ ಲಿಂಗಾಯತರಲ್ಲಿನ ಕೆಲ‌ ಒಳ ಜಾತಿಗಳು ಲಿಂಗಾಯತರ ಪಟ್ಟಿಯಲ್ಲಿ ಇವೆ. ಈಗ ಎಲ್ಲ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ OBC ಪಟ್ಟಿಗೆ ಸೇರ್ಪಡೆ ಮಾಡಬೇಕು. ಇದು ನಮ್ಮ ಆಗ್ರಹವಾಗಿದೆ ಎಂದು ಗುರುಬಸವ ಸ್ವಾಮೀಜಿ ತಿಳಿಸಿದರು.

ಇಲ್ಲಿ ಹಿಂದೂ ಧರ್ಮ ಅಥವಾ ಸನಾತನ ಧರ್ಮದ ಪ್ರಸ್ತಾಪ ಆಗುವುದಿಲ್ಲ: ಇದು ಜಾಗತಿಕ ಲಿಂಗಾಯತ ಧರ್ಮದ ಸಮಾರಂಭವಾಗಿದ್ದು, ಇಲ್ಲಿ ಹಿಂದೂ ಧರ್ಮ ಅಥವಾ ಸನಾತನ ಧರ್ಮದ ಪ್ರಸ್ತಾಪ ಆಗುವುದಿಲ್ಲ. ನಾವು ಬಸವಣ್ಣನವರ ವಿಚಾರಧಾರೆಗಳನ್ನು ಮಾತ್ರ ಪ್ರಸ್ತಾಪ ಮಾಡ್ತೇವೆ. ಜೊತೆಗೆ ಸರ್ಕಾರದಿಂದ ಲಿಂಗಾಯತ ಧರ್ಮವನ್ನು ಅಧಿಕೃತವಾಗಿ ಒಂದು ಧರ್ಮ ಎಂದು ಘೋಷಣೆ ಮಾಡಬೇಕು ಎಂಬುದು ನಮ್ಮ ಉದ್ದೇಶ. ಬಸವಣ್ಣನವರು ಅಂದು ಸ್ಥಾಪನೆ‌ ಮಾಡಿದ ಧರ್ಮವನ್ನು ಲಿಂಗಾಯತ ಧರ್ಮ ಎಂದು ಕರೆದಿದ್ದಾರೆ. ಅದನ್ನೇ ತಾತ್ವಿಕವಾಗಿ ಮುಂದುವರೆಸಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.

ಲಿಂಗಾಯತ ಧರ್ಮದಲ್ಲಿ 99 ಉಪ ಪಂಗಡಗಳಿವೆ : ಲಿಂಗಾಯತ ಧರ್ಮದಲ್ಲಿ 99 ಉಪ ಪಂಗಡಗಳಿವೆ. ಈ ಉಪಪಂಗಡಗಳನ್ನು ಕಾಯಕವನ್ನು ಆಧರಿಸಿ ಆ ಸಮಾಜವನ್ನು ಗುರುತಿಸುವ ಕೆಲಸ ಆಗಿದೆ. ಇವರೆಲ್ಲರೂ ಬಸವಣ್ಣನವರ ತತ್ವಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅನುಭವ ಮಂಟಪವನ್ನು ಒಪ್ಪಿಕೊಂಡಿದ್ದಾರೆ. ಇವರನ್ನೆಲ್ಲ ಒಳಗೊಂಡಿರುವ ಧರ್ಮ ಲಿಂಗಾಯತ ಧರ್ಮ ಎಂದು ಹೇಳಿದರು.

ಇಲ್ಲಿ ಪಂಚಪೀಠಗಳನ್ನು, ವಿರಕ್ತ ಮಠಗಳನ್ನು ಒಪ್ಪಿಕೊಂಡಿರುವ ಪ್ರಶ್ನೆ ಉಧ್ಭವಿಸುವುದಿಲ್ಲ. ಬದಲಾಗಿ ಯಾರು ತಾತ್ವಿಕವಾಗಿ, ಜಾಗತಿಕವಾಗಿ ಅರಿವು ಮೂಡಿಸುತ್ತಿದ್ದಾರೋ ಅಂತವರು ಲಿಂಗಾಯತ ಧರ್ಮ ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇನ್ನು ವೀರಶೈವ ಲಿಂಗಾಯತ ಮಹಾಸಭಾ ಜಾಗತಿಕ ಲಿಂಗಾಯತ ಮಹಾಸಭಾದವರು ನಮ್ಮವರೇ, ಅವರು ಒಬಿಸಿಗೆ ಸೇರಿಸುವ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು, ನಾವ್ಯಾರು ರಾಜರುಗಳಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.