ETV Bharat / state

ಶಿಷ್ಯ ವೇತನಕ್ಕೆ ಆಗ್ರಹ: ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳಿಂದ ಪತ್ರ ಚಳುವಳಿ - JJM Medical College

ಶಿಷ್ಯ ವೇತನಕ್ಕೆ ಆಗ್ರಹಿಸಿ ತಮ್ಮ ಹೋರಾಟ ಮುಂದುವರಿಸಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪತ್ರ ಚಳುವಳಿ ಆರಂಭಿಸಿದ್ದಾರೆ.

Letter Movement
ವೈದ್ಯರು, ವಿದ್ಯಾರ್ಥಿಗಳ ಪತ್ರ ಚಳುವಳಿ
author img

By

Published : Jul 5, 2020, 5:57 PM IST

ದಾವಣಗೆರೆ: ಶಿಷ್ಯ ವೇತನಕ್ಕೆ ಆಗ್ರಹಿಸಿ ತಮ್ಮ ಹೋರಾಟ ಮುಂದುವರಿಸಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪತ್ರ ಚಳುವಳಿ ಆರಂಭಿಸಿದ್ದಾರೆ.

Letter Movement
ಪತ್ರ ಚಳುವಳಿ

ಕಳೆದ ಹದಿನಾರು ತಿಂಗಳಿನಿಂದ ನೀಡಬೇಕಿರುವ ಶಿಷ್ಯ ವೇತನವನ್ನು ಆದಷ್ಟು ಬೇಗ ಕೊಡಿಸಬೇಕೆಂದು ಆಗ್ರಹಿಸಿ ಮುಷ್ಕರ ನಿರತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ​ ನೂರಾರು ಪತ್ರಗಳನ್ನು ಬರೆದಿದ್ದಾರೆ.‌

Letter Movement
ವೈದ್ಯರು, ವಿದ್ಯಾರ್ಥಿಗಳಿಂದ ಪತ್ರ ಚಳುವಳಿ

ಕೊರೊನಾ ವಿರುದ್ಧದ ಹೋರಾಟದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದೇವೆ. ಈಗಲೂ ಕರ್ತವ್ಯ ನಿರ್ವಹಿಸಿ ಮುಷ್ಕರ ನಡೆಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್​ ಭರವಸೆ ಮೇರೆಗೆ ಇಂದು ಮುಷ್ಕರ ನಡೆಸಿಲ್ಲ.‌ ನಾಳೆ ಜಯದೇವ ವೃತ್ತದಲ್ಲಿ ಬೆಳಗ್ಗೆ ಧರಣಿಗೆ ಕೂರುತ್ತೇವೆ. ನಾಳೆ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.