ETV Bharat / state

ಕಾವೇರಿ ವಿವಾದ ಸಂಬಂಧ ಬೀದಿ ಹೋರಾಟಕ್ಕಿಂತ ಕಾನೂನು ಹೋರಾಟ ಮಾಡಬೇಕು : ತೇಜಸ್ವಿ ಪಟೇಲ್

author img

By ETV Bharat Karnataka Team

Published : Sep 27, 2023, 8:52 PM IST

Updated : Sep 27, 2023, 10:32 PM IST

ಕಾವೇರಿ ಹೋರಾಟ ಸಂಬಂಧ ರೂಪುರೇಷೆಗಳನ್ನು ಬದಲಾಯಿಸಬೇಕು. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಪ್ರತಿಭಟನೆ ಮಾಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದ್ದಾರೆ.

ತೇಜಸ್ವಿ ಪಟೇಲ್
ತೇಜಸ್ವಿ ಪಟೇಲ್
ಕಾವೇರಿ ವಿವಾದ ಸಂಬಂಧ ಬೀದಿ ಹೋರಾಟಕ್ಕಿಂತ ಕಾನೂನು ಹೋರಾಟ ಮಾಡಬೇಕು : ತೇಜಸ್ವಿ ಪಟೇಲ್

ದಾವಣಗೆರೆ : ನಾವು ಕಾವೇರಿ ಹೋರಾಟದ ರೂಪುರೇಷೆಗಳನ್ನು ಬದಲಾಯಿಸಬೇಕಿದೆ. ನಮ್ಮ ಹೋರಾಟ ಸಂಬಂಧಪಟ್ಟವರಿಗೆ ಪರಿಣಾಮ ಬೀರುವಂತಿರಬೇಕು. ಬೀದಿ ಹೋರಾಟಕ್ಕಿಂತ ಕಾನೂನು ಹೋರಾಟ ಮಾಡಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ, ರೈತ ಮುಖಂಡ ತೇಜಸ್ವಿ ಪಟೇಲ್ ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕೆಲ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಈ ಸಂಬಂಧ ನಗರದಲ್ಲಿ ಬುಧವಾರ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸುಮಾರು 25 ವರ್ಷಗಳಿಂದ ಗಮನಿಸುತ್ತಿದ್ದೇನೆ. ಕಾವೇರಿ ಹೋರಾಟದಲ್ಲಿ ಬಂದ್, ಚಳವಳಿ, ರಸ್ತೆ ತಡೆ, ಕೊನೆಗೆ ಕರ್ನಾಟಕ ಬಂದ್ ಇದೆಲ್ಲ ಸಹಜ ಪ್ರಕ್ರಿಯೆಯಂತಾಗಿದೆ. ಇಷ್ಟೆಲ್ಲ ಪ್ರತಿಭಟನೆ, ಚಳವಳಿ ನಡೆಸಿದರೂ ಒಂದು ಹನಿ ಕಾವೇರಿ ನೀರು ಬೇರೆಡೆಗೆ ಹರಿಯದಂತೆ ತಡೆಯಲು ಆಗಿದೆಯಾ?. ಆದ್ದರಿಂದ ನಾವು ನಮ್ಮ ಹೋರಾಟದ ರೂಪುರೇಷೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ನಮ್ಮ ಹೋರಾಟ ಸಂಬಂಧಪಟ್ಟವರ ಮೇಲೆ ಪರಿಣಾಮ ಬೀರಬೇಕು. ಬೀದಿ ಹೋರಾಟಕ್ಕಿಂತ ನಾವು ಕಾನೂನು ಹೋರಾಟ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಬೀದಿ ಹೋರಾಟ ಮಾಡಿದರೂ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಮಾಡಬೇಕು. ಇದರ ಬದಲು ಆಡಳಿತ ಪಕ್ಷ, ವಿಪಕ್ಷದವರಿಗೆ, ಅಧಿಕಾರಿಗಳಿಗೆ ಘೇರಾವ್ ಹಾಕಿದರೆ ಪರಿಣಾಮ ಬೀರಬಹುದು. ಬೆಂಗಳೂರಿನಲ್ಲಿ ಕಾವೇರಿ ನೀರನ್ನು ಕುಡಿಯಲು ಬಳಸುತ್ತಾರೆ. ಹಾಗಾಗಿ ಕುಡಿಯಲು ನೀರು ಕೊಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಭತ್ತ ಕಬ್ಬು ಬೆಳೆಯಲು ಅವರು ನೀರು ಕೇಳುವುದಿಲ್ಲ, ಕುಡಿಯಲು ನೀರು ಕೊಟ್ಟು ಭತ್ತ ಕಬ್ಬು ಹಾಗೆಯೇ ಬಿಟ್ಟಿದ್ದರೆ ಈ ಮಟ್ಟದ ಪರಿಣಾಮ ಬೀರುತ್ತಿರಲಿಲ್ಲ ಎಂದು ತೇಜಸ್ವಿ ಪಟೇಲ್​ ಹೇಳಿದರು.

ಬೆಂಗಳೂರಿನ ಜನರಿಗೆ ಸಮಸ್ಯೆ ಆಗುತ್ತಿರುವುದರಿಂದ ಕಾವೇರಿ ಸಮಸ್ಯೆ ಇಡೀ ರಾಜ್ಯದ ಸಮಸ್ಯೆಯಂತೆ ಆಗಿದೆ. ನಾವು ಕಾವೇರಿ ಕೃಷ್ಣ, ಮಹದಾಯಿಗೂ ಇಷ್ಟೇ ಒತ್ತು ಕೊಡಬೇಕಾಗಿದೆ. ಶುಕ್ರವಾರ ಕರೆದಿರುವ ಬಂದ್​​ನಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಘೇರಾವ್ ಹಾಕಿದರೆ ಬೆಂಬಲ ನೀಡುತ್ತೇವೆ. ಆದರೆ ಜನಸಾಮಾನ್ಯರಿಗೆ ತೊಂದರೆ ಕೊಡುವುದಿದ್ದರೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಬಂದ್​ಗೆ ಬೆಂಬಲ : ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್​ಗೆ ದಾವಣಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಬೆಂಬಲ ಘೋಷಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವಕ್ತಾರ ಶಿವರತನ್​, ರಾಜ್ಯ ಬಂದ್​ಗೆ ಒಕ್ಕೂಟದಿಂದ ಬೆಂಬಲ ಸೂಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ. ಮಲತಾಯಿ ಧೋರಣೆ ನಿಲ್ಲಿಸಿ ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಬೇಕಾಗಿದೆ‌. ಒತ್ತಾಯಪೂರ್ವಕವಾಗಿ ಬಂದ್ ಮಾಡುವುದಿಲ್ಲ. ಬೆಳಗ್ಗೆ ಜಯದೇವ ವೃತ್ತದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶಿವರತನ್ ತಿಳಿಸಿದರು.

ಇದನ್ನೂ ಓದಿ : ನಾಡು, ನುಡಿಗೆ ಧಕ್ಕೆಯಾದಾಗ ಹೇಗೆ ಹೋರಾಟ ಮಾಡಬೇಕು ಎನ್ನುವುದನ್ನು ತಮಿಳು ಭಾಷಿಕರನ್ನು ನೋಡಿ ಕಲಿಯಬೇಕು: ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

Last Updated : Sep 27, 2023, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.