ದಾವಣಗೆರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜಯದೇವ ಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮುರುಘಾ ಮಠದಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ದಾವಣಗೆರೆಯ ಶಿವಯೋಗಿ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರಿಗೆ ಮುರುಘಾ ಮಠದ ಶೂನ್ಯ ಪೀಠಾಧೀಪತಿ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ನೀಡಿ ಸನ್ಮಾನಿಸಿದ್ರು.
ಮುರುಘಾ ಮಠದಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಮುರುಘಾ ಮಠ ಈ ಹಿಂದೆ ಆಯ್ಕೆ ಮಾಡಿತ್ತು. ಶಿವಯೋಗಾಶ್ರಮದಲ್ಲಿಂದು ನಡೆದ ಶರಣ ಸಂಸ್ಕ್ರತಿ ಉತ್ಸವದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪ್ರಶಸ್ತಿ ಸ್ವೀಕರಿಸಿದರು.
ಇದಲ್ಲದೆ ಶೂನ್ಯ ಪೀಠ ಅಲ್ಲಮ ಪ್ರಶಸ್ತಿಯನ್ನು ಡಾ. ಡಿಹೆಚ್ ಶಂಕರಮೂರ್ತಿಯವರಿಗೆ, ಶೂನ್ಯ ಪೀಠ ಚನ್ನಬಸವ ಪ್ರಶಸ್ತಿಯನ್ನು ಪ್ರೋ. ಹೆಚ್ ಎ ಭಿಕ್ಷಾವರ್ತಿ ಮಠ ಅವರಿಗೆ, ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿಯನ್ನು ಚೆನ್ನಮ್ಮ ಹಳ್ಳಿಕೇರಿಯವರಿಗೆ ಪ್ರದಾನ ಮಾಡಲಾಯಿತು. ಇಂದು ಜರುಗಿದ ಶರಣ ಸಂಸ್ಕೃತಿ ಉತ್ಸವವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡ್ಬೇಕಾಗಿತ್ತು, ಆದ್ರೆ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ರು.
ಇದನ್ನೂ ಓದಿ: ಅಂದು ವಿರೋಧ ಪಕ್ಷದಲ್ಲಿದ್ದ ಬೊಮ್ಮಾಯಿ ಏನ್ ಕಡ್ಲೆ ಪುರಿ ತಿನ್ನುತ್ತಿದ್ರಾ: ಸಿದ್ದರಾಮಯ್ಯ ಪ್ರಶ್ನೆ