ದಾವಣಗೆರೆ: ಕೋವಿಡ್ ಕಾರಣ ಬಜೆಟ್ಗೆ ಸಂಪನ್ಮೂಲ ಕೊರತೆ ಆಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಸಿಗುತ್ತೆ. ಸಿಎಂ ಬಿಎಸ್ವೈ ಸಂಕಷ್ಟದಲ್ಲಿ ಇರುವ ಎಲ್ಲರಿಗೂ ನ್ಯಾಯ ಒದಗಿಸಲಿದ್ದಾರೆ ಎಂದರು.
ಮೀಸಲಾತಿ ಹೋರಾಟ ಕುರಿತು ಮಾತನಾಡಿ, ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿದೆ. ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಳ ಆಗುತ್ತೆ ಎಂದು ಹೇಳಿದರು.