ETV Bharat / state

ಬಿಜೆಪಿ ಮುಖಂಡ ಕಾಂಗ್ರೆಸ್ ಸೇರ್ಪಡೆ, ಶಾಸಕ ರೇಣುಕಾಚಾರ್ಯಗೆ ಶಾಕ್ - Etv Bharat Kannada

ಹೊನ್ನಾಳಿ ಕುರುಬ ಸಮಾಜದ ಪ್ರಭಾವಿ ಮುಖಂಡ ಎಂ ಆರ್ ಮಹೇಶ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

ಬಿಜೆಪಿ ಮುಖಂಡ ಕಾಂಗ್ರೆಸ್​ ಸೇರ್ಪಡೆ
ಬಿಜೆಪಿ ಮುಖಂಡ ಕಾಂಗ್ರೆಸ್​ ಸೇರ್ಪಡೆ
author img

By

Published : May 5, 2023, 2:30 PM IST

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಎಂ ಆರ್ ಮಹೇಶ್ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಆರ್ ಮಹೇಶ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೊನ್ನಾಳಿ ಕುರುಬ ಸಮಾಜದ ಪ್ರಭಾವಿ ಮುಖಂಡರಾಗಿದ್ದ ಇವರು ಇಂದು ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ರೇಣುಕಾಚಾರ್ಯಗೆ ಶಾಕ್ ಕೊಟ್ಟಂತಾಗಿದೆ.

ಈ ವೇಳೆ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂ ಆರ್ ಮಹೇಶ್, ನಾನು ಹುಟ್ಟು ಹೋರಾಟಗಾರ. ನನ್ನ ಕಣಕಣದಲ್ಲೂ ಹಿಂದುತ್ವ ಇದೆ. ಹಾಲಿ ಶಾಸಕ ರೇಣುಕಾಚಾರ್ಯ ಅವರ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಈ ಹಿಂದೆ ಜೆಡಿಎಸ್​ಗೆ ತೆರಳಿದ್ದೆ. ಬಳಿಕ ಬಿಜೆಪಿಯಿಂದ ಜಿ ಪಂ ಸದಸ್ಯನಾಗಿದ್ದೆ. 2013 ರಲ್ಲಿ ಶಾಂತನಗೌಡ್ರು ಶಾಸಕರಾಗಿದ್ದಾಗ ಎಲ್ಲಾ ರೀತಿಯ ಸೌಕರ್ಯ ಸಿಗ್ತು, ರೇಣುಕಾಚಾರ್ಯ ಶಾಸಕರಾದ ಬಳಿಕ ಬರುವ ಅನುದಾನವನ್ನೆಲ್ಲ ಶಾಸಕ ರೇಣುಕಾಚಾರ್ಯರವರ ಅಣ್ಣತಮ್ಮಂದಿರೇ ಬಳಕೆ ಮಾಡಿಕೊಳ್ಳುತ್ತಿದ್ದರು. ನಾನು ಯುವ ಪಡೆ ಕಟ್ಟುತ್ತೇನೆ ಎಂದು ನನ್ನನ್ನು ಹಿಮ್ಮೆಟ್ಟಿಸಲು ಜೈಲಿಗೆ ಕಳ್ಸಿದ್ರು. ಆದ್ರೆ ಹಿಂದುತ್ವಕ್ಕಾಗಿ ನಾನು ಬಿಜೆಪಿಯಲ್ಲಿದ್ದೆ. ಪಕ್ಷದ ಕೆಲ ನಾಯಕರಿಗೆ ಹೇಳಿದ್ರೂ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದ ಅವರು ನಮ್ಮ ಸಮುದಾಯಕ್ಕೆ ಜಿಲ್ಲೆಯಲ್ಲಿ ಎಲ್ಲೂ ಟಿಕೆಟ್ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ಸುದೀಪ್ ರೋಡ್ ಶೋ: ಮತಬೇಟೆಯಲ್ಲಿ 'ವೀರ ಮದಕರಿ' ಸಿನಿಮಾ ಡೈಲಾಗ್

ನಾನು ಬಿಜೆಪಿ ಪಕ್ಷ ಬಿಡ್ತಿಲ್ಲ. ಬದಲಾಗಿ ಪಕ್ಷ ನನ್ನನ್ನು ಬಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹೇಶ್, ಶೆಟ್ಟರ್, ಸವದಿ, ಆರ್ ಶಂಕರ್, ವಿಶ್ವನಾಥ್ ಅವರನ್ನು ಪಕ್ಷದಲ್ಲಿ ಕಡೆಗಾಣಿಸಿದ್ರು ಎಂದು ವಾಗ್ದಾಳಿ ನಡೆಸಿದರು. ಹಾಲಿ‌ ಶಾಸಕರು ನನಗೆ ಎಲ್ಲೂ ಪ್ರಚಾರಕ್ಕೆ ಕರೆದಿಲ್ಲ. ನಮ್ಮ ಸಮಾಜದ ಮುಖಂಡರು ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್​ಗೆ ಬರುವಂತೆ ಮನವಿ ಮಾಡಿದ್ರು.

ಇದನ್ನೂ ಓದಿ: ಬಿಟಿಎಂ ಲೇಔಟ್​​ನಲ್ಲಿ ಮತ್ತೆ ಸೋಲಿಲ್ಲದ ಸರದಾರರಾಗುವರೇ ರಾಮಲಿಂಗಾರೆಡ್ಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.