ದಾವಣಗೆರೆ: ಶ್ರೀ ಮಹೇಶ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಬಾತಿ ಕೆರೆ ಸಮೀಪ ನಡೆದಿದ್ದು, ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ.
ಹಿಂದಿನಿಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಹಾಗು ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.
ಬಳ್ಳಾರಿ ಜಿಲ್ಲೆಯ ನುಗ್ಗೆಹಳ್ಳಿ ಅಯ್ಯನಹಳ್ಳಿಯ ರಂಭಾಪುರಿ ಶಾಖಾ ಮಠವಾಗಿರುವ ಹಿರೇಮಠದ ಶ್ರೀಗಳು, ಬಾತಿ ಗ್ರಾಮದಲ್ಲಿರುವ ತಪೋವನದ ಶ್ರೀಶೈಲ ಜಗದ್ಗುರುಗಳ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.