ದಾವಣಗೆರೆ: ಎಸ್ಟಿ ಮೀಸಲಾತಿ ಸಿಗುವವರೆಗೂ ಸ್ವಾಮೀಜಿಗಳ ಬೆನ್ನಿಗೆ ನಿಲ್ಲಿ, ಇದುವರೆಗೂ ಎಸ್ಟಿಗೆ ಸೇರಿಸದೆ ಏನ್ ಮಾಡಿದ್ರೂ ಅಂತ ಕೆಲವರು ಕೇಳ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೂ ಸಾಕಷ್ಟು ಪಕ್ಷಗಳು ಅಧಿಕಾರದಲ್ಲಿದ್ದವು. ಅವರು ಹೇಳಬೇಕು ಯಾಕೇ ಎಸ್ಟಿಗೆ ಸೇರಿಸಿಲ್ಲ ಎಂದು. ಈ ವೇದಿಕೆ ಮೇಲೆ ಕುಳಿತಿರುವವರು ಅಲ್ಲ ಹೇಳೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ಓದಿ: ಪ್ರಾದೇಶಿಕ ಆಯುಕ್ತರು, ಡಿಸಿ, ಸಿಇಓಗಳ ಜೊತೆ ಸಿಎಂ ಸಭೆ; ಚರ್ಚೆಯಾಗುವ ಅಂಶಗಳೇನು?
ದಾವಣಗೆರೆಯಲ್ಲಿ ನಡೆದ ಪಾದಯಾತ್ರೆ ಜನಜಾಗೃತಿ ಸಮಾವೇಶದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ದೇವರಾಜ್ ಅರಸ್ ಹಾಗೂ ಸಿದ್ದರಾಮಯ್ಯ ಕೆಲವೇ ಕೆಲವು ಜಿಲ್ಲೆಗಳ ಕುರುಬರನ್ನು ಎಸ್ಟಿಗೆ ಸೇರಿಸಲು ಶಿಪಾರಸು ಮಾಡಿದ್ರು, ಆದರೆ ಈಗ ಕೇಳ್ತಾ ಇರೋದು ಇಡೀ ದೇಶದ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಿ ಎಂದು. ಎಸ್ಟಿ ಹೋರಾಟಕ್ಕೆ ಪೂಜ್ಯ ಸ್ವಾಮೀಜಿಗಳು ಸಿದ್ದರಾಮಯ್ಯರನ್ನು ಅವರ ಮನೆಗೆ ಹೋಗಿ ಕರೆದ್ರು, ನಾನು ಕೂಡ ಸಿದ್ದರಾಮಯ್ಯನವರಿಗೆ ಕರೆಮಾಡಿ ಮಾತನಾಡಿದೆ, ಅದರೂ ಕೂಡ ಅವರು ಬರಲಿಲ್ಲ.
ಪಾದಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಿದ್ದಂತೆ ಮಾತನಾಡಲು ಶುರು ಮಾಡಿದ್ರು. ನನ್ನನ್ನು ಪಾದಯಾತ್ರೆಗೆ ಕರೆದಿಲ್ಲ ಎಂದು ಹೇಳ್ತಾರೆ. ಪಾದಯಾತ್ರೆಗೆ ಬರೋ ಹಾಗೇ ಇದ್ರೆ ಬನ್ನಿ, ಆದರೆ ಈ ರೀತಿ ಮಾತನಾಡಬೇಡಿ ಎಂದು ಹೇಳಿದ್ರು. ಎಸ್ಟಿ ಮೀಸಲಾತಿಗೆ ಪಾದಯಾತ್ರೆ ಆರಂಭವಾಗಿದ್ದು, ಕೈ ಮುಗಿದು ಬೇಡಿಕೊಳ್ಳುತ್ತೇನೆ ಇದರಲ್ಲಿ ರಾಜಕಾರಣ ಮಾಡಬೇಡಿ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.