ETV Bharat / state

ಕಾಂಗ್ರೆಸ್​​​​​​​​​ ಈಗ ಒಡೆದ ಮನೆಯಾಗಿದೆ, ಅದರ ಲಾಭ ಬಿಜೆಪಿ ಪಡೆಯಲಿದೆ: ಈಶ್ವರಪ್ಪ - 12 ಸ್ಥಾನ ಬಿಜೆಪಿ ಗೆಲ್ಲಲಿದೆ...ಕೆ.ಎಸ್​​ ಈಶ್ವರಪ್ಪ

ಹಿರಿಯ ನಾಯಕ ಮುನಿಯಪ್ಪ ಸೇರಿದಂತೆ ಒಟ್ಟು 12 ಜನ ರಾಜ್ಯದಲ್ಲಿ ಪಕ್ಷದ ದುಸ್ಥಿತಿಯ ಬಗ್ಗೆ ಪತ್ರದ ಮೂಲಕ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್​​ನಲ್ಲಿ ಯಾವುದೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಕೊನೆಗೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬಂದು ಚುನಾವಣೆ ಎದುರಿಸುವಂತಹ ಶೋಚನೀಯ ಸ್ಥಿತಿಗೆ ಕಾಂಗ್ರೆಸ್​​ ಬಂದು ತಲುಪಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಕೆ.ಎಸ್​​ ಈಶ್ವರಪ್
ಕೆ.ಎಸ್​​ ಈಶ್ವರಪ್
author img

By

Published : Nov 26, 2019, 9:40 PM IST

ಹರಿಹರ: 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕನಿಷ್ಠ 12 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಶಿವಮೊಗ್ಗದಿಂದ ಹೊಸಪೇಟೆ ಚುನಾವಣೆ ಪ್ರಚಾರಕ್ಕೆ ಹೊಗುವ ಮಾರ್ಗ ಮಧ್ಯೆ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯ ಪರ ವಾತವರಣವಿರುವುದರಿಂದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್​​ ಪಕ್ಷವು ಒಡೆದ ಮನೆಯಂತಾಗಿದ್ದು, ಸಿದ್ದರಾಮಯ್ಯ ಒಂಟಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್​​ನಲ್ಲಿ ಮತ್ತೆ ಮೂಲ-ವಲಸಿಗ ಎಂಬ ಕೂಗು ಪ್ರಾರಂಭವಾಗಿದೆ. ಹಿರಿಯ ನಾಯಕ ಮುನಿಯಪ್ಪ ಸೇರಿದಂತೆ ಒಟ್ಟು 12 ಜನ ರಾಜ್ಯದಲ್ಲಿ ಪಕ್ಷದ ದುಸ್ಥಿತಿಯ ಬಗ್ಗೆ ಪತ್ರದ ಮೂಲಕ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್​​ನಲ್ಲಿ ಯಾವುದೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಕೊನೆಗೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಂದು ಚುನಾವಣೆ ಎದುರಿಸುವಂತಹ ಶೋಚನೀಯ ಸ್ಥಿತಿಗೆ ಕಾಂಗ್ರೆಸ್​​ ಬಂದು ತಲುಪಿದೆ. ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎಂದರು.

ಕೆ.ಎಸ್​.ಈಶ್ವರಪ್ಪ, ಸಚಿವ

15ರಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಧರ್ಮ ವಿಭಜನೆ ಎಂಬ ಪಾಪದ ಕೆಲಸಕ್ಕೆ ಕೈಹಾಕಿದ ಕಾಂಗ್ರೆಸ್​​ ಸ್ಥಿತಿಯನ್ನು ಗಮನಿಸಿದ್ದೀರಿ. ನಾವು ಯಾವತ್ತು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ. ಬದಲಾಗಿ ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಮಾಡಿದ ಪರಿಣಾಮ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುವುದೇ ಸಾಕ್ಷಿ ಎಂದರು.

ಧರ್ಮವನ್ನು ಒಡೆದರವರು ಸಿದ್ದರಾಮಯ್ಯ. ವೀರಶೈವ ಧರ್ಮ ಒಡೆದ ಪರಿಣಾಮ 120 ಕ್ಷೇತ್ರದಲ್ಲಿ ಗೆದ್ದ ಪಕ್ಷ ಕಳೆದ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿ ಅಧೋಗತಿಗೆ ಬಂದು ತಲುಪಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವು ಧರ್ಮಗಳ ನಡುವೆ ಬೆಂಕಿ ಹಚ್ಚಿ ಅದರ ಲಾಭ ಪಡೆಯುವ ನೀಚ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಆರೊಪಿಸಿದರು.

Intro:15 ಕ್ಷೇತ್ರಗಳಲ್ಲಿ ಕನಿಷ್ಟ 12 ಸ್ಥಾನ ಬಿಜೆಪಿ ಗೆಲ್ಲಲಿದೆ

Into
ಹರಿಹರ : 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಟ 12 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು.

Body
ನಗರದಲ್ಲಿ ಮಂಗಳವಾರ ಶಿವಮೊಗ್ಗ ದಿಂದ ಹೊಸಪೇಟೆ ಚುನಾವಣೆ ಪ್ರಚಾರಕ್ಕೆ ಹೊಗುವ ಮಾರ್ಗ ಮಧ್ಯೆ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಅವರು ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯ ವಾತವರಣವಿರುವುದರಿಂದ ಉಪಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದರು.
ಕಾಂಗ್ರೇಸ್ ಪಕ್ಷವು ಒಡೆದ ಮನೆಯಂತಾಗಿದ್ದು ಸಿದ್ದರಾಮಯ್ಯ ಒಂಟಿಯಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಕಾಂಗ್ರೇಸ್‌ನಲ್ಲಿ ಮತ್ತೆ ಮೂಲ-ವಲಸಿಗ ಎಂಬ ಕೊಗು ಮತ್ತೆ ಪ್ರಾರಂಭವಾಗಿದ್ದು ಹಿರಿಯ ನಾಯಕ ಮುನಿಯಪ್ಪ ಸೇರಿದಂತೆ ಒಟ್ಟು 12 ಜನ ರಾಜ್ಯದಲ್ಲಿ ಪಕ್ಷದ ದುಸ್ಥಿತಿಯ ಬಗ್ಗೆ ಪತ್ರ ಮೂಲಕ ರಾಷ್ರ್ಟೀಯ ನಾಯಕರಿಗೆ ತಿಳಿಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೇಸ್‌ನಲ್ಲಿ ಯಾವುದು ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.
         ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರವರು ಬಂದು ಚುನಾವಣೆಯನ್ನು ಎದುರಿಸುವಂತ ಶೋಚನೀಯ ಸ್ಥಿತಿಗೆ ಬಂದು ತಲುಪಿರುವುದು ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದು ಕೊಳ್ಳಲಿದೆ ಎಂದ ಅವರು ಬಿಜೆಪಿ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಉಪ ಚುನಾವಣೆಯನ್ನು ಗೇಲ್ಲಲೇಬೆಕೆಂಬ ಗುರಿಯಿಟ್ಟು ಕೊಂಡು ಹೊರಾಟ ಮಾಡುತ್ತಿದೆ. 15 ರಲ್ಲಿ ಕನಿಷ್ಟ 12 ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೆವೆ ಎಂದರು.
ಬಿಜೆಪಿ ಪಕ್ಷವು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಧರ್ಮ ವಿಭಜನೆ ಎಂಬ ಪಾಪದ ಕೆಲಸಕ್ಕೆ ಕೈಹಾಕಿದ ಕಾಂಗ್ರೇಸ್ ಸ್ಥಿತಿಯನ್ನು ಗಮನಿಸಿದ್ದಿರಿ. ನಾವು ಯಾವತ್ತು ಜಾತಿ ಮತ್ತು ಧರ್ಮ ಹೆಸರಿನಲ್ಲಿ ಚುನಾವಣೆಯನ್ನು ಮಾಡಿಲ್ಲ ಬದಲಾಗಿ ಅಭಿವೃದ್ದಿಯ ಹೆಸರಿನಲ್ಲಿ ಚುನಾವಣೆ ಮಾಡಿದ ಪರಿಣಾಮ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುದೇ ಸಾಕ್ಷಿ ಎಂದರು.
ಧರ್ಮವನ್ನು ಒಡೆದರವರು ನಾವಲ್ಲ, ಅದು ಸಿದ್ದರಾಮಯ್ಯ ಕೆಲಸ ವೀರಶೈವ ಧರ್ಮ ಒಡೆದ ಪರಿಣಾಮ 120 ಕ್ಷೇತ್ರದಲ್ಲಿ ಗೆದ್ದ ಪಕ್ಷ ಕಳೆದ ಚುನಾವಣೆಯಲ್ಲಿ 27 ಸ್ಥಾನ ಪಡೆದು ಅದೊಗತಿಗೆ ಬಂದು ತಲುಪಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವು ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಅದರ ಲಾಭ ಪಡೆಯುವ ನೀಚ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಅರೊಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ವಿರೊಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬುದಕ್ಕೆ ಮೈತ್ರಿ ಸರ್ಕಾರದಲ್ಲಿ ಅವರು ಕೂಡ ಬಿಜೆಪಿ ಶಾಸಕರ ಕ್ಷೇತ್ರಗಳಗೆ ಅನುದಾನ ಬಿಡುಗಡೆ ಮಾಡುತ್ತಿರಲ್ಲ ಎಂಬುದು ಅಷ್ಟೆ ಸತ್ಯ ಆದರೆ ನಮ್ಮ ಸರ್ಕಾರದಲ್ಲಿ ಪಕ್ಷ ಬೇದವಿಲ್ಲದೆ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

Conclusion:
ಈ ಸಂದಂರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ನಗರ ಘಟಕದ ಅಧ್ಯಕ್ಷ ಅಜೀತ್ ಸಾವಂತ್, ಮುಖಂಡರಾದ ಎಚ್.ಶಿವಾನಂದಪ್ಪ, ನಗರ ಘಟಕ ಉಪಾಧ್ಯಕ್ಷ ಎಚ್.ಮಂಜಾನಾಯ್ಕ್, ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಬಾತಿ ಚಂದ್ರಶೇಖರ್, ರಾಘವೇಂದ್ರ ಉಪಾಧ್ಯಾಯ, ವೆಂಕಟೇಶ್ ಶೆಟ್ಟಿ, ವಾಸು ಚಂದಾಪೂರ ಮತ್ತಿತರರಿದ್ದರು.Body:15 ಕ್ಷೇತ್ರಗಳಲ್ಲಿ ಕನಿಷ್ಟ 12 ಸ್ಥಾನ ಬಿಜೆಪಿ ಗೆಲ್ಲಲಿದೆ

Into
ಹರಿಹರ : 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಟ 12 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು.

Body
ನಗರದಲ್ಲಿ ಮಂಗಳವಾರ ಶಿವಮೊಗ್ಗ ದಿಂದ ಹೊಸಪೇಟೆ ಚುನಾವಣೆ ಪ್ರಚಾರಕ್ಕೆ ಹೊಗುವ ಮಾರ್ಗ ಮಧ್ಯೆ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಅವರು ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯ ವಾತವರಣವಿರುವುದರಿಂದ ಉಪಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎಂದರು.
ಕಾಂಗ್ರೇಸ್ ಪಕ್ಷವು ಒಡೆದ ಮನೆಯಂತಾಗಿದ್ದು ಸಿದ್ದರಾಮಯ್ಯ ಒಂಟಿಯಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಕಾಂಗ್ರೇಸ್‌ನಲ್ಲಿ ಮತ್ತೆ ಮೂಲ-ವಲಸಿಗ ಎಂಬ ಕೊಗು ಮತ್ತೆ ಪ್ರಾರಂಭವಾಗಿದ್ದು ಹಿರಿಯ ನಾಯಕ ಮುನಿಯಪ್ಪ ಸೇರಿದಂತೆ ಒಟ್ಟು 12 ಜನ ರಾಜ್ಯದಲ್ಲಿ ಪಕ್ಷದ ದುಸ್ಥಿತಿಯ ಬಗ್ಗೆ ಪತ್ರ ಮೂಲಕ ರಾಷ್ರ್ಟೀಯ ನಾಯಕರಿಗೆ ತಿಳಿಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೇಸ್‌ನಲ್ಲಿ ಯಾವುದು ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.
         ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರವರು ಬಂದು ಚುನಾವಣೆಯನ್ನು ಎದುರಿಸುವಂತ ಶೋಚನೀಯ ಸ್ಥಿತಿಗೆ ಬಂದು ತಲುಪಿರುವುದು ಇದರ ಸಂಪೂರ್ಣ ಲಾಭವನ್ನು ಬಿಜೆಪಿ ಪಡೆದು ಕೊಳ್ಳಲಿದೆ ಎಂದ ಅವರು ಬಿಜೆಪಿ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಉಪ ಚುನಾವಣೆಯನ್ನು ಗೇಲ್ಲಲೇಬೆಕೆಂಬ ಗುರಿಯಿಟ್ಟು ಕೊಂಡು ಹೊರಾಟ ಮಾಡುತ್ತಿದೆ. 15 ರಲ್ಲಿ ಕನಿಷ್ಟ 12 ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೆವೆ ಎಂದರು.
ಬಿಜೆಪಿ ಪಕ್ಷವು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಧರ್ಮ ವಿಭಜನೆ ಎಂಬ ಪಾಪದ ಕೆಲಸಕ್ಕೆ ಕೈಹಾಕಿದ ಕಾಂಗ್ರೇಸ್ ಸ್ಥಿತಿಯನ್ನು ಗಮನಿಸಿದ್ದಿರಿ. ನಾವು ಯಾವತ್ತು ಜಾತಿ ಮತ್ತು ಧರ್ಮ ಹೆಸರಿನಲ್ಲಿ ಚುನಾವಣೆಯನ್ನು ಮಾಡಿಲ್ಲ ಬದಲಾಗಿ ಅಭಿವೃದ್ದಿಯ ಹೆಸರಿನಲ್ಲಿ ಚುನಾವಣೆ ಮಾಡಿದ ಪರಿಣಾಮ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುದೇ ಸಾಕ್ಷಿ ಎಂದರು.
ಧರ್ಮವನ್ನು ಒಡೆದರವರು ನಾವಲ್ಲ, ಅದು ಸಿದ್ದರಾಮಯ್ಯ ಕೆಲಸ ವೀರಶೈವ ಧರ್ಮ ಒಡೆದ ಪರಿಣಾಮ 120 ಕ್ಷೇತ್ರದಲ್ಲಿ ಗೆದ್ದ ಪಕ್ಷ ಕಳೆದ ಚುನಾವಣೆಯಲ್ಲಿ 27 ಸ್ಥಾನ ಪಡೆದು ಅದೊಗತಿಗೆ ಬಂದು ತಲುಪಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವು ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಅದರ ಲಾಭ ಪಡೆಯುವ ನೀಚ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಅರೊಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ವಿರೊಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬುದಕ್ಕೆ ಮೈತ್ರಿ ಸರ್ಕಾರದಲ್ಲಿ ಅವರು ಕೂಡ ಬಿಜೆಪಿ ಶಾಸಕರ ಕ್ಷೇತ್ರಗಳಗೆ ಅನುದಾನ ಬಿಡುಗಡೆ ಮಾಡುತ್ತಿರಲ್ಲ ಎಂಬುದು ಅಷ್ಟೆ ಸತ್ಯ ಆದರೆ ನಮ್ಮ ಸರ್ಕಾರದಲ್ಲಿ ಪಕ್ಷ ಬೇದವಿಲ್ಲದೆ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

Conclusion:
ಈ ಸಂದಂರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ನಗರ ಘಟಕದ ಅಧ್ಯಕ್ಷ ಅಜೀತ್ ಸಾವಂತ್, ಮುಖಂಡರಾದ ಎಚ್.ಶಿವಾನಂದಪ್ಪ, ನಗರ ಘಟಕ ಉಪಾಧ್ಯಕ್ಷ ಎಚ್.ಮಂಜಾನಾಯ್ಕ್, ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಬಾತಿ ಚಂದ್ರಶೇಖರ್, ರಾಘವೇಂದ್ರ ಉಪಾಧ್ಯಾಯ, ವೆಂಕಟೇಶ್ ಶೆಟ್ಟಿ, ವಾಸು ಚಂದಾಪೂರ ಮತ್ತಿತರರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.