ಹರಿಹರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಗರಸಭಾ ಆವರಣದಲ್ಲಿ ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು.
ಪತ್ರಿಕೆ ವಿತರಕರಿಗೆ ಆಹಾರ ಪದಾರ್ಥಗಳ ವಿತರಣೆ . ನಂತರ ಮಾತನಾಡಿದ ಅವರು, ಇಂತಹ ಸನ್ನಿವೇಶದಲ್ಲಿ ಸಹಾಯ ಮಾಡುವ ಮೂಲಕ ಬಡ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ಡೌನ್ನಿಂದಾಗಿ ಹಲವರು ಬಡವರು, ಕೂಲಿ ಕಾರ್ಮಿರಿಗೆ ಕೆಲಸವಿಲ್ಲದೆ ತಮ್ಮ ಬದುಕನ್ನು ಸಾಗಿಸುವುದು ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಹರಿಹರ ತಾಲೂಕಿನ ಹಲವಾರು ಬಡ ಕುಟುಂಬಗಳಿಗೆ ನಗರದ ಸಮಾಜ ಸೇವಕ ಶ್ರೀನಿವಾಸ್ರವರು ಆಹಾರ ಪದಾರ್ಥಗಳ ಕಿಟ್ ತಯಾರಿಸಿ ವಿತರಿಸುವ ಮೂಲಕ ಬಡವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ, ಜಿಲ್ಲಾಧಿಕಾರಿ ಮಾಹಾಂತೇಶ ಬೀಳಗಿ, ಡಿವೈಎಸ್ಪಿ ಮಂಜುನಾಥ ಗಂಗಲ್, ಸಿಇಓ ಪದ್ಮ ಬಲವಂತಪ್ಪ, ತಹಶಿಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ, ಶ್ರೀನಿವಾಸ ನಂದಿಗಾವಿ ಸೇರಿದಂತೆ ಮತ್ತಿತರಿದ್ದರು.