ದಾವಣಗೆರೆ: ಪ್ರಧಾನಿ ಮೋದಿಯವರ ಕಣ್ಣೀರು ಮೊಸಳೆ ಕಣ್ಣೀರು ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಮೂರು ಕರಾಳ ರೈತ ವಿರೋಧಿ ಕಾಯ್ದೆಗಳನ್ನು ತಂದಿದ್ದಾರೆ. ತಿಂಗಳುಗಟ್ಟಲೆ ರೈತರು ಚಳಿ ಗಾಳಿ ಮಳೆಯನ್ನು ಎದುರಿಸಿ ಪ್ರತಿಭಟನೆ ಮಾಡುತ್ತಿದ್ದು, ಎಪ್ಪತ್ತು ರೈತರು ಮರಣ ಹೊಂದಿದ್ದಾರೆ. ಇದರ ಬಗ್ಗೆ ಕಣ್ಣೀರ ಹಾಕಬೇಕಾಗಿದ್ದ ಪ್ರಧಾನಿಯವರು ರಾಜ್ಯಸಭಾದ ವಿರೋಧ ಪಕ್ಷದ ನಾಯಕ ಗುಲಾಂ ನಬೀ ಆಜಾದ್ರವರ ಅವಧಿ ಮುಗಿದಿದ್ದರಿಂದ ಭಾಷಣ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಇದು ಕಣೀರಲ್ಲ ಮೊಸಳೆ ಕಣ್ಣೀರು ಎಂದು ವ್ಯಂಗ್ಯವಾಡಿದರು.
ಪ್ರತಿಭಟನಾನಿರತ ರೈತರು ಮರಣ ಹೊಂದಿದ್ರೇ ಇವರಿಗೆ ಬಾರದ ಕಣ್ಣೀರು ರಾಜ್ಯ ಸಭೆಯಲ್ಲಿ ಮೊಸಳೆ ಕಣ್ಣೀರು ಹಾಕಿದ್ದಾರೆ.