ETV Bharat / state

'ದಾವಣಗೆರೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ವಾಮಮಾರ್ಗ..' - ದಾವಣಗೆರೆ ಮಹಾನಗರ ಪಾಲಿಕೆ

ಜನರೇ ಚುನಾವಣೆಯಲ್ಲಿ ಬಿಜೆಪಿಯನ್ನ ತಿರಸ್ಕರಿಸಿದ್ದಾರೆ. ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೆಟ್ಟ ಸಂಪ್ರದಾಯದಿಂದ ಅಧಿಕಾರಕ್ಕೆ ಬರಲು ಬಿಜೆಪಿ ಮುಂದಾಗುತ್ತಿದೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಡಿ.ಬಸವರಾಜ್‌ ಹೇಳಿದರು.

Davangere
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ -ಉಪಮೇಯರ್ ಆಯ್ಕೆಯಲ್ಲಿ ಲೋಪ ಆರೋಪ
author img

By

Published : Feb 17, 2020, 7:58 AM IST

ದಾವಣಗೆರೆ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರವನ್ನ ಬಿಜೆಪಿ ನಡೆಸಿದೆ. ಇದಕ್ಕೆ ದೇಶದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎನ್ನುವ ರೀತಿ ಆಪರೇಷನ್ ಕಮಲ ಸಂಪ್ರದಾಯ ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಬಂದ ದಿವಸ 45 ಮಂದಿ ಪಾಲಿಕೆ ಸದಸ್ಯರು, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್ ಎ ರವೀಂದ್ರನಾಥ್, ಸಂಸದ ಜಿ ಎಂ ಸಿದ್ದೇಶ್ವರ್, ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ಸೇರಿ 50 ಜನ ಮತದಾರರಿದ್ದರು. ಆದರೆ, ಫೆಬ್ರವರಿ 10 ರಂದು ಏಕಾಏಕಿ ಮತದಾನ ಮಾಡುವವರ ಸಂಖ್.ಯೆ 61ಕ್ಕೇ ಏರಿಕೆಯಾಗಿದೆ ಅಂತಾ ಆರೋಪಿಸಿದರು.

ದಾವಣಗೆರೆ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ-ಕಾಂಗ್ರೆಸ್‌ ಫೈಟ್‌..

ಅದೇ ದಿನ ರಾತ್ರಿ ವಿಧಾನಪರಿಷತ್ ಸದಸ್ಯ ಹನುಮಂತ ರುದ್ರಪ್ಪ ನಿರಾಣಿ ಹೆಸರನ್ನೂ ಸೇರಿಸಲಾಗಿದೆ. ಈಗ ಪಾಲಿಕೆ ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡುವವರ ಸಂಖ್ಯೆ 62 ಆಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ. ಅರ್ಹ ಮತದಾರರಿಗೆ ಅವಕಾಶ ನೀಡಲಿ. ಚುನಾವಣೆ ರದ್ದುಪಡಿಸಿ ಅಥವಾ ಮುಂದೂಡಬೇಕು. ಹಾಲು ಕುಡಿದರೇ ಬದುಕುವುದು ಕಷ್ಟ, ಅಂತಹುದರಲ್ಲಿ ಬಿಜೆಪಿಯವರು ವಿಷ ಕುಡಿದು ಬದುಕಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಹುನ್ನಾರ ಬಿಜೆಪಿ ಮಾಡುತ್ತಿದೆ. ದೇಶದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎನ್ನುವ ರೀತಿ ಆಪರೇಷನ್ ಕಮಲ ಸಂಪ್ರದಾಯ ಹುಟ್ಟು ಹಾಕಿದರು. ಇಂತಹ ಕೆಟ್ಟ ಸಂಪ್ರದಾಯ ಈಗ ಸ್ಥಳೀಯ ಸಂಸ್ಥೆಗಳಿಗೂ ಕಾಲಿಡುತ್ತಿದೆ ಅಂತಾ ಕಿಡಿಕಾರಿದರು.

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ -ಉಪಮೇಯರ್ ಚುನಾವಣೆ ಇದಕ್ಕೆ ಜೀವಂತ ನಿದರ್ಶನ. ಜನರೇ ಚುನಾವಣೆಯಲ್ಲಿ ಬಿಜೆಪಿಯನ್ನ ತಿರಸ್ಕರಿಸಿದ್ದಾರೆ. ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೆಟ್ಟ ಸಂಪ್ರದಾಯದಿಂದ ಅಧಿಕಾರಕ್ಕೆ ಬರಲು ಬಿಜೆಪಿ ಮುಂದಾಗುತ್ತಿದೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಡಿ.ಬಸವರಾಜ್‌ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.