ETV Bharat / state

ದಾವಣಗೆರೆ; ರಾಜ್ಯದಲ್ಲೇ ಮಾದರಿ ಕೋವಿಡ್ ಕಂಟ್ರೋಲ್ ರೂಮ್​

ಜಿಲ್ಲಾ ಕೋವಿಡ್-19 ಕಂಟ್ರೋಲ್ ರೂಮ್​ಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆ್ಯಪ್ ಮೂಲಕ ಜಿಲ್ಲೆಗಳು ಐಸಿಎಂಆರ್​ನಿಂದ ಮಾಹಿತಿ ಪಡೆದು ತಾಲೂಕುವಾರು ಲೈನ್‍ಲಿಸ್ಟ್ ಮಾಡಲಾಗುತ್ತಿತ್ತು. ಲೈನ್‍ಲಿಸ್ಟ್ ಅ್ಯಪ್‍ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ ಆ್ಯಪ್‍ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಇದೀಗ ಈ ಆಪ್‍ಗಳನ್ನು ವಿಲೀನಗೊಳಿಸಿ ಒಂದು ಲೈನ್‍ಲಿಸ್ಟ್ ಆ್ಯಪ್ ಅಭಿವೃದ್ದಿಪಡಿಸಲಾಗಿದ್ದು, ಈ ಕಂಟ್ರೋಲ್ ರೂಮ್​​ನಿಂದ ಕಾರ್ಯ ನಿರ್ವಹಿಸಲಾಗುವುದು ಎಂದರು.

ಕೋವಿಡ್-19 ಕಂಟ್ರೋಲ್ ರೂಮ್​ಗೆ ಜಿಲ್ಲಾಧಿಕಾರಿ ಚಾಲನೆ

author img

By

Published : Nov 20, 2020, 10:57 PM IST

ದಾವಣಗೆರೆ: ಕೊರೊನಾ ಸೋಂಕಿತರಿಗೆ ತ್ವರಿತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮೇಲ್ವಿಚಾರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಕೋವಿಡ್ ಕಂಟ್ರೋಲ್ ರೂಮ್​ ರಚಿಸಲಾಗಿದ್ದು, ಇದು ರಾಜ್ಯದಲ್ಲೇ ವ್ಯವಸ್ಥಿತವಾದ ಮತ್ತು ಮಾದರಿಯಾದ ಕಂಟ್ರೋಲ್ ರೂಮ್​ ಆಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.

ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಕೋವಿಡ್-19 ಕಂಟ್ರೋಲ್ ರೂಮ್​ಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್ ಫಲಿತಾಂಶಗಳನ್ನು ದೇಶಾದ್ಯಂತ ಐಸಿಎಂಆರ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತಿತ್ತು. ಆ್ಯಪ್ ಮೂಲಕ ಜಿಲ್ಲೆಗಳು ಐಸಿಎಂಆರ್​ನಿಂದ ಮಾಹಿತಿ ಪಡೆದು ತಾಲೂಕುವಾರು ಲೈನ್‍ಲಿಸ್ಟ್ ಮಾಡಲಾಗುತ್ತಿತ್ತು. ಲೈನ್‍ಲಿಸ್ಟ್ ಅ್ಯಪ್‍ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ ಆ್ಯಪ್‍ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಇದೀಗ ಈ ಆಪ್‍ಗಳನ್ನು ವಿಲೀನಗೊಳಿಸಿ ಒಂದು ಲೈನ್‍ಲಿಸ್ಟ್ ಆ್ಯಪ್​ನನ್ನು ಅಭಿವೃದ್ದಿಪಡಿಸಲಾಗಿದ್ದು, ಈ ಕಂಟ್ರೋಲ್ ರೂಮ್​​ನಿಂದ ಕಾರ್ಯ ನಿರ್ವಹಿಸಲಾಗುವುದು ಎಂದರು.

ಕೋವಿಡ್-19 ಕಂಟ್ರೋಲ್ ರೂಮ್​ಗೆ ಜಿಲ್ಲಾಧಿಕಾರಿ ಚಾಲನೆ
ಕೋವಿಡ್-19 ಕಂಟ್ರೋಲ್ ರೂಮ್​ಗೆ ಜಿಲ್ಲಾಧಿಕಾರಿ ಚಾಲನೆ

ನೇರವಾಗಿ ರಾಜ್ಯ ವಾರ್ ರೂಮ್​​ಗೆ ಸಂಪರ್ಕ ಹೊಂದಿ ಕೆಲಸ ನಿರ್ವಹಿಸಲಿರುವ ಕಂಟ್ರೋಲ್ ರೂಮ್​​ನಲ್ಲಿ 8 ವಿಭಾಗಗಳಿದ್ದು, ಕೋವಿಡ್ ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ತ್ವರಿತ ಮತ್ತು ಶೀಘ್ರ ಚಿಕಿತ್ಸೆಗೆ ಸ್ಪಂದಿಸಲಿವೆ. ರಾಜ್ಯ ವಾರ್‍ ರೂಮ್​ ವಿಂಗಡಿಸಿದ ಪ್ರಕರಣಗಳನ್ನು ಜಿಲ್ಲಾ ಕಂಟ್ರೋಲ್ ರೂಮ್​​ನಿಂದ ಪ್ರತಿದಿನ ವೀಕ್ಷಿಸಲಾಗುವುದು. ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಹ ಪಡೆಯಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಪ್ರತಿ ದಿನ ರೋಗಿಗಳಿಗೆ ಕರೆ ಮಾಡಿ ರೋಗಿಯ ಲಕ್ಷಣಗಳು, ಇತರೆ ವಿವರಗಳ ಮಾಹಿತಿ ಪಡೆದು ಕಂಟ್ರೋಲ್ ರೂಮ್​​ನ ಎಂಟು ವಿಭಾಗಗಳಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು ಎಂದರು.

ಎಂಟು ವಿಭಾಗಗಳು & ಕಾರ್ಯ ನಿರ್ವಹಣೆ, ಸರ್ಕಾರಿ ಆಸ್ಪತ್ರೆ ಸೇವೆ:

ರೋಗ ಲಕ್ಷಣಗಳಿಂದ ಬಳಲುತ್ತಿದ್ದು, ತಾವು ಸಂಪೂರ್ಣವಾಗಿ ಸರ್ಕಾರಿ ಆಸ್ಪತ್ರೆ ಸೇವೆ ಬಯಸುತ್ತೇವೆಂಬ ರೋಗಿಗೆ ಸೂಕ್ತ ಮಾಹಿತಿಯೊಂದಿಗೆ ಸರ್ಕಾರಿ ಆಸ್ಪತ್ರೆಯ ಸೇವೆ ನೀಡಲಾಗುವುದು.

ಕೋವಿಡ್ ಕೇರ್ ಸೆಂಟರ್ :

ಲಕ್ಷಣಗಳು ಅತಿ ಕಡಿಮೆ ಇರುವ ಮತ್ತು ಲಕ್ಷಣಗಳು ಇಲ್ಲದೇ ಇರುವ ರೋಗಿಗಳಿಗೆ ತಮ್ಮ ಸಮೀಪವಿರುವ ಕೋವಿಡ್ ಕೇರ್ ಸೆಂಟರ್ ಬಗ್ಗೆ ಮಾಹಿತಿ ನೀಡಿ, ಅನುಕೂಲ ಮಾಡುವುದು. ರೋಗ ಲಕ್ಷಣ ಕಡಿಮೆ ಇರುವ ಮತ್ತು ಲಕ್ಷಣ ಇಲ್ಲದೇ ಇದ್ದು, ಮನೆಯಲ್ಲಿ ಬಾತ್‍ರೂಂ ಹೊಂದಿದ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರುವವರಿಗೆ ಹೋಂ ಐಸೋಲೇಷನ್ ನಿಯಮಗಳನ್ನು ಪಾಲಿಸಿ ಚಿಕಿತ್ಸೆ ಪಡೆಯುವಲ್ಲಿ ಅನುಕೂಲ ಮಾಡುವುದು.

ಖಾಸಗಿ ಆಸ್ಪತ್ರೆ, ಸರ್ಕಾರಿ ಆ್ಯಂಬುಲೆನ್ಸ್ ವ್ಯವಸ್ಥೆ:

ರೋಗಿಗಳು ತಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇವೆ. ಆದರೆ ತಮಗೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆಬೇಕೆಂದು ಕೇಳಿದವರಿಗೆ ವ್ಯವಸ್ಥೆ ಮಾಡಿ ಮಾರ್ಗದರ್ಶನ ನೀಡಲಾಗುವುದು. ಕೋವಿಡ್ ಸೋಂಕಿತರಾಗಿದ್ದು, ಎಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದೇ ಇರುವುದು, ಪ್ರತಿಕ್ರಿಯಿಸದೇ ಇರುವವರ ಮಾಹಿತಿ ಪಡೆದು ಪೊಲೀಸ್ ಕಂಟ್ರೋಲ್ ರೂಮ್​ ಸಹಾಯ ಪಡೆದು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.