ETV Bharat / state

ಇಬ್ಬರು ಯುವಕರಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು - davanagere news

ಆಟೋ ನಿಲ್ಲಿಸುವ ವಿಚಾರದಲ್ಲಿ ಆರಂಭವಾದ ಮಾತಿನ ಚಕಮಕಿ ಗಲಾಟೆಯಲ್ಲಿ ಅಂತ್ಯಗೊಂಡಿದೆ. ಈ ಗಲಾಟೆಯಲ್ಲಿ ಇಬ್ಬರಿಗೆ ಚೂರಿ ಇರಿಯಲಾಗಿದೆ.

knife-stabbing-on-two-boys
ಇಬ್ಬರು ಯುವಕರಿಗೆ ಚೂರಿ ಇರಿತ
author img

By

Published : Nov 18, 2020, 8:05 PM IST

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಎದೆಗೆ ಚಾಕು ಇರಿದ ಘಟನೆ ನಗರದ ಬೇತೂರು ರಸ್ತೆಯಲ್ಲಿ ನಡೆದಿದೆ.

ಸೈಯದ್(26), ತಾಹೀರ್ (25) ಚಾಕು ಇರಿತಕ್ಕೆ ಒಳಗಾದ ಯುವಕರು. ಆಟೋ ನಿಲ್ಲಿಸುವ ವಿಚಾರದಲ್ಲಿ ಆರಂಭವಾದ ಮಾತಿನ ಚಕಮಕಿ ಗಲಾಟೆಯಲ್ಲಿ ಅಂತ್ಯಗೊಂಡಿದೆ.

ಮೈಲಾರಿ, ಮಂಜು, ಸತೀಶ್, ಪವನ್ ಎಂಬುವರು ಸೇರಿ 18 ಜನರು ಇವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಚಾಕು ಇರಿತಕ್ಕೆ ಒಳಗಾದ ಯುವಕರನ್ನು ಬಾಪೂಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಯ ಮುಂಭಾಗ ಯುವಕರ ಸಂಬಂಧಿಕರು ಜಮಾಯಿಸಿದ್ದಾರೆ. ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.