ETV Bharat / state

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬುಳ್ ನಾಗನ ಹತ್ಯೆ - kannada news

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬುಳ್ ನಾಗನ ಹತ್ಯೆ ಮಾಡಿದ ದುಷ್ಕರ್ಮಿಗಳು.

ರೌಡಿಶೀಟರ್ ಬುಳ್ ನಾಗ ಹತ್ಯೆ
author img

By

Published : May 12, 2019, 5:52 AM IST

Updated : May 12, 2019, 6:00 AM IST

ದಾವಣಗೆರೆ : ಮಾರಾಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ಬುಳ್​ ನಾಗನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ರೌಡಿಶೀಟರ್ ಬುಳ್ ನಾಗ ಹತ್ಯೆ

ಶ್ರೀರಾಮ ನಗರದ ನಾಗರಾಜ್ ಅಲಿಯಾಸ್ ಬುಳ್ ನಾಗ (30) ಹತ್ಯೆಯಾದ ರೌಡಿಶೀಟರ್. ಎಸ್ಓಜಿ ಕಾಲೋನಿ ಬಳಿಯ ಎಸ್.ಎಸ್ ಆಸ್ಪತ್ರೆಯ ಹಿಂಭಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ನಾಗನನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾಗಿದ್ದಾನೆ.

ಕೊಲೆ, ಜೀವ ಬೆದರಿಕೆ, ಹಲ್ಲೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಗರಾಜ ಮೂರು ಭಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪಾರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ಚೇತನ್, ಬುಳ್ ನಾಗನ ಹತ್ಯೆಯಾಗಿದ್ದು, ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ, ಅದರೆ ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ಗೊತ್ತಿಲ್ಲ. ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.

Intro:KN_DVG_01_12_ROWDY MURDER_SCRIPT_01_YOGARAJ_7203307

REPORTER: ಯೋಗರಾಜ್

ದಾವಣಗೆರೆಯಲ್ಲಿ ರೌಡಿಶೀಟರ್ ಬುಳ್ ನಾಗ ಫಿನಿಶ್...!

ದಾವಣಗೆರೆ: ಮಾರಾಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಶ್ರೀರಾಮನಗರದ ನಾಗರಾಜ್ ಅಲಿಯಾಸ್ ಬುಳ್ ನಾಗ( ೩೦) ಹತ್ಯೆಯಾದ ರೌಡಿಶೀಟರ್. ಎಸ್ ಓ ಜಿ ಕಾಲೋನಿ ಬಳಿಯಿರುವ ಎಸ್ ಎಸ್ ಆಸ್ಪತ್ರೆಯ ಹಿಂಭಾಗದಲ್ಲಿ ಈ ಕೊಲೆ ಮಾಡಲಾಗಿದೆ.

ಬುಳ್ ನಾಗ ಎಸ್ ಎಸ್ ಆಸ್ಪತ್ರೆ ಬಳಿ ಇರುವುದನ್ನು ಖಚಿತ ಪಡಿಸಿಕೊಂಡ ದುಷ್ಕರ್ಮಿಗಳು ನಾಗನ ಮೇಲೆ ಇದ್ದಕ್ಕಿದ್ದಂತೆ
ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾಗ ತೀವ್ರವಾಗಿ ಗಾಯಗೊಂಡಿದ್ದು, ಆತನ ಜೊತೆಯಲ್ಲಿದ್ದವನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾನೆ‌.‌ಅದರೆ, ಆಸ್ಪತ್ರೆ ತಲುಪುವ ಮುನ್ನವೇ ನಾಗ ಕೊನೆ ಉಸಿರು ಎಳೆದಿದ್ದಾನೆ. ಈ ಸಂಬಂಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಳ್ ನಾಗನ ಮೇಲೆ ಇದ್ದವು ಹತ್ತಕ್ಕೂ ಹೆಚ್ಚು ಕೇಸ್...!

ಬುಳ್ ನಾಗ ದಾವಣಗೆರೆಯಲ್ಲಿ ರೌಡಿ ಆಗಿ ಹೆಸರು ಮಾಡಿದ್ದ. ಈತನ ಹತ್ಯೆಗೆ ಹಳೆಯ ದ್ವೇಷ ಹೊಂದಿದ್ದ ವಿರೋಧಿಗಳು ಮೂರು ಬಾರಿ ಸ್ಕೆಚ್ ಹಾಕಿದ್ದರೂ ವಿಫಲವಾಗಿತ್ತು. ಅದೃಷ್ಟವಶಾತ್ ಬುಳ್ ನಾಗ ಬದುಕಿದ್ದ. ಆದ್ರೆ, ನಾಲ್ಕನೇ ಬಾರಿ ಆತನ ಕಥೆ ಮುಗಿಸಿದ್ದಾರೆ.

ಕೊಲೆ, ಜೀವ ಬೆದರಿಕೆ, ಹಲ್ಲೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಾಗರಾಜ ಅಲಿಯಾಸ್ ಬುಳ್ ನಾಗ ಭಾಗಿ ಆಗಿದ್ದ. ಹತ್ಯೆ ನಡೆದ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ಚೇತನ್ ಅವರು, ಬುಳ್ ನಾಗನ ಹತ್ಯೆಯಾಗಿದೆ. ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ಗೊತ್ತಿಲ್ಲ. ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.Body:KN_DVG_01_12_ROWDY MURDER_SCRIPT_01_YOGARAJ_7203307

REPORTER: ಯೋಗರಾಜ್

ದಾವಣಗೆರೆಯಲ್ಲಿ ರೌಡಿಶೀಟರ್ ಬುಳ್ ನಾಗ ಫಿನಿಶ್...!

ದಾವಣಗೆರೆ: ಮಾರಾಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಶ್ರೀರಾಮನಗರದ ನಾಗರಾಜ್ ಅಲಿಯಾಸ್ ಬುಳ್ ನಾಗ( ೩೦) ಹತ್ಯೆಯಾದ ರೌಡಿಶೀಟರ್. ಎಸ್ ಓ ಜಿ ಕಾಲೋನಿ ಬಳಿಯಿರುವ ಎಸ್ ಎಸ್ ಆಸ್ಪತ್ರೆಯ ಹಿಂಭಾಗದಲ್ಲಿ ಈ ಕೊಲೆ ಮಾಡಲಾಗಿದೆ.

ಬುಳ್ ನಾಗ ಎಸ್ ಎಸ್ ಆಸ್ಪತ್ರೆ ಬಳಿ ಇರುವುದನ್ನು ಖಚಿತ ಪಡಿಸಿಕೊಂಡ ದುಷ್ಕರ್ಮಿಗಳು ನಾಗನ ಮೇಲೆ ಇದ್ದಕ್ಕಿದ್ದಂತೆ
ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾಗ ತೀವ್ರವಾಗಿ ಗಾಯಗೊಂಡಿದ್ದು, ಆತನ ಜೊತೆಯಲ್ಲಿದ್ದವನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾನೆ‌.‌ಅದರೆ, ಆಸ್ಪತ್ರೆ ತಲುಪುವ ಮುನ್ನವೇ ನಾಗ ಕೊನೆ ಉಸಿರು ಎಳೆದಿದ್ದಾನೆ. ಈ ಸಂಬಂಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಳ್ ನಾಗನ ಮೇಲೆ ಇದ್ದವು ಹತ್ತಕ್ಕೂ ಹೆಚ್ಚು ಕೇಸ್...!

ಬುಳ್ ನಾಗ ದಾವಣಗೆರೆಯಲ್ಲಿ ರೌಡಿ ಆಗಿ ಹೆಸರು ಮಾಡಿದ್ದ. ಈತನ ಹತ್ಯೆಗೆ ಹಳೆಯ ದ್ವೇಷ ಹೊಂದಿದ್ದ ವಿರೋಧಿಗಳು ಮೂರು ಬಾರಿ ಸ್ಕೆಚ್ ಹಾಕಿದ್ದರೂ ವಿಫಲವಾಗಿತ್ತು. ಅದೃಷ್ಟವಶಾತ್ ಬುಳ್ ನಾಗ ಬದುಕಿದ್ದ. ಆದ್ರೆ, ನಾಲ್ಕನೇ ಬಾರಿ ಆತನ ಕಥೆ ಮುಗಿಸಿದ್ದಾರೆ.

ಕೊಲೆ, ಜೀವ ಬೆದರಿಕೆ, ಹಲ್ಲೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಾಗರಾಜ ಅಲಿಯಾಸ್ ಬುಳ್ ನಾಗ ಭಾಗಿ ಆಗಿದ್ದ. ಹತ್ಯೆ ನಡೆದ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ಚೇತನ್ ಅವರು, ಬುಳ್ ನಾಗನ ಹತ್ಯೆಯಾಗಿದೆ. ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ಗೊತ್ತಿಲ್ಲ. ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.Conclusion:
Last Updated : May 12, 2019, 6:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.