ದಾವಣಗೆರೆ : ಕನ್ನಡ ವಿದ್ಯಾರ್ಥಿಗಳು ಮುಖ್ಯ ಲೇಖಕರ ಪಠ್ಯ ಅಭ್ಯಾಸ ಮಾಡದ ಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪಠ್ಯಕ್ರಮ ರಚನೆ ಪರಿಷ್ಕರಣೆ ನಡೆಯಬಾರದು.
ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶೈಕ್ಷಣಿಕ ಕ್ಷೇತ್ರದ ಘನತೆ ಉಳಿಯಬೇಕು ಎನ್ನುವುದು ನಮ್ಮ ಕಳಕಳಿ. ಇದರಲ್ಲಿ ಕೆಲವೊಂದು ಸೇರಿಸಿದ್ದಾರೆ, ಕೆಲವೊಂದು ಕೈಬಿಟ್ಟಿದ್ದಾರೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ನಾವು ಇದ್ದಾಗಲೂ ಕೂಡ ಕೆಲವೊಂದನ್ನ ಸೇರಿಸಿದ್ದೆವು, ಮತ್ತೆ ಬಿಟ್ಟಿದ್ದೆವು. ಯಾವುದಕ್ಕೆ ಸೇರಿಸಿದ್ದೇವೆ, ಬಿಟ್ಟಿದ್ದೇವೆ ಎಂದು ಪ್ರತಿಯೊಂದು ಮಾಹಿತಿ ನೀಡಿದ್ದೇವೆ. ಪಠ್ಯ ಪುಸ್ತಕ ಪರಿಷ್ಕರಣೆ ಹೇಗೆ ಆಗಬೇಕು ಎನ್ನುವುದು ಮುಖ್ಯ. ಈಗ ನಡೆಯುತ್ತಿರುವ ವಿವಾದದಿಂದ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ.
ನಾನು ಆ ಮಟ್ಟಕ್ಕೆ ಇಳಿದು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿವಾದಗಳು ತಾರಕಕ್ಕೇರುತ್ತಿರುವುದರಿಂದ ಸಿಎಂ ಮಧ್ಯಪ್ರವೇಶ ಮಾಡಬೇಕು. ಇದನ್ನು ಕೂಲಂಕಷವಾಗಿ ಪರಿಶೀಲಿಸಿ, ವಿವಾದಕ್ಕೆ ತೆರೆ ಏಳೆಯಬೇಕಿದೆ. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಶಿಕ್ಷಣದ ಬಗೆಗೆ ಬೇಸರ ಬರಬಾರದು ಎಂದರು.
ಸಿಎಂ ಮಧ್ಯಪ್ರವೇಶ ಮಾಡ್ಬೇಕು : ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಶಿಕ್ಷಣ ಕ್ಷೇತ್ರದ ಘನತೆ ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ. ಕಮಿಟಿ ಬಗ್ಗೆ ನಾನು ಮಾತನಾಡುವುದಿಲ್ಲ, ಕೆಲವರು ನನ್ನ ಬಗ್ಗೆ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಾನು ಆ ಮಟ್ಟಕ್ಕೆ ಇಳಿದು ಉತ್ತರ ಕೊಡೋದಿಲ್ಲ. ಕಲುಷಿತವಾದ ವಿಷಯವಾರುಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ನಕಲಿ ಕಾಂಗ್ರೆಸ್ನ ನಕಲಿ ನಾಯಕ ಸಿದ್ದರಾಮಯ್ಯ: ಪ್ರಲ್ಹಾದ್ ಜೋಶಿ