ದಾವಣಗೆರೆ: ಸಿದ್ದರಾಮಯ್ಯ ಸುಳ್ಳು ಹೇಳುವುದನ್ನ ತಮ್ಮ ಪ್ರವೃತ್ತಿ ಮಾಡಿಕೊಂಡಿದ್ದಾರೆ. ಲಿಂಗಾಯತ ಧರ್ಮ ಒಡೆಯಲು ಸಿಎಂ ಆಗಿದ್ದಾಗ ಪ್ರಚೋದನೆ ನೀಡಿದ್ರು. ನಂತರ ಇದೀಗ ರಂಭಾಪುರಿ ಶ್ರೀಗಳನ್ನು ಭೇಟಿ ನೀಡಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಹಾಲಿ ಶಾಸಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಧರ್ಮ ಒಡೆದ ವಿಚಾರದ ಬಗ್ಗೆ ಕ್ಷಮೆ ಕೇಳಿದ್ದಾರೆ. ಧರ್ಮ ಒಡೆಯುವ ಕೆಲಸ ಮಾಡಬಾರದಿತ್ತು ಅಂತ ಕ್ಷಮೆ ಕೇಳಿದ್ದಾರೆ. ಆದರೆ, ಈಗ ಸಿದ್ದರಾಮಯ್ಯ ತಾವು ರಂಭಾಪುರಿ ಶ್ರೀಗಳ ಬಳಿ ಆ ರೀತಿ ಹೇಳಿಲ್ಲ ಅಂತಿದ್ದಾರೆ. ದು ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹದ್ದು. ಈ ಹಿಂದೆ ಅಪ್ಪರ್ ಕೃಷ್ಣಾಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿ ಕೊಡ್ತೀನಿ ಅಂದಿದ್ದರು.
ಅವರ ಆಡಳಿತದ ಅವಧಿಯಲ್ಲಿ 10 ಸಾವಿರ ಕೋಟಿ ಕೊಡಲಿಲ್ಲ. ಅವರು ಸುಳ್ಳು ಹೇಳೋದೇ ಜೀವನ ಶೈಲಿ ಮಾಡಿಕೊಂಡಿದ್ದಾರೆ ಅನಿಸುತ್ತೆ. ಚುನಾವಣೆ ಹತ್ತಿರ ಬರ್ತಾ ಇದ್ದಂತೆ ಸಿದ್ದರಾಮಯ್ಯ ಪ್ರವಾಸ ಚಾಲುವಾಗಿದೆ. ಶೃಂಗೇರಿ, ರಂಭಾಪುರಿ, ಮೂರುಸಾವಿರ ಮಠ, ತುಮಕೂರು, ಮೈಸೂರು ಹೀಗೆ ಮಠಗಳಿಗೆ ಹೋಗೋತ್ತಿದ್ದಾರೆ. ಎಲೆಕ್ಷನ್ ಸಲುವಾಗಿ ಮಠ ಮಾನ್ಯಕ್ಕೆ ಓಡಾಡುತ್ತಿದ್ದಾರೆ. ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಕಾಳಜಿ ಇಲ್ಲ. ಬರೀ ಓಟಿಗಾಗಿ ಅಲ್ಪಸಂಖ್ಯಾತರು ಬೇಕು ಅಷ್ಟೇ ಎಂದು ಶೆಟ್ಟರ್ ಹರಿಹಾಯ್ದರು.
ಮುಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್.. ಮುಂದಿನ ಸಿಎಂ ಜಗದೀಶ್ ಶೆಟ್ಟರ್ ಎಂದು ಸಿಎಂ ಬದಲಾವಣೆಗೆ ಪದೇ ಪದೆ ರೂಮರ್ ಏಳ್ತಾ ಇದೆ. ಇದನ್ನು ಎಲ್ಲಿಂದ ಹಬ್ಬಿಸಲಾಗ್ತಾ ಇದೆ ಅನ್ನೋದು ಗೊತ್ತಿಲ್ಲ. ಸದ್ಯಕ್ಕೆ ಸಿಎಂ ಸೀಟ್ ಖಾಲಿ ಇಲ್ಲ. ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆನೆ ನಡೀತಾ ಇಲ್ಲ. ಸಿಎಂ ಬದಲಾವಣೆ ಮಾತೆ ಇಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಓದಿ: ರಸ್ತೆ ದುರವಸ್ಥೆ, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಸುಗೂಸು ಸಾವು ಆರೋಪ.. ಸಿಎಂ ಮುಂದೆ ಕಣ್ಣೀರಿಟ್ಟ ಕುಟುಂಬ