ETV Bharat / state

ರೇಣುಕಾಚಾರ್ಯ ಮೇಲೆ ಪ್ರಕರಣ ದಾಖಲಿಸಲು ಮುಂದಾದ ತಹಸೀಲ್ದಾರ್ ವಿರುದ್ಧ ಸೋಂಕಿತರ ಆಕ್ರೋಶ

ಶಾಸಕರು ಇಲ್ಲದೇ ಇದ್ದಾಗ ಕೋವಿಡ್​ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿರುವುದಿಲ್ಲ. ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆಯೂ ಇರುವುದಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಬರುವವರೆಗೂ ಊಟ ಮಾಡುವುದಿಲ್ಲ ಎಂದು ಸೋಂಕಿತರು ಪಟ್ಟು ಹಿಡಿದಿದ್ದರು.

infected-protested-in-covid-care-centre-in-davanagere
ರೇಣುಕಾಚಾರ್ಯ ಮೇಲೆ ಪ್ರಕರಣ ದಾಖಲಿಸಲು ಮುಂದಾದ ತಹಸೀಲ್ದಾರ್ ವಿರುದ್ಧ ಸೋಂಕಿತರ ಆಕ್ರೋಶ
author img

By

Published : Jun 12, 2021, 3:50 AM IST

Updated : Jun 12, 2021, 6:42 AM IST

ದಾವಣಗೆರೆ: ಅರಬಗಟ್ಟೆಯ ಕೋವಿಡ್ ಆರೈಕೆ ಸೆಂಟರ್​​ನಲ್ಲಿ ಶಾಸಕ ರೇಣುಕಾಚಾರ್ಯ ಹೋಮ, ಹವನ ಮಾಡಿದ್ದಕ್ಕೆ ಶಾಸಕರ ವಿರುದ್ದ ಪ್ರಕರಣ ದಾಖಲಿಸಲು ತಹಸೀಲ್ದಾರ್​​ ಮುಂದಾದ ಬೆನ್ನಲ್ಲೇ ತಾಲೂಕು ಆಡಳಿತದ ವಿರುದ್ಧ ಸೋಂಕಿತರು ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್​​ನಲ್ಲಿ ಸೋಂಕಿತರಿಂದ ವಿರೋಧ ವ್ಯಕ್ತವಾಗಿದೆ.

ಸೋಂಕಿತರು ತಹಸೀಲ್ದಾರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಶಾಸಕರ ಶಾಂತನಗೌಡರ ಕುಮ್ಮಕ್ಕಿನಿಂದ ತಹಸೀಲ್ದಾರ್ ಅವರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋಂಕಿತರ ಆಕ್ರೋಶ

ಶಾಸಕ ರೇಣುಕಾಚಾರ್ಯ ಇಲ್ಲದೇ ಇದ್ದಾಗ ಕೋವಿಡ್​ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿರುವುದಿಲ್ಲ. ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆಯೂ ಇರುವುದಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಬರುವವರೆಗೂ ಊಟ ಮಾಡುವುದಿಲ್ಲ ಎಂದು ಸೋಂಕಿತರು ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: ರೇಣುಕಾಚಾರ್ಯರಂಥ ಗಂಡ ಸಿಕ್ಕಿರುವುದು ಏಳೇಳು ಜನ್ಮದ ಪುಣ್ಯ: ಸುಮಿತ್ರಾ ರೇಣುಕಾಚಾರ್ಯ

Last Updated : Jun 12, 2021, 6:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.