ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್ ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಕೋವಿಡ್ ಸೋಂಕಿತರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಕನ್ನಡ ಸಾಂಗ್ ಹಾಕಿ ಸೋಂಕಿತರನ್ನು ಕುಣಿಸಿದ್ದು, ಇದು ಸೋಂಕಿತರ ಭಯ ದೂರ ಮಾಡುವಲ್ಲಿ ಹಮ್ಮಿಕೊಳ್ಳಲಾದ ವಿನೂತನ ಪ್ರಯತ್ನವಾಗಿದೆ. 2ನೇ ಅಲೆಯ ಭೀತಿಯಿಂದ ಸೋಂಕಿತರನ್ನ ದೂರ ಮಾಡಲು ಆರೋಗ್ಯ ಸಿಬ್ಬಂದಿ ಈ ರೀತಿ ಮಾಡಿಸಿದ್ದು, ಇದನ್ನು ಸಂತೋಷದಿಂದ ಸ್ವೀಕರಿಸಿದ ಸೋಂಕಿತರು ಸಖತ್ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದರು.
ಓದಿ: ಹಿಂದಿಯಲ್ಲಿ ಮಾತನಾಡಬೇಡಿ, ಇದು ಕರ್ನಾಟಕ, ಕನ್ನಡದಲ್ಲೇ ಮಾತನಾಡಿ : ಬೈಕ್ ಸವಾರನಿಗೆ ತಹಶೀಲ್ದಾರ್ ತರಾಟೆ!