ETV Bharat / state

'ಮನ್ಸೂರ್‌ ಅಲಿ ಖಾನ್​ಗೆ ಸೇರಿದ ಆಸ್ತಿ, ಜನ ಹೂಡಿಕೆ‌ ಮಾಡಿದ ಹಣ ದಾವಣಗೆರೆಯಲ್ಲಿದೆ' - Abdul Majeed Latest News

ದಾವಣಗೆಯಲ್ಲಿ ಮನ್ಸೂರ್ ಅಲಿ ಖಾನ್​ಗೆ ಸೇರಿದ ಆಸ್ತಿ ಸಾಕಷ್ಟಿದೆ. ಈಗಾಗಲೇ ದಾವಣಗೆರೆ ತಾಲೂಕಿನ ಬಾತಿ ಗ್ರಾಮದ ಬಳಿ ಆತ ಖರೀದಿಸಿದ್ದ ಐದು ಎಕರೆ ಬೆಲೆ ಬಾಳುವ ಜಮೀನನ್ನು ಸೀಜ್ ಮಾಡಲಾಗಿದೆ. ಎರಡನೇ ಹಂತದ ಹೂಡಿಕೆಯ ಹಣವೂ ದಾವಣಗೆರೆಯಲ್ಲಿದೆ. ಆದ್ದರಿಂದ ಇಡಿ, ಸಿಬಿಐನವರು ಸರಿಯಾಗಿ ತನಿಖೆ ಮಾಡಿದರೆ ಹಣ ದೊರೆಯುತ್ತದೆ ಎಂದು ಅಬ್ದುಲ್ ಮಜೀದ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

Abdul Majeed
ಎಸ್​. ಅಬ್ದುಲ್ ಮಜೀದ್
author img

By

Published : Dec 6, 2020, 6:47 PM IST

ದಾವಣಗೆರೆ: ಐಎಂಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್​ನ ಬಾವ ಅಬ್ಬಾಸ್ ಎಂಬುವನು ದುಬೈನಲ್ಲಿದ್ದು, ಜನಸಾಮಾನ್ಯರು ಹೂಡಿಕೆ ಮಾಡಿದ್ದ ಮುಕ್ಕಾಲು ಭಾಗ ಹಣ ಅವನ ಬಳಿ ಇದೆ. ಆತನನ್ನು ಬಂಧಿಸಿದರೆ ಜನರ ಹೂಡಿಕೆ ಹಣ ಸಿಗುತ್ತದೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ ಎಸ್​. ಅಬ್ದುಲ್ ಮಜೀದ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದರು‌.

ಅಬ್ದುಲ್ ಮಜೀದ್ ಸುದ್ದಿಗೋಷ್ಠಿ

ದಾವಣಗೆರೆಯ ವರದಿಗಾರರ ಕೂಟದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿಯೇ 4 ರಿಂದ 5 ಕೋಟಿ ರೂ ಹಣವನ್ನು ಇಲ್ಲಿನ ಜನ ಐಎಂಎನಲ್ಲಿ ಹೂಡಿಕೆ‌ ಮಾಡಿದ್ದಾರೆ ಎಂದು ವಿವರಿಸಿದರು.

ಓದಿ: ದಾವಣಗೆರೆಯಲ್ಲೂ ಇದೆ ಮನ್ಸೂರ್ ಅಲಿಯ ಆಸ್ತಿ ಹಾಗೂ ಹೂಡಿಕೆ‌ ಹಣ

ದಾವಣಗೆರೆಯಲ್ಲಿ ಮನ್ಸೂರ್ ಅಲಿ ಖಾನ್​ಗೆ ಸೇರಿದ ಆಸ್ತಿ ಸಾಕಷ್ಟಿದೆ. ಈಗಾಗಲೇ ದಾವಣಗೆರೆ ತಾಲೂಕಿನ ಬಾತಿ ಗ್ರಾಮದ ಬಳಿ ಮನ್ಸೂರ್ ಖರೀದಿಸಿದ್ದ ಐದು ಎಕರೆ ಬೆಲೆ ಬಾಳುವ ಜಮೀನನ್ನು ಸೀಜ್ ಮಾಡಲಾಗಿದೆ. ಎರಡನೇ ಹಂತದ ಹೂಡಿಕೆಯ ಹಣವೂ ಇಲ್ಲಿದೆ. ಆದ್ದರಿಂದ ಇಡಿ, ಸಿಬಿಐನವರು ಸರಿಯಾಗಿ ತನಿಖೆ ಮಾಡಿದರೆ ಜಿಲ್ಲೆಯಲ್ಲಿರುವ ಆತನ ಹಣ ದೊರೆಯುತ್ತದೆ ಎಂದು ಅಬ್ದುಲ್ ಮಜೀದ್ ಹೊಸ ಬಾಂಬ್ ಸಿಡಿಸಿದ್ದಾರೆ.

ಓದಿ: ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್​ಗೆ ಷರತ್ತುಬದ್ಧ ಜಾಮೀನು ಮಂಜೂರು

ಐಎಂಎ ಮೂಲಕ ನಾಲ್ಕು ಸಾವಿರ ಕೋಟಿ ರೂ. ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿ, ಬಿಎಸ್ ಯಡಿಯೂರಪ್ಪ ನವರ ಬಳಿ ಮಾತನಾಡಿ ಸಿಬಿಐಗೆ ವಹಿಸುವಂತೆ ಮಾಡಿದ್ದೇವೆ. ಇದರಲ್ಲಿ 30 ಸಾವಿರ ಜನ ಹೆಣ್ಣು ಮಕ್ಕಳು ಕಷ್ಟಪಟ್ಟಿರುವ ಹಣವನ್ನು ಹೂಡಿಕೆ ಮಾಡಿದ್ದಾರೆ. ಇದರ ತನಿಖೆಗೆ ಸಿಬಿಐನವರು ಐಎಎಸ್ ಅಧಿಕಾರಿ ಹರ್ಷಗುಪ್ತಾರನ್ನು ನೇಮಕ ಮಾಡಿದ್ದಾರೆ. ಹರ್ಷಗುಪ್ತ 700 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಐಎಂಎನಲ್ಲಿ ಹೂಡಿಕೆ ಮಾಡಿದ್ದ ಹಣ ಹೇಗೆ ಜಮಾ ಆಗುತ್ತೆ?

ಐಎಂಎನಲ್ಲಿ ಹಂತ ಹಂತವಾಗಿ ಹೂಡಿದ್ದ ಹಣವನ್ನು ಹೂಡಿಕೆದಾರರಿಗೆ ನೀಡುವ ಕುರಿತಾಗಿ ಹರ್ಷಗುಪ್ತ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಕಳೆದ ನವೆಂಬರ್‌ 24 ರಿಂದ ಡಿ.25 ರೊಳಗೆ ಆನ್ಲೈನ್‌ನಲ್ಲಿ ಅಟಲ್ ಜೀ ಸೇವಾಕೇಂದ್ರ, ದಾವಣಗೆರೆ ಒನ್, ಬೆಂಗಳೂರು ಒನ್ ಹೀಗೆ ಬೇರೆ ಜಿಲ್ಲೆಗಳಲ್ಲಿರುವ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಸಂಖ್ಯೆ, ಕ್ಲೈನ್ಟ್ ಐಡಿ ಸಂಖ್ಯೆ, ಪಾನ್ ಕಾರ್ಡ್‌ಗಳನ್ನು ಸೇವಾ ಕೇಂದ್ರದಲ್ಲಿ ನೀಡಿದರೆ ಹೂಡಿಕೆ ಮಾಡಿದ್ದ ಖಾತೆ ಓಪನ್ ಮಾಡಿ, ಚಾಲ್ತಿ ಮಾಡಿಸಿ ಬಳಿಕ ಹಂತ ಹಂತವಾಗಿ ಖಾತೆಗೆ ಹಣ ಹಂಚಿ ಕೊಡುತ್ತೇವೆ ಎಂದು ಅವರು ತಿಳಿಸಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.