ದಾವಣಗೆರೆ : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾದರೆ ನಾವು ಫುಲ್ ಸಪೋರ್ಟ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆ ಸಿಎಂ ಆದರೆ ಒಳ್ಳೆಯದು. ನಮ್ಮ ಸ್ನೇಹಿತರು. ಅವರು ಸಿಎಂ ಆಗ್ತಾರಂದ್ರೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಶೆಟ್ಟರ್ಗೆ ಟಿಕೆಟ್ ಕೈ ತಪ್ಪಿದ ವಿಚಾರ: ಶೆಟ್ಟರ್ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತಾರೆ. ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತೆ. ಅದಕ್ಕಾಗಿಯೇ ವರಿಷ್ಠರು ದೆಹಲಿಗೆ ಕರೆದಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳೀತಾರೆ ಎಂದರು. ಕಾಂಗ್ರೆಸ್ಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದಿಲ್ಲ. ಪಕ್ಷಕ್ಕೆ ಕರೆದರೂ ಬರುವಂತ ಜನ ಅವರಲ್ಲ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಸ್ಪರ್ಧೆಗೆ ಆಹ್ವಾನ: ಇದೇ ವೇಳೆ ದಾವಣಗೆರೆ ಉತ್ತರ, ದಕ್ಷಿಣದಲ್ಲಿ ತಮ್ಮ ವಿರುದ್ಧ ಕ್ಯಾಂಡಿಡೇಟ್ ಹಾಕದೇ ಇರೋ ವಿಚಾರವಾಗಿ ಮಾತನಾಡಿ, ನನ್ನ ವಿರುದ್ಧ ಸ್ಪರ್ಧೆ ಮಾಡುವವರು ಇನ್ನೂ ಮಲಗಿದ್ದಾರೆ. ನಮ್ಮ ವಿರುದ್ಧ ಬೇಕಾದವರು ಬರಲಿ, ನಾವು ಎದುರಿಸುತ್ತೇವೆ. ಅದಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಬಂದು ಸ್ಪರ್ಧೆ ಮಾಡಲಿ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ : ದಾವಣಗೆರೆಯ 3 ಕಡೆ ಬಿಜೆಪಿಯ ಹಳಬರಿಗೆ ಮಣೆ; 4 ಕೇತ್ರಗಳಿಗೆ ಯಾರಿಗೆ ಟಿಕೆಟ್?