ದಾವಣಗೆರೆ: ನಾನು ನಿಜವಾದ ಬಿಜೆಪಿ ಕಾರ್ಯಕರ್ತ. ಪಕ್ಷ ಕಟ್ಟಲು ದುಡಿದಿದ್ದೇನೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನನಗೆ ಮತದಾರರು ಬೆಂಬಲ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಡಾ. ಹಾಲನೂರ್ ಎಸ್. ಲೇಪಾಕ್ಷ ಹೇಳಿದ್ದಾರೆ.
ನಾನು ನಿಜವಾದ ಬಿಜೆಪಿ ಕಾರ್ಯಕರ್ತ: ಬಂಡಾಯ ಅಭ್ಯರ್ಥಿ ಡಾ. ಲೇಪಾಕ್ಷ - Hallanur S. Speaking about ticket missing
ಸಿಎಂ ಯಡಿಯೂರಪ್ಪ ಅವರ ಮೇಲೆ ಅಪಾರ ವಿಶ್ವಾಸ ಇತ್ತಾದರೂ, ಕಾಣದ ಕೈಗಳ ಕೈವಾಡದಿಂದ ನನಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಬಿಜೆಪಿಗೆ ವಲಸೆ ಬಂದ ಚಿದಾನಂದಗೌಡ ಅವರಿಗೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಇಷ್ಟ ಇಲ್ಲ. ಆದರೂ ಯಾಕೆ ಟಿಕೆಟ್ ನೀಡಿದರು ಎಂಬುದು ಗೊತ್ತಾಗುತ್ತಿಲ್ಲ ಎಂದು ಡಾ. ಹಾಲನೂರ್ ಎಸ್. ಲೇಪಾಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![ನಾನು ನಿಜವಾದ ಬಿಜೆಪಿ ಕಾರ್ಯಕರ್ತ: ಬಂಡಾಯ ಅಭ್ಯರ್ಥಿ ಡಾ. ಲೇಪಾಕ್ಷ BJP rebel candidate Lepakshi](https://etvbharatimages.akamaized.net/etvbharat/prod-images/768-512-9208639-483-9208639-1602925303972.jpg?imwidth=3840)
ಡಾ. ಹಾಲನೂರ್ ಎಸ್. ಲೇಪಾಕ್ಷ್.
ದಾವಣಗೆರೆ: ನಾನು ನಿಜವಾದ ಬಿಜೆಪಿ ಕಾರ್ಯಕರ್ತ. ಪಕ್ಷ ಕಟ್ಟಲು ದುಡಿದಿದ್ದೇನೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನನಗೆ ಮತದಾರರು ಬೆಂಬಲ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಡಾ. ಹಾಲನೂರ್ ಎಸ್. ಲೇಪಾಕ್ಷ ಹೇಳಿದ್ದಾರೆ.
ಡಾ. ಹಾಲನೂರ್ ಎಸ್. ಲೇಪಾಕ್ಷ್ ಮಾತನಾಡಿದರು
ಬಿಜೆಪಿ ಕೋಮುವಾದಿ ಪಕ್ಷ ಅಂತೆಲ್ಲಾ ಹೀನಾಮಾನವಾಗಿ ಬೈದವರಿಗೆ ಪಕ್ಷದಲ್ಲಿ ಮಣೆ ಹಾಕಲಾಗಿದೆ. ಹಲವು ವರ್ಷಗಳಿಂದ ದುಡಿಯುತ್ತಿರುವವರಿಗೆ ಅವಕಾಶ ನೀಡದೇ ಹೊರಗಿನಿಂದ ಬಂದವರಿಗೆ ಆದ್ಯತೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ನೊಟೀಸ್ ಸಹ ಬಂದಿಲ್ಲ. ಕಳೆದ ಚುನಾವಣೆ ವೇಳೆ ಯಡಿಯೂರಪ್ಪ ಹಾಗೂ ಬಸವರಾಜ್ ಭರವಸೆ ಮೇರೆಗೆ ಕಣದಿಂದ ಹಿಂದೆ ಸರಿದಿದ್ದೆ. ಆದ್ರೆ, ಈ ಬಾರಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಿಗೆ ನೀಡಿದ್ದರೂ ನಾವೆಲ್ಲರೂ ಗೆಲ್ಲಿಸಿಕೊಂಡು ಬರುತ್ತಿದ್ದೆವು ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಶಿಕ್ಷಕರಾಗಿ, ಉಪನ್ಯಾಸಕರಾಗಿ 22 ವರ್ಷ ಸೇವೆ ಸಲ್ಲಿಸಿ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ಮತದಾರರ ಜೊತೆ ಒಡನಾಟ ಹೊಂದಿದ್ದು, ನನಗೆ ಬೆಂಬಲ ನೀಡಿ ಗೆಲ್ಲಿಸ್ತಾರೆ. ಬಿಜೆಪಿಯಲ್ಲಿ ಸ್ಪರ್ಧಿಸಿರುವುದು ವಲಸೆ ಅಭ್ಯರ್ಥಿ. ನಾನು ನಿಜವಾದ ಕ್ಯಾಂಡಿಡೇಟ್ ಎಂದು ಹೇಳಿಕೊಂಡರು.