ದಾವಣಗೆರೆ: ಪತ್ನಿ ತುಂಬು ಗರ್ಭಿಣಿ, ಜೂನ್ 03ಕ್ಕೆ ಹೆರಿಗೆಗೆ ವೈದ್ಯರು ದಿನಾಂಕ ನೀಡಿದ್ದರು. ಮಗುವಿನ ಆಗಮನಕ್ಕೆ ಪತಿ ಕಾದು ಕುಳಿತಿದ್ದ ಆದರೆ, ವಿಧಿ ಬೇರೆಯದ್ದೆ ಬರೆದಿತ್ತು. ಮಗು ಮುಖ ನೋಡುವ ಮೊದಲೇ ತಂದೆ ಕೊರೊನಾಗೆ ಬಲಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಹಳ್ಳಿ ಗ್ರಾಮದ ನಿವಾಸಿ ಸುರೇಶ್‌ನಾಯ್ಕ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ಗ್ರಾಮದಲ್ಲಿ ಬೆಸ್ಕಾಂ ಇಲಾಖೆಯಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಪತ್ನಿ ರೋಜಾ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಗೆ ಕೆಲವೇ ದಿನ ಬಾಕಿ ಉಳಿದಿತ್ತು. ಆದರೆ, ಸುರೇಶ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.
ಕಳೆದ 10 ದಿನಗಳಿಂದ ದಾವಣೆಗೆರೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ಗಾಗಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.