ETV Bharat / state

ಮೃತದೇಹಗಳನ್ನಿರಿಸಲು ದಾವಣಗೆರೆಯಲ್ಲಿ ಶವಾಗಾರದ ವ್ಯವಸ್ಥೆ ಹೇಗಿದೆ? - ದಾವಣಗೆರೆ ಶವಾಗಾರ ವ್ಯವಸ್ಥೆ

ನಾನ್​ ಕೋವಿಡ್​ ಡೆತ್​​ಗೆ ಹೋಲಿಸಿದರೆ ಕೋವಿಡ್​​ನಿಂದ ಮೃತಪಡುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದೆ. ಹೀಗೆ ಸಾವನಪ್ಪುವವರ ಶವ ಇರಿಸಲು ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಶವಾಗಾರ ವ್ಯವಸ್ಥೆಯಿದ್ದು, ಒಟ್ಟು 11 ಶವಗಳನ್ನು ಇರಿಸಬಹುದಾಗಿದೆ.‌ ಆದ್ರೆ ಕೋವಿಡ್ ಕಾರಣ ಹೆಚ್ಚು ಸಮಯ ಶವಾಗಾರದಲ್ಲಿ ಶವಗಳನ್ನು ಇರಿಸಲು ಅವಕಾಶ‌ ಕಲ್ಪಿಸಿಲ್ಲ.

how is the mortuary facility in davanagere
ದಾವಣಗೆರೆಯಲ್ಲಿನ ಶವಾಗಾರ ವ್ಯವಸ್ಥೆ
author img

By

Published : May 28, 2021, 9:34 AM IST

ದಾವಣಗೆರೆ: ರಾಜ್ಯದಲ್ಲಿ ಕೋವಿಡ್​​​ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ದಿನಕ್ಕೆ‌ 3-4 ಜನರು ಸಾವನ್ನಪ್ಪುತ್ತಿದ್ದರೆ, ನಾನ್ ಕೋವಿಡ್​​ನಿಂದ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಶವಗಳನ್ನು ಇರಿಸಲು ಸುಸಜ್ಜಿತವಾದ ಶವಾಗಾರದ ವ್ಯವಸ್ಥೆ ಇದ್ದು, ಇದರ ನಿರ್ವಹಣೆಯನ್ನು ಜಿಲ್ಲಾಸ್ಪತ್ರೆ ಮಾಡುತ್ತಿದೆ.

ಜಿಲ್ಲೆಯಲ್ಲಿ ದಿನನಿತ್ಯ 500 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ರೆ ಅದೃಷ್ಟವಶಾತ್​​ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಮಾತ್ರ ಕಡಿಮೆ ಇದೆ. ದಿನಕ್ಕೆ 3-4 ಜನರು ಕೊರೊನಾದಿಂದ ಸಾವನ್ನಪ್ಪುತ್ತಿದ್ದು, ನಾನ್ ಕೋವಿಡ್​ನಿಂದಾಗಿ ಹೆಚ್ಚು ಜನರು ಕೊನೆಯುಸಿರೆಳೆಯುತ್ತಿದ್ದಾರೆ ಎಂದು ಡಿಹೆಚ್​​ಒ ನಾಗರಾಜ್​ ತಿಳಿಸಿದ್ದಾರೆ.

ಶವಾಗಾರ ವ್ಯವಸ್ಥೆ ಕುರಿತು ಪ್ರತಿಕ್ರಿಯೆ

ಹೀಗೆ ಸಾವನ್ನಪ್ಪುವವರ ಶವ ಇರಿಸಲು ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತವಾದ ಶವಾಗಾರ ವ್ಯವಸ್ಥೆ ಇದೆ. 8 ಶವಗಳನ್ನು ಕೋಲ್ಡ್ ಸ್ಟೋರೆಜ್​​ನಲ್ಲಿ ಇರಿಸಬಹುದಾಗಿದ್ದು, ಶವಾಗಾರದೊಳಗಿರುವ ಕಟ್ಟೆ ಮೇಲೆ 3 ಶವಗಳನ್ನು ಸೇರಿಸಿ ಒಟ್ಟು 11 ಶವಗಳನ್ನು ಇರಿಸಬಹುದಾಗಿದೆ.‌

ಇನ್ನು ಶವಾಗಾರವನ್ನು ನಿರ್ವಹಿಸಲು ಒಬ್ಬರನ್ನು ನಿಯೋಜಿಸಲಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಶವಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಕೊರೊನಾ ಇರುವ ಕಾರಣ ಹೆಚ್ಚು ಸಮಯ ಶವಾಗಾರದಲ್ಲಿ ಶವಗಳನ್ನು ಇರಿಸಲು ಅವಕಾಶ‌ ಕಲ್ಪಿಸಿಲ್ಲ ಎಂದು ನಾಗರಾಜ್ ತಿಳಿಸಿದರು.

ನಾನ್ ಕೋವಿಡ್​ನಿಂದ ಸಾವನ್ನಪ್ಪಿದವರ ಸಂಖ್ಯೆ ಅಧಿಕ:

ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಕೊರೊನಾದಿಂದ 264 ಜನ ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಲ್ಲಿ 74 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಇದಲ್ಲದೆ ನಾನ್ ಕೋವಿಡ್​​ನಿಂದ ಈ ವರ್ಷ 85 ಜನರು ಮೃತಪಟ್ಟಿದ್ದಾರೆ. ಆ ಪೈಕಿ ವಯಸ್ಸಾದವರೇ ಹೆಚ್ಚಿನ ಮಂದಿ ಇದ್ದಾರೆ.

ಶವಾಗಾರದಲ್ಲಿ ಕೆಲಸ ಮಾಡುವ ಹವಳಪ್ಪ ಮಾತನಾಡಿ, ಇಲ್ಲಿ ಸೂಕ್ತ ಶವಾಗಾರ ವ್ಯವಸ್ಥೆ ಇದೆ. 2-3 ಕೋವಿಡ್​ ಡೆತ್​ ಕೇಸ್​ಗಳು ಬರತ್ತವೆ. ಉಳಿದವು ನಾನ್​ ಕೋವಿಡ್​ ಪ್ರಕರಣಗಳು. ಶವಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಸಂಬಂಧಿಕರಿಗೆ ಹಸ್ತಾಂತರ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಥಣಿಯಲ್ಲಿ ಹಲ್ಯಾಳ ಏತ ನೀರಾವರಿ ಯೋಜನೆಗೆ ಡಿಸಿಎಂ ಸವದಿ ಚಾಲನೆ

ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ ಇದ್ರೂ ಕೂಡ ಜನರು ಮಾತ್ರ ಕೊರೊನಾದಿಂದ ಸಾವನ್ನಪ್ಪಿದ್ದಾರೆಂಬ ಗುಮಾನಿ ಮಾಡುತ್ತಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ತಲೆಬಿಸಿಯಾಗಿ ಪರಿಣಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.