ದಾವಣಗೆರೆ: ದಾವಣಗೆರೆ ಹೋಟೆಲ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ. ಆದರೀಗ ಹೋಟೆಲ್, ರೆಸ್ಟೋರೆಂಟ್ ವ್ಯಾಪಾರ - ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ. ಇನ್ನು ಕೆಲವು ಮುಚ್ಚುವ ಹಂತಕ್ಕೆ ತಲುಪಿವೆ.
ಲಾಕ್ಡೌನ್ನಿಂದ ಬಂದ್ ಆಗಿದ್ದ ಹೋಟೆಲ್, ರೆಸ್ಟೋರೆಂಟ್ಗಳು ಅನ್‌ಲಾಕ್ ನಂತರ ಗ್ರಾಹಕರಿಗೆ ಮುಕ್ತವಾಗಿವೆ. ಕೊರೊನಾ ಭೀತಿಯಿಂದ ಜನರು ಹೋಟೆಲ್ಗಳತ್ತ ಹೆಜ್ಜೆ ಹಾಕುತ್ತಿಲ್ಲ. ವ್ಯಾಪಾರ - ವಹಿವಾಟು ಇಲ್ಲದೆ ಭಾರಿ ನಷ್ಟ ಅನುಭವಿಸಿದ್ದ ಮಾಲೀಕರು, ಅನ್‌ಲಾಕ್ ಬಳಿಕ ಮತ್ತೆ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಬೆಣ್ಣೆದೋಸೆ ವ್ಯಾಪಾರ ಪೂರ್ತಿ ಡಲ್: ದಾವಣಗೆರೆ ಬೆಣ್ಣೆದೋಸೆಗೆ ಹೆಸರುವಾಸಿ. ಈಗದನ್ನು ಸೇವಿಸುವವರೇ ಕಡಿಮೆಯಾಗಿದ್ದಾರೆ. ಕೊರೊನಾ ಹಿನ್ನೆಲೆ ಗ್ರಾಮೀಣ ಭಾಗದ ಜನರು ನಗರದತ್ತ ಮುಖ ಮಾಡುತ್ತಿಲ್ಲ. ಸುಮಾರು 50 - 60 ಬೆಣ್ಣೆದೋಸೆ ಹೋಟೆಲ್ಗಳಿದ್ದು, ವ್ಯಾಪಾರ ಇಲ್ಲದೇ ನಷ್ಟ ತೀವ್ರ ಅನುಭವಿಸಿವೆ. ಕಾರ್ಮಿಕರು ಹೋಟೆಲ್ ಊಟಕ್ಕಿಂತ ಮನೆಯ ಊಟವನ್ನೇ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಗರಕ್ಕೆ ಬರುವ ಎಷ್ಟೋ ಮಂದಿಗೆ ಹೋಟೆಲ್ ಊಟ ಬೇಡವೆಂದೇ ನಿರ್ಧರಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದರೂ ಉಪಾಹಾರದ ಖರ್ಚಾದರೂ ಉಳಿಯುತ್ತದೆ ಎಂಬ ಭಾವನೆ ಅವರಲ್ಲಿದೆ.
ಈ ಕಾರಣಗಳಿಂದ ಹೆಚ್ಚಿನ ಹೋಟೆಲ್ ಮಾಲೀಕರು ಬಂದ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ. ಮಾಲೀಕರಿಗೆ ಬಾಡಿಗೆ, ಕಾರ್ಮಿಕರ ವೇತನ, ವಿದ್ಯುತ್ ಬಿಲ್ ಸೇರಿದಂತೆ ಇತರ ಖರ್ಚುಗಳು ಜಾಸ್ತಿಯಾಗುತ್ತಿವೆ. ವ್ಯಾಪಾರವಾದರೂ ಆದರೆ, ಹೇಗೋ ಸಂಬಾಳಿಸಿಕೊಂಡು ಹೋಗಬಹುದು. ಇಲ್ಲದಿದ್ದರೆ ಹೇಗೆ ಎಂಬುದು ಲೆಕ್ಕಾಚಾರ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರದ್ದು.
ಟೈಲರ್ಗಳ ಬದುಕು ಬೀದಿಗೆ: ತಿಂಗಳಿಗೆ 15 - 20 ಸಾವಿರ ದುಡಿಯುತ್ತಿದ್ದ ಟೈಲರ್ಗಳು ಈಗ 7 ಸಾವಿರ ರೂಪಾಯಿ ಸಂಪಾದನೆಗೆ ಇಳಿದಿದ್ದಾರೆ. 30ರಿಂದ 40 ಜೊತೆ ಪ್ಯಾಂಟು, ಶರ್ಟ್ ಹೊಲಿಯುತ್ತಿದ್ದೆವು. ಈಗ ಅದರ ಸಂಖ್ಯೆ 15ಕ್ಕೆ ಇಳಿದಿದೆ. ಕೊರೊನಾ ಆರ್ಥಿಕ ಹೊಡೆತ ಕೊಟ್ಟರೆ, ವರುಣ ಗಾಯದ ಮೇಲೆ ಮತ್ತೆ ಬರೆ ಎಳೆಯುತ್ತಿದ್ದಾನೆ ಎನ್ನುತ್ತಾರೆ ಟೈಲರ್ಗಳು.