ETV Bharat / state

ರಸ್ತೆಯಲ್ಲಿ ಬಿಸಾಡಿದ ಆಸ್ಪತ್ರೆ ವಸ್ತುಗಳು : ಜನರಲ್ಲಿ ಭಯದ ವಾತಾವರಣ - Hospital waste in a cement bag

ದಾವಣಗೆರೆ ಮಾರ್ಗದ ಎರಡನೇ ರೈಲ್ವೆ ಗೇಟ್ ಸಮೀಪದ ರಸ್ತೆ ಬದಿ ಮರದ ಕೆಳಗೆ, ಆಸ್ಪತ್ರೆಗಳಲ್ಲಿ ಉಪಯೋಗಿಸಿರುವ ತ್ಯಾಜ್ಯವನ್ನು ಸ್ವಚ್ಛ ಭಾರತ ಮುದ್ರಿತ ಸಿಮೆಂಟ್ ಚೀಲದಲ್ಲಿ ಮೂಟೆ ಕಟ್ಟಿ ಎಸೆಯಲಾಗಿದೆ. ಆದರೆ ಆ ಚೀಲವು ಹರಿದು ಆಸ್ಪತ್ರೆಯ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿದೆ. ಇದು ಸಾರ್ವಜನಿಕರಲ್ಲಿ ಆತಂಕವನ್ನ ಸೃಷ್ಟಿಸಿದೆ.

Harihara
ರಸ್ತೆಯಲ್ಲಿ ಬಿಸಾಡಿದ ಆಸ್ಪತ್ರೆಯಲ್ಲಿ ಉಪಯೋಗಿಸಿದ ವಸ್ತುಗಳು
author img

By

Published : Jun 18, 2020, 9:11 AM IST

ಹರಿಹರ: ಹರಿಹರ - ದಾವಣಗೆರೆ ಮಾರ್ಗದ ರಸ್ತೆ ಬದಿಯಲ್ಲಿ ಉಪಯೋಗಿಸಲ್ಪಟ್ಟ ಔಷಧ ತ್ಯಾಜ್ಯವನ್ನು ಬಿಸಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನಗರದ ದಾವಣಗೆರೆ ಮಾರ್ಗದ ಎರಡನೇ ರೈಲ್ವೆ ಗೇಟ್ ಹರಿಹರ ಗಡಿರೇಖೆಯ ಸಮೀಪ, ರಸ್ತೆ ಬದಿಯ ಮರದ ಕೆಳಗೆ ಆಸ್ಪತ್ರೆಗಳಲ್ಲಿ ಉಪಯೋಗಿಸಿರುವ ತ್ಯಾಜ್ಯವನ್ನು ಸ್ವಚ್ಛ ಭಾರತ ಮುದ್ರಿತ ಸಿಮೆಂಟ್ ಚೀಲದಲ್ಲಿ ಮೂಟೆ ಕಟ್ಟಿ ಎಸೆಯಲಾಗಿದೆ. ಆದರೆ, ಆ ಚೀಲವು ಹರಿದು ಆಸ್ಪತ್ರೆಯ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿದೆ. ತ್ಯಾಜ್ಯದಲ್ಲಿ ಅರೆಬರೆ ಬಳಸಲಾಗಿರುವ ಔಷಧಗಳು, ಸೂಜಿಗಳು, ಬಾಟಲ್‌ಗಳು ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳು ಇವೆ.

ಹೀಗೆ ರಾಸಾಯನಿಕಯುಕ್ತ ಔಷಧಗಳನ್ನು ತಂದು ಸುರಿಯಲಾಗಿರುವ ಪ್ರದೇಶದಲ್ಲಿ ದನಕರು ಹಾಗೂ ಕುರಿಗಳನ್ನು ಮೇಯಿಸಲಾಗುತ್ತದೆ. ತ್ಯಾಜ್ಯ ವಸ್ತುಗಳು ಹಾಗೂ ರಾಸಾಯನಿಕಯುಕ್ತ ಔಷಧಗಳು ಜಾನುವಾರು ಮೇವಿಗೆ ಸೇರಿಕೊಂಡು ಅವುಗಳ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿದೆ. ಇದಲ್ಲದೇ ಈ ರಸ್ತೆ ಮಾರ್ಗವಾಗಿ ಹರಿಹರ - ದಾವಣಗೆರೆಗೆ ಪ್ರತಿ ನಿತ್ಯವೂ ನೂರಾರು ಜನರು ಬೈಕ್​ಗಳಲ್ಲಿ ಸಂಚರಿಸುತ್ತಾರೆ. ರಸ್ತೆಯ ಪಕ್ಕದ ಜಮೀನುಗಳಲ್ಲಿ ರೈತರು, ಕೂಲಿ ಕಾರ್ಮಿಕರು ಕೆಲಸಕ್ಕೆಂದು ಸಂಚರಿಸುತ್ತಿರುತ್ತಾರೆ. ಈ ಔಷಧೀಯ ತ್ಯಾಜ್ಯ ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ.

ಇಲಾಖೆಯ ನಿಯಮದಂತೆ ಉಪಯೋಗಿಸಿದ ಔಷಧ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕ ಸಂಸ್ಕರಣೆ ಮೂಲಕ ನಾಶಗೊಳಿಸಬೇಕು. ಗುಂಡಿ ತೆಗೆದು ಅದರಲ್ಲಿ ಹೂಳುವಂತೆಯೂ ನಿರ್ದೇಶನವಿದೆ. ಆದರೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ.

ಇಲ್ಲಿ ಬಿದ್ದಿರುವ ತ್ಯಾಜ್ಯ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರಗಳಿಗೆ ಸೇರಿದ್ದೋ ಎಂಬುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕಂಡುಕೊಳ್ಳಬೇಕಿದೆ. ಅಲ್ಲದೇ ತಪ್ಪಿತಸ್ತ ಆಸ್ಪತ್ರೆಯ ಮೇಲೆ ಕ್ರಮ ಜರುಗಿಸಿ ಈ ರೀತಿಯ ಪ್ರಕರಣ ಪುನರಾವರ್ತಿಸದಂತೆ ಕಟ್ಟುನಿಟ್ಟಿನ ಆದೇಶ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.