ETV Bharat / state

ದಾವಣಗೆರೆಯಲ್ಲಿ ಅದ್ಧೂರಿಯಾಗಿ ನೆರವೇರಿದ ಹಿಂದೂ ಮಹಾಗಣಪತಿ ನಿಮಜ್ಜನ.. ಶೋಭಾಯಾತ್ರೆಗೆ ಹರಿದು ಬಂದ ಭಕ್ತಸಾಗರ

ದಾವಣಗೆರೆ ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಹಿಂದೂ ಮಹಾಗಣಪತಿ ನಿಮಜ್ಜನೆ
ಹಿಂದೂ ಮಹಾಗಣಪತಿ ನಿಮಜ್ಜನೆ
author img

By ETV Bharat Karnataka Team

Published : Oct 14, 2023, 10:03 PM IST

ಹಿಂದೂ ಮಹಾಗಣಪತಿ ಅದ್ಧೂರಿ ನಿಮಜ್ಜನ.. ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತಗಣ

ದಾವಣಗೆರೆ: ಹಿಂದೂ ಮಹಾಗಣಪತಿ ನಿಮಜ್ಜನದ ಶೋಭಾಯಾತ್ರೆ ಶನಿವಾರ ಅದ್ಧೂರಿಯಾಗಿ ಜರುಗಿತು. 26 ದಿನಗಳ ಕಾಲ ಇರಿಸಿದ್ದ ಗಣೇಶನಿಗೆ ಅದ್ಧೂರಿಗೆ ಮೆರವಣಿಗೆ ಮಾಡುವ ಮೂಲಕ ನಿಮಜ್ಜನ ಮಾಡಲಾಯಿತು. ಇನ್ನು, ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತು. ಇದರಿಂದ ಇಡೀ ದಾವಣಗೆರೆ ಕೇಸರಿ ಅಲಂಕಾರದಿಂದ ಸಿಂಗಾರಗೊಂಡಿತ್ತು. ವಿಶೇಷ ಎಂದರೇ ಡಿಜೆ ಸದ್ದಿಗೆ ಯುವಕ, ಯುವತಿಯರು ಭರ್ಜರಿ ಸ್ಪೆಪ್​ಗಳನ್ನು ಹಾಕಿದ್ದಾರೆ.

ಬೆಳಗ್ಗೆ 10.30 ಗಂಟೆಗೆ ಆರಂಭವಾದ ಶೋಭಾಯಾತ್ರೆ, ಹೈಸ್ಕೂಲ್‌ ಮೈದಾನದಿಂದ ಹೊರಟು, ಎವಿಕೆ ಕಾಲೇಜ್ ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಲಾಯರ್‌ ರೋಡ್‌ ಮೂಲಕ ಪಿಬಿ ರಸ್ತೆ ಸೇರಿ, ಅಲ್ಲಿಂದ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಮುಕ್ತಾಯವಾಯಿತು. ಇನ್ನು, ಶೋಭಯಾತ್ರೆಯಲ್ಲಿ ಹೆಜ್ಜೆ ಹಾಕಲು ಐದು ಡಿಜೆ ಹಾಗು ಕಲಾ ತಂಡಗಳ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಒಟ್ಟು ಐದು ಡಿಜೆ ವ್ಯವಸ್ಥೆ ಮಾಡಿದ್ದರಿಂದ ಯುವತಿಯರು ಭರ್ಜರಿ ಸ್ಟೆಪ್ ಹಾಕಿದರು. ‌

ಹಿಂದೂ ಮಹಾಗಣಪತಿ ಟ್ರಸ್ಟ್‌(ರಿ) ವತಿಯಿಂದ ಪ್ರತಿಷ್ಠಾಪಿಸಿರುವ ಆರನೇ ವರ್ಷದ ಹಿಂದೂ ಮಹಾಗಣಪತಿಯ ನಿಮಜ್ಜನ ಶೋಭಾಯಾತ್ರೆ ಮೆರವಣಿಗೆಗೆ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಶೋಭಾಯಾತ್ರೆಯಲ್ಲಿ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಕೂಡ ಭಾಗಿಯಾಗಿದ್ದರು.‌ ಎಂ ಪಿ ರೇಣುಕಾಚಾರ್ಯ ಶೋಭಾಯಾತ್ರೆಯಲ್ಲಿ ಜನರ ಮಧ್ಯೆ ಭರ್ಜರಿ ಸ್ಟೆಪ್ ಹಾಕಿದರು. ಬಳಿಕ ಕ್ರೇನ್ ಹತ್ತಿ ಪುನೀತ್ ರಾಜ್‍ಕುಮಾರ್ ಫೋಟೋ ಹಿಡಿದ ಅಭಿಮಾನಿಗಳತ್ತ ಪ್ರದರ್ಶಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ದಾವಣಗೆರೆ ಜಿಲ್ಲಾ ಪೊಲೀಸ್‌ ಇಲಾಖೆ ಮುಂಜಾಗ್ರತೆ ಕ್ರಮ ವಹಸಿತ್ತು. ಇದರ ಬೆನ್ನಲ್ಲೇ ನಗರದ ಸೂಕ್ಷ್ಮ ಹಾಗು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತು. ಯಾವುದೇ ಅಹಿತರ ಘಟನೆ ನಡೆಯದಂತೆ ಎಸ್ಪಿ ಉಮಾ ಪ್ರಶಾಂತ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಪರೇಡ್ ಮಾಡಿದ್ದರು. ಇನ್ನು ಪೊಲೀಸ್​ ಸಿಬ್ಬಂದಿಯೊಂದಿಗೆ ಇಂದು ರೂಟ್ ಮಾರ್ಚ್ ಕೂಡ ಮಾಡಿ ​ಇಲಾಖೆ ಶಕ್ತಿ ಪ್ರದರ್ಶಿಸಿತ್ತು.

ಹಿಂದೂ ಮಹಾಗಣಪತಿ ನಿಮಜ್ಜನೆಯ ಶೋಭಾಯಾತ್ರೆಗಾಗಿ ನಗರದಲ್ಲಿ ನಿನ್ನೆಯಿಂದಲೇ ತಯಾರಿ ನಡೆಸಲಾಗಿತ್ತು. ಯಾತ್ರೆ ಸಾಗುವ ರಸ್ತೆಯುದ್ದಕ್ಕೂ ಬಾವುಟಗಳ ಕಟ್ಟಿ ಸಿಂಗಾರ ಪಡಿಸಲಾಗಿತ್ತು.

ಇದನ್ನೂ ಓದಿ: ನಾಳೆಯಿಂದ ಶರನ್ನವರಾತ್ರಿ ಸಂಭ್ರಮ: ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಖಾಸಗಿ ದರ್ಬಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.