ETV Bharat / state

ಸಹೋದರನಿಗೆ ಮರುಜೀವ ನೀಡಿದ ಅಕ್ಕ: ಅಸ್ಥಿಮಜ್ಜೆಯನ್ನೇ ದಾನ ಮಾಡಿದ ಬಾಲಕಿ - ಇತ್ತೀಚಿನ ದಾವಣಗೆರೆ ಸುದ್ದಿ

ಕತ್ತಲಗೆರೆ ನಿವಾಸಿ ಕವಿತರವರ ಪುತ್ರ ಹುಟ್ಟಿದಾಗಿನಿಂದ ತಲಸ್ಸೇಮಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ. ಇದೀಗ ಆತನ ಸಹೋದರಿ ನಮ್ರತ ತನ್ನ ಅಸ್ಥಿಮಜ್ಜೆಯನ್ನು ಬಾಲಕನಿಗೆ ಅಳವಡಿಸಿ ಆತನಿಗೆ ಮರುಜೀವ ನೀಡಿದ್ದಾಳೆ.

ಸಹೋದರನಿಗೆ ಮರುಜೀವ ನೀಡಿದ ಅಕ್ಕ....ತನ್ನ ಅಸ್ಥಿಮಜ್ಜೆಯನ್ನೇ ದಾನ ಮಾಡಿದ ಅಕ್ಕ ನಮ್ರತ
author img

By

Published : Oct 20, 2019, 7:01 PM IST

ದಾವಣಗೆರೆ: ತಾಲೂಕಿನ ಕತ್ತಲಗೆರೆ ನಿವಾಸಿ ಕವಿತಾ ಎಂಬುವರ ಪುತ್ರ ಹುಟ್ಟಿದಾಗಿನಿಂದ ತಲಸ್ಸೇಮಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ. ಇದೀಗ ಆತನಿಗೆ ಸಹೋದರಿಯ ಅಸ್ಥಿಮಜ್ಜೆಯನ್ನು ಅಳವಡಿಸಲಾಗಿದೆ. ತಮ್ಮನಿಗೆ ಅಕ್ಕನೇ ಮರುಜೀವ ನೀಡಿದ್ದಾಳೆ.

ಸಹೋದರನಿಗೆ ಮರುಜೀವ ನೀಡಿದ ಅಕ್ಕ....ತನ್ನ ಅಸ್ಥಿಮಜ್ಜೆಯನ್ನೇ ದಾನ ಮಾಡಿದ ಪ್ರಾಣ ಉಳಿಸಿದ ಬಾಲಕಿ

ಈ ಕಾಯಿಲೆಗೆ, ಕೆಂಪು ರಕ್ತ ಉತ್ಪಾದನೆ ಕಡಿಮೆ ಇದ್ದು ನಾಲ್ಕು ವಾರಕ್ಕೊಮ್ಮೆ ರಕ್ತ ಹಾಕಿಸಿಕೊಳ್ಳಬೇಕಾಗುತ್ತದೆ. ರೋಗ ಉಲ್ಬಣವಾದರೆ ಮುಂದಿನ ದಿನಗಳಲ್ಲಿ ಲಿವರ್, ಹೃದಯಕ್ಕೆ ಹಾನಿ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ತಾಯಿ ಕವಿತ ಹಲವು ವೈದ್ಯರ ಬಳಿ ತೋರಿಸಿದ್ದು, ಅವರೆಲ್ಲ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದರೆ ವಿನಃ ಕಾಯಿಲೆ ಗುಣಮುಖವಾಗುತ್ತೆ ಎಂಬ ಭರವಸೆ ನೀಡಿರಲಿಲ್ಲ.

ನಾರಾಯಣ ಹೃದಯಾಲಯದ ವೈದ್ಯ ಸುನೀಲ್ ಆಸ್ಪತ್ರೆಗೆ ಬಂದು ಬಾಲಕ ಹೇಮಂತನನ್ನು ಪರೀಕ್ಷೆ ಮಾಡಿದ್ದರು. ಅಷ್ಟೇ ಅಲ್ಲದೇ ತಲಸ್ಸೇಮಿಯಾವನ್ನು ಗುಣಪಡಿಸುವುದಾಗಿ ಭರವಸೆ ನೀಡಿ, ಕವಿತಾ ಅವರಿಗೆ ಮಗುವಿನೊಂದಿಗೆ ಆಸ್ಪತ್ರೆಯಲ್ಲೇ ಇರುವಂತೆ ಸೂಚನೆ ನೀಡಿದ್ದರು. ಅದರಂತೆ ಕವಿತಾ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಮಗನಿಗೆ ಕವಿತಾ ನಾಲ್ಕು ವಾರಕ್ಕೊಮ್ಮೆ ಒಂದು ಬಾಟಲ್ ರಕ್ತ ಹಾಕಿಸುತ್ತಿದ್ದರು. ಕೊನೆಗೆ ವೈದ್ಯ ಸುನೀಲ್ ಭಟ್ ಅವರು ಬಾಲಕನಿಗೆ ಆತನ ಅಕ್ಕ ನಮ್ರತಾಳ ಜೀನ್ ಪರೀಕ್ಷೆ ಮಾಡಿಸಿದ್ದು, ಅದು ಹೊಂದಿಕೆಯಾದ ಹಿನ್ನೆಲೆಯಲ್ಲಿ ಆಕೆಯ ಅಸ್ಥಿಮಜ್ಜೆಯನ್ನು ತೆಗೆದು ಹೇಮಂತ್​ಗೆ ಅಳವಡಿಸಿದ್ದಾರೆ. ಇದೀಗ ಬಾಲಕ ಹೇಮಂತ ಹಾಗೂ ಆತನ ಅಕ್ಕ ನಮ್ರತಾ ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಲಸ್ಸೇಮಿಯಾ ಮಾರಣಾಂತಿಕ ಕಾಯಿಲೆಯಲ್ಲ, ಸರಿಯಾದ ಚಿಕಿತ್ಸೆಯ ಮೂಲಕ ಅದನ್ನ ಗುಣಪಡಿಸಬಹುದು ಎಂದು ವೈದ್ಯರು ತೋರಿಸಿಕೊಟ್ಟಿದ್ದು, ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

Intro:(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ: ದಾವಣಗೆರೆಯ ಆ ಬಾಲಕ ಹುಟ್ಟಿದಾಗಿನಿಂದ ವಿಚಿತ್ರ ಕಾಯಿಲೆಯಿಂದ ಬಳಲಿ, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕನಿಗೆ ಆತನ ಸಹೋದರಿಯೇ ಮರುಜೀವ ನೀಡಿದ್ದು, ಇದೀಗ ಆತ ಸಂಪೂರ್ಣ ಗುಣಮುಖನಾಗಿದ್ದು ಎಲ್ಲರಂತೆ ಸಾಮಾನ್ಯನಾಗಿದ್ದಾನೆ.

ಹೌದು.. ತಾಯಿಯ ಮಡಿಲಲ್ಲಿ ಹೀಗೆ ಮುಗ್ಧತೆಯಿಂದ ಕುಳಿತಿರುವ ಈ ಬಾಲಕನ ಹೆಸರು ಹೇಮಂತ್, ದಾವಣಗೆರೆ ತಾಲೂಕಿನ ಕತ್ತಲಗೆರೆ ವಾಸಿ ಕವಿತರವರ ಪುತ್ರ. ಹೇಮಂತ್ ಹುಟ್ಟಿದಾಗಿನಿಂದ ತಲಸ್ಸೇಮಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ. ಈ ಕಾಯಿಲೆಗೆ ತುತ್ತಾದವರಿಗೆ ಕೆಂಪು ರಕ್ತ ಉತ್ಪಾದನೆ ಕಡಿಮೆ ಇದ್ದು ನಾಲ್ಕು ವಾರಕ್ಕೆ ಒಮ್ಮೆ ರಕ್ತ ಹಾಕಿಸಿಕೊಳ್ಳಬೇಕಾಗುತ್ತದೆ. ಇದೇ ರೀತಿ ಆದರೆ ಮುಂದಿನ ದಿನಗಳಲ್ಲಿ ಲಿವರ್, ಹೃದಯಕ್ಕೆ ಹಾನಿ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಯಾವಾಗ ಹೇಮಂತ್ ಈ ಕಾಯಿಲೆಗೆ ತುತ್ತಾಗಿದ್ದಾನೆಂದು ತಿಳಿಯಿತೋ ತಾಯಿ ಕವಿತ ಸಾಕಷ್ಟು ವೈದ್ಯರ ಬಳಿ ತೋರಿಸಿದ್ದಾಳೆ. ಆಗ ವೈದ್ಯರು ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿದ್ದಾರೆ, ವಿನಃ ಕಾಯಿಲೆ ಗುಣಮುಖವಾಗುತ್ತೆ ಎಂದು ಹೇಳಿರಲಿಲ್ಲ..

ಒಂದು ದಿನ ನಾರಾಯಣ ಹೃದಯಾಲಯದ ವೈದ್ಯ ಸುನೀಲ್ ಆಸ್ಪತ್ರೆಗೆ ಬಂದು ಹೇಮಂತ್ ನನ್ನು ಪರೀಕ್ಷೆ ಮಾಡಿದ್ದಾರೆ, ಅಷ್ಟೇ ಅಲ್ಲ, ತಲಸ್ಸೇಮಿಯಾವನ್ನು ಗುಣಪಡಿಸುವುದಾಗಿ ಹೇಳಿ, ಕವಿತಾ ಮಗುವಿನೊಂದಿಗೆ ಆಸ್ಪತ್ರೆಯಲ್ಲೇ ಇರುವಂತೆ ಸೂಚನೆ ನೀಡಿದ್ದರು. ಅದರಂತೆ ಕವಿತಾ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಹೇಮಂತ್ ನಿಗೆ ಕವಿತಾ ನಾಲ್ಕು ವಾರಕ್ಕೊಮ್ಮೆ ಒಂದು ಬಾಟಲ್ ರಕ್ತ ಹಾಕಿಸುತ್ತಿದ್ದರು. ಕೊನೆಗೆ ವೈದ್ಯ ಸುನೀಲ್ ಭಟ್ ಹೇಮಂತ್ ಅಕ್ಕ ನಮ್ರತಾಳ ಜೀನ್ ಪರೀಕ್ಷೆ ಮಾಡಿದ್ದಾರೆ. ಇಬ್ಬರದ್ದೂ ಮ್ಯಾಚ್ ಆದ ಹಿನ್ನೆಲೆಯಲ್ಲಿ ಆಕೆಯ ಅಸ್ಥಿಮಜ್ಜೆಯನ್ನು ತೆಗೆದು ಹೇಮಂತ್ ಗೆ ಅಳವಡಿಸಿದ್ದು, ಇದೀಗ ಹೇಮಂತ್ ಹಾಗೂ ಅಕ್ಕ ನಮ್ರತಾ ಇಬ್ಬರೂ ಆರೋಗ್ಯದಿಂದ ಇದ್ದಾರೆ. ಅಸ್ಥಿಮಜ್ಜೆ ಕಸಿ ಮಾಡುವುದು ಲಿವರ್, ಕಿಡ್ನಿ ದಾನದ ರೀತಿಯಲ್ಲ, ಇದು ಕೇವಲ ಕಾಂಡಕೋಶವನ್ನು ಪಡೆಯುವ ಮೂಲಕ ಅದನ್ನು ಜೋಡಿಸಲಾಗುತ್ತದೆ. ಕಾಂಡಕೋಶವನ್ನು ದಾನ ಮಾಡಿದ ಮರು ದಿನವೇ ಸಾಮಾನ್ಯ ಜೀವನ ನಡೆಸಬಹುದು ಯಾವುದೇ ತೊಂದರೆಯಾಗುವುದಿಲ್ಲಾ ಎನ್ನುತ್ತಾರೆ ವೈದ್ಯರು.

ಒಟ್ಟಾರೆ ಇದೀಗ ಹೇಮಂತ್ ಆರೋಗ್ಯವಾಗಿದ್ದು, ಎಲ್ಲಾ ಬಾಲಕರಂತೆ ಆಟವಾಡಿಕೊಂಡಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ಏನೇ ಆಗಲೀ ತಲಸ್ಸೇಮಿಯಾ ಮಾರಣಾಂತಿಕ ಕಾಯಿಲೆಯಲ್ಲ, ಸರಿಯಾದ ಚಿಕಿತ್ಸೆಯ ಮೂಲಕ ಅದನ್ನ ಗುಣಪಡಿಸಬಹುದು ಎಂದು ವೈದ್ಯರು ತೋರಿಸಿಕೊಟ್ಟಿದ್ದು, ವೈದ್ಯರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಪ್ಲೊ..
ಬೈಟ್ ೦೧ : ಕವಿತಾ, ಹೇಮಂತ್ ತಾಯಿ
ಬೈಟ್ ೦೨ : ಸುನೀಲ್ ಭಟ್, ವೈದ್ಯರು

Body:(ಸ್ಟ್ರಿಂಜರ್: ಮಧುದಾವಣಗೆರೆ)

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.