ETV Bharat / state

ಪಂಚಮಸಾಲಿ ಪೀಠದಲ್ಲಿ ಹರ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ - ದಾವಣಗೆರೆಯಲ್ಲಿ ಜಾತ್ರಾ ಮಹೋತ್ಸವ ಸುದ್ದಿ

ಹರಿಹರ ನಗರದ ಹೊರವಲಯದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ ನಡೆಯಲಿದ್ದು,ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

fair
ಪಂಚಮಸಾಲಿ ಪೀಠದಲ್ಲಿ ಜಾತ್ರಾ ಮಹೋತ್ಸವ
author img

By

Published : Jan 12, 2020, 9:02 PM IST

ಹರಿಹರ/ದಾವಣಗೆರೆ: ನಗರದ ಹೊರವಲಯದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ, ಪಂಚಮಸಾಲಿ ರಾಜ್ಯ ಸಂಘದ ಬೆಳ್ಳಿಬೆಡಗು, ಅಕ್ಕಮಹಾದೇವಿ ವಚನ ವಿಜಯೋತ್ಸವ ಹಾಗೂ ತಮ್ಮ ಪೀಠಾರೋಹಣದ ದ್ವಿತೀಯ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವಚನಾನಂದ ಶ್ರೀಗಳು ಹೇಳಿದರು.

ಪಂಚಮಸಾಲಿ ಪೀಠದಲ್ಲಿ ಜಾತ್ರಾ ಮಹೋತ್ಸವ

ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಸಚಿವ ಸಿ.ಸಿ ಪಾಟೀಲ್,​​ ಜ.14ರ ಬೆಳಿಗ್ಗೆ 11:30ಕ್ಕೆ ವೀರರಾಣಿ ಕಿತ್ತೂರು ಚನ್ನಪ್ಪ ವೇದಿಕೆಯಲ್ಲಿ ಹರಜಾತ್ರಾ ಮಹೋತ್ಸವ ಹಾಗೂ ಯುವ ಸಮಾವೇಶಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡುವರು. ಬೆಂಗಳೂರು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸಾನಿಧ್ಯ ವಹಿಸುವರು, ಯುವ ಸಮಾವೇಶವನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸುವರು ಎಂದು ತಿಳಿಸಿದ್ರು. ಸಂಕ್ರಾಂತಿ ಸಂಭ್ರಮ, ಕುಂಭಮೇಳ ಹಾಗೂ ಜಾನಪದ ಕಲಾಮೇಳದಲ್ಲಿ ಅಕ್ಕಮಹಾದೇವಿಯ ವಚನ ಕಟ್ಟುಗಳನ್ನು ಆನೆ ಅಂಬಾರಿಯಲ್ಲಿರಿಸಿ ಹರಿಹರೇಶ್ವರ ದೇವಸ್ಥಾನದಿಂದ ಶ್ರೀಕಾಂತ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು. ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ನಡೆವ ಮಹಿಳಾ ಸಮಾವೇಶವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ತಿಳಿಸಿದ್ರು.

ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು, ಜನರಿಗೆ ಆಸನ, ಊಟ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರು, ಮಜ್ಜಿಗೆ ವಿತರಣೆಯಿದೆ. ನಗರದ ಎಲ್ಲಾ ಕಲ್ಯಾಣ ಮಂಟಪಗಳಲ್ಲಿ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 8 ಎಲ್‌ಇಡಿ ವಾಲ್, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಠದ ಸುತ್ತಮುತ್ತಲ ಖಾಲಿ ಜಾಗಗಳಲ್ಲಿ ಸುಸಜ್ಜಿತ ವಾಹನ ನಿಲ್ದಾಣ ನಿರ್ಮಿಸಲಾಗಿದೆ. ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ನಿರಂತರ ವಿದ್ಯುತ್‌ಗಾಗಿ ಪ್ರತ್ಯೇಕ ವಿದ್ಯುತ್ ಮಾರ್ಗ, ಪರಿವರ್ತಕ ಅಳವಡಿಸಲಾಗುತ್ತಿದೆ. ಮಾಧ್ಯಮದವರಿಗೆ ಮೀಡಿಯಾ ಸೆಂಟರ್ ತೆರೆಯಲಾಗುತ್ತಿದೆ ಎಂದು ಜಾತ್ರಾ ಸಿದ್ಧತೆ ಬಗ್ಗೆ ವಿವರಣೆ ನೀಡಿದ್ದಾರೆ.

Intro:
ಜ.14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ
Intro:
ಹರಿಹರ: ನಗರ ಹೊರವಲಯದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ, ಪಂಚಮಸಾಲಿ ರಾಜ್ಯ ಸಂಘದ ಬೆಳ್ಳಿಬೆಡಗು, ಅಕ್ಕಮಹಾದೇವಿ ವಚನ ವಿಜಯೋತ್ಸವ ಹಾಗೂ ತಮ್ಮ ಪೀಠಾರೋಹಣದ ದ್ವಿತೀಯ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವಚನಾನಂದ ಶ್ರೀಗಳು ಹೇಳಿದರು.

Body:
ಪೀಠದ ಆವರಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿ ಮಾತನಾಡಿದ ಅವರು, ಜ.14ರ ಬೆಳಿಗ್ಗೆ 11:30ಕ್ಕೆ ವೀರರಾಣಿ ಕಿತ್ತೂರು ಚನ್ನಪ್ಪ ವೇದಿಕೆಯಲ್ಲಿ ಹರಜಾತ್ರಾ ಮಹೋತ್ಸವ ಹಾಗೂ ಯುವ ಸಮಾವೇಶಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡುವರು. ಬೆಂಗಳೂರು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸಾನಿಧ್ಯ ವಹಿಸುವರು, ಯುವ ಸಮಾವೇಶವನ್ನು ಮಾಜಿ ಸಚಿವಮುರುಗೇಶ್ ನಿರಾಣೆ ಉದ್ಘಾಟಿಸುವರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಜಿ ದಿಕ್ಸೂಚಿ ಭಾಷಣ ಮಾಡುವರು, ಪಂಚಮಸಾಲಿ ರಾಜ್ಯ ಯುವಘಟಕದ ಅಧ್ಯಕ್ಷ ನವೀನ್ ಪಾಟೀಲ್ ಅಧ್ಯಕ್ಷತೆ ವಹಿಸುವರು. ಧರ್ಮದರ್ಶಿ ಚಂದ್ರಶೇಖರ ಪೂಜಾರ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಶಾಸಕರಾದ ಅರವಿಂದ್ ಬೆಲ್ಲದ್, ಶಂಕರಗೌಡ ಮುನೇನಕೊಪ್ಪ, ವೀರಣ್ಣ ಚರಂತಿಮಠ್, ಅರುಣ್‌ಕುಮಾರ್ ಪೂಜಾರ್, ಚಿತ್ರನಟ ರಮೇಶ್ ಅರವಿಂದ್, ಮಾಜಿ ಶಾಸಕ ಅಶೋಕ ಖೇಣಿ, ಬಿ.ವೈ.ವಿಜೆಯೇಂದ್ರ ಮತ್ತಿತರರು ಭಾಗವಹಿಸುವರು.
ಮಧ್ಯಾಹ್ನ 2ಕ್ಕೆ ಸನ್ಮಾನ ಸಮಾರಂಭ, 2:30ಕ್ಕೆ ಪಂಚಮಸಾಲಿ ರಾಜ್ಯ ಸಂಘದ ಬೆಳ್ಳಿಬೆಡಗು ಸಮಾರಂಭವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀ, ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಶ್ರೀ ಸಾನಿಧ್ಯ ವಹಿಸುವರು. ರಾಜ್ಯ ಪಂಚಮಸಾಲಿ ಸಂಘದ ಅಧ್ಯಕ್ಷ ಬಿ.ನಾಗನಗೌಡರು ಅಧ್ಯಕ್ಷತೆ ವಹಿಸುವರು.
ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ಕೇಂದ್ರ ಸಂಸದೀಯ ಕಾರ್ಯದರ್ಶಿ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲು, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ, ವಿ.ಸೋಮಣ್ಣ, ಶ್ರೀರಾಮುಲು, ಸಂಸದರಾದ ಜಿ.ಎಂ.ಸಿದ್ದೇಶ್ವರ, ಕರಡಿ ಸಂಗಣ್ಣ, ಶಿವಕುಮಾರ ಉದಾಸಿ, ಬಿ.ವೈ.ರಾಘವೇಂದ್ರ, ವೈ.ದೇವೇಂದ್ರಪ್ಪ. ಶಾಸಕರಾದ ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಬಿ.ಸಿ.ಪಾಟೀಲ, ಮಾಡಾಳು ವಿರುಪಾಕ್ಷಪ್ಪ, ಆನಂದಸಿಂಗ್, ರಾಜು ಕಾಗೆ, ಮಂಜುನಾಥ್ ಕುನ್ನೂರು ಮತ್ತಿರರು ಭಾಗವಹಿಸುವರು.
ಜ.15ರ ಬೆಳಿಗ್ಗೆ 7-30ಕ್ಕೆ ಇಳಕಲ್ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಮಹಾಶಿವಯೋಗಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆ ನಡೆಸುವರು, ಚಿತ್ರದುರ್ಗ ವನಶ್ರಿಮಠದ ಬಸವಕುಮಾರ ಶ್ರೀ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಶ್ರೀ ಮತ್ತಿತರೆ ವಿವಿಧ ಸಮಾಜಗಳ ಶ್ರೀಗಳು ಭಾಗವಹಿಸವರು. ಬೆಳಿಗ್ಗೆ 8:30ಕ್ಕೆ ಅಕ್ಕಮಹಾದೇವಿ ವಚನ ವಿಜಯೋತ್ಸವವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ಸಂಕ್ರಾಂತಿ ಸಂಭ್ರಮ, ಕುಂಭಮೇಳ ಹಾಗೂ ಜಾನಪದ ಕಲಾಮೇಳದಲ್ಲಿ ಅಕ್ಕಮಹಾದೇವಿಯ ವಚನ ಕಟ್ಟುಗಳನ್ನು ಆನೆ ಅಂಬಾರಿಯಲ್ಲಿಸಿರಿ ಹರಿಹರೇಶ್ವರ ದೇವಸ್ಥಾನದಿಂದ ಶ್ರೀಕಾಂತ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು.
ಮಧ್ಯಾಹ್ನ 11ಕ್ಕೆ ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ನಡೆವ ಮಹಳಾ ಸಮಾವೇಶವನ್ನು ಮಾಜಿ ಸಿ.ಎಂ.ಸಿದ್ದರಾಮಯ್ಯ ಉದ್ಘಾಟಿಸುವರು, ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀ, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಶ್ರೀ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ, ಯೋಗಿ ವೇಮನ ಮಠದ ವೇಮನಾನಂದ ಶ್ರೀ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಸಾನಿಧ್ಯ ವಹಿಸುವರು.
ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ರಾಜ್ಯ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ವಸಂತ ಹುಲ್ಲತತ್ತಿ, ವಿಜಯ್ ಮುರುಗೇಶ್ ನಿರಾಣಿ, ಚಿತ್ರನಟಿ ರಾಗಿಣಿ ದ್ವಿವೇದಿ, ಡಾ|ಶಶಿಕಲಾ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸುವರು.
ಮಧ್ಯಾಹ್ನ 3ಕ್ಕೆ ಪೀಠದ ದಶಮಾನೋತ್ಸವ ಹಾಗೂ ತಮ್ಮ ದ್ವಿತೀಯ ಪೀಠಾರೋಹಣ ಸಮಾರಂಭವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ ಉದ್ಘಾಟಿಸುವರು. ಧರ್ಮದರ್ಶಿ ಬಿ.ಸಿ.ಉಮಾಪತಿ ಅಧ್ಯಕ್ಷತೆ ವಹಿಸುವರು, ರಾಜ್ಯ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಮುಖಂಡರಾದ ಈಶ್ವರ ಖಂಡ್ರೆ, ಪ್ರಭಾಕರ ಕೋರೆ, ವಿನಯ ಕುಲಕರ್ಣೀ, ಲಕ್ಷ್ಮೀ ಹೆಬ್ಬಾಳ್ಕರ, ಗೌರಮ್ಮ ಕಾಶಪ್ಪನವರ, ಪ್ರಕಾಶ್ ಹುಕ್ಕೇರಿ, ನಂದಿಹಳ್ಳಿ ಹಾಲಪ್ಪ, ಶಾಸಕರಾದ ಎಸ್.ರಾಮಪ್ಪ, ಬಿ.ನಾಗೇಂದ್ರ, ಪರಮೇಶ್ವರ ನಾಯ್ಕ ಮತ್ತಿತರರು ಭಾಗವಹಿಸುವರು ಎಂದು ವಿವರಿಸಿದರು.
ಪಂಚಮಸಾಲಿ ಸಮಾಜದ ಮುಖಂಡ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ವೀರಶೈವ ಲಿಂಗಾಯಿತರಲ್ಲೆ ಪಂಚಮಸಾಲಿಗಳು ಬಹುಸಂಖ್ಯಾತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಲ್ಲಿ ಬಹುತೇಕ ರೈತಾಪಿ ಹಾಗೂ ಕೃಷಿ ಕಾರ್ಮಿಕರಾಗಿದ್ದು, ಸಮಾಜದ ಜನರ ನೋವುಗಳ ಬಗ್ಗೆ ಶ್ರೀಪೀಠಕ್ಕೆ ಸಂಪೂರ್ಣ ಅರಿವಿದ್ದು, ಅವರ ನೋವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ವಚನಾನಂದ ಶ್ರೀಗಳು ಪೀಠಾಧಿಪತಿಯಾಗಿ ಕೇವಲ ೨೦ ತಿಂಗಳಲ್ಲೆ ಅಭುತಪೂರ್ವ ಕಾರ್ಯ ನಿರ್ವಹಿಸಿದ್ದಾರೆ. ಪೀಠಕ್ಕೆ ಆಗಮಿಸಿದ ಬಳಿಕ ೪೦೦ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ವಿದೇಶಗಳಲ್ಲೂ ಪೀಠದ ಕೀರ್ತಿ ಮೊಳಗಿಸಿದ್ದಾರೆ. ಬೆಳ್ಳಿ ಬೆಡಗು ಹಾಗೂ ಪ್ರಥಮ ಬಾರಿಗೆ ಆಯೋಜಿಸಿರುವ ಹರ ಜಾತ್ರಾ ಮಹೋತ್ಸವದ ಸಂಗಮ ಸಮಯದಲ್ಲಿ ಸಮಾಜದ ಶ್ರೇಯಸ್ಸಿಗಾಗಿ ಹಲವು ವಿನೂತನ ಯೋಜನೆ ಆರಂಭಿಸುವ ಉದ್ದೇಶ ನಮ್ಮದಾಗಿದೆ ಎಂದರು.

ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು, ಲಕ್ಷಾಂತರ ಜನರಿಗೆ ಆಸನ, ಊಟ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ದ ಕುಡಿವ ನೀರು, ಮಜ್ಜಿಗೆ ವಿತರಣೆಯಿದೆ. ನಗರದ ಎಲ್ಲಾ ಕಲ್ಯಾಣ ಮಂಟಪಗಳಲ್ಲಿ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 8 ಎಲ್‌ಇಡಿ ವಾಲ್, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಠದ ಸುತ್ತಮುತ್ತಲ ಖಾಲಿ ಜಾಗಗಳಲ್ಲಿ ಸುಸಜ್ಜಿತ ವಾಹನ ನಿಲ್ದಾಣ ನಿರ್ಮಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ 100ಕ್ಕೂ ಅಧಿಕ ಸಿಸಿಟಿವಿ ಅಳವಡಿಸಲಾಗುವುದು. ಅಂಬುಲೆನ್ಸ್, ಬೆಂಕಿ ನಂದಿಸುವ ವಾಹನಗಳ ಸಜ್ಜುಗೊಳಸಲಾಗಿದೆ. ನಿರಂತರ ವಿದ್ಯುತ್‌ಗಾಗಿ ಪ್ರತ್ಯೇಕ ವಿದ್ಯುತ್ ಮಾರ್ಗ, ಪರಿವರ್ತಕ ಅಳವಡಿಸಲಾಗುತ್ತಿದೆ, ಮಾದ್ಯಮದವರಿಗೆ ಮೀಡಿಯಾ ಸೆಂಟರ್ ತೆರೆಯಲಾಗುತ್ತಿದೆ.

Conclusion:
ಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸಿ.ಆರ್.ಬಳ್ಳಾರಿ, ಧರ್ಮದರ್ಶಿಗಳಾದ ಬಿ.ಸಿ.ಉಮಾಪತಿ, ಚಂದ್ರಶೇಖರ ಪೂಜಾರ್, ಕರಿಬಸಪ್ಪ ಗುತ್ತೂರು ಮತ್ತಿತರರಿದ್ದರು.

ಬೈಟ್ - ಶ್ರೀ ವಚನಾನಂದ ಸ್ವಾಮೀಜಿ
ಪಂಚಮಸಾಲಿ ಪೀಠ ಹನಗವಾಡಿ

ಬೈಟ್ - ಸಿ.ಸಿ ಪಾಟೀಲ್ ಸಚಿವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.